ನದಿಜೋಡಣೆಯ ಕುರಿತು ಊಹಾಪೋಹ ಬೇಡ ಸಿದ್ದಾಪುರದಲ್ಲಿ ಭೀಮಣ್ಣ ನಾಯ್ಕ ಹೇಳಿಕೆ

ಆದ್ಯೊತ್ ಸುದ್ದಿನಿಧಿ:
ಉ.ಕ.ಜಿಲ್ಲೆಯ ಸಿದ್ದಾಪುರದಲ್ಲಿ ಶಾಸಕ ಭೀಮಣ್ಣ ನಾಯ್ಕ ಶನಿವಾರ ಪಟ್ಟಣದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ನಂತರ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.


ತಾಲ್ಲೂಕಿನಲ್ಲಿ ನದಿ ಜೋಡಣೆ ಯೋಜನೆಯ ಕುರಿತು ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.ಯೋಜನೆಯ ಕುರಿತು ಸಮಾಜದಲ್ಲಿ ವಾಸ್ತವ ಸಂಗತಿಗಿAತ ಊಹಾಪೋಹಗಳೆ ಹೆಚ್ಚಾಗಿ ಹರಡುತ್ತಿದೆ ಇಂತಹ ಊಹಾಪೋಹಗಳು ಬೇಡ. ಈಗಾಗಲೇ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಹಲವು ಕಡೆ ಸಭೆ ನಡೆದು ಶಿರಸಿಯಲ್ಲಿ ದೊಡ್ಡಮಟ್ಟದಜಾಗೃತಿ ಸಭೆಯನ್ನು ನಡೆಸಲಾಗಿದೆ.ಈ ಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಮತ್ತು ಸಂಬಂಧ ಪಟ್ಟ ಮಂತ್ರಿಗಳಿಗೆ ಮನವಿ ನೀಡಲಾಗಿದೆ.
ಯೋಜನೆಯ ದುಷ್ಪರಿಣಾಮಗಳ ಕುರಿತು ಕೇಂದ್ರದ ಗಮನ ಸೆಳೆಯುವ ಉದ್ದೇಶದಿಂದ ಸೋಮವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ,ಜಿಲ್ಲಾಉಸ್ತುವಾರಿ ಸಚೀವ ಮಂಕಾಳು ವೈದ್ಯ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಬೇಡ್ತಿ- ಅಘನಾಶಿನಿ ನದಿ ಕೊಳ್ಳ ರಕ್ಷಣಾ ಸಮಿತಿಯ ಅಧ್ಯಕ್ಷಅನಂತ್ ಹೆಗಡೆ ಅಶೀಸರ ಮತ್ತು ಸಮಿತಿಯ ಸದಸ್ಯರನ್ನು
ಒಳಗೊಂಡಂತೆ ನಮ್ಮ ತಂಡವು ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಯೋಜನೆ ಯಾವುದೇ ಕಾರಣಕ್ಕೂ ನಡೆಯಬಾರದು ಎಂಬ ಒತ್ತಾಯವನ್ನು ಮಾಡಲಿದ್ದೇವೆ

ನಮ್ಮ ಜಿಲ್ಲೆಯು ರಾಜ್ಯಕ್ಕೆ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ದೇಶದ ರಕ್ಷಣೆಗೆ,ದೇಶವನ್ನು ಬೆಳಗಲು ಸೇರಿದಂತೆ ಹಲವು ಯೋಜನೆಗಳಿಗೆ ಇಲ್ಲಿ ಅವಕಾಸ ನಿಡಲಾಗಿದೆ ಈಗ ಪುನಃ ಹೊಸ ಯೋಜನೆಗಳು ನಮಗೆ ಬೇಡ ಇದನ್ನು ನಾನು ಶಾಸಕನಾಗಿ ತೀವ್ರವಾಗಿ ವಿರೋಧಿಸುತ್ತೇನೆ. ಪದೇಪದೇ ಯೋಜನೆಗಳ ಹೆಸರಿನಲ್ಲಿ ಜಿಲ್ಲೆಯ ಜನರನ್ನು ನಿರಾಶ್ರಿತರನ್ನಾಗಿ ಮಾಡುವುದು ಸರಿಯಲ್ಲ. ಸ್ವರ್ಣವಲ್ಲಿ ಶ್ರೀಗಳ ಸಲಹೆಯಂತೆ ಪಕ್ಷಾತೀತವಾಗಿ ನದಿ ಜೋಡಣೆ ಯೋಜನೆಯು ನಡೆಯದಂತೆ ಶಕ್ತಿಮೀರಿ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.

ಅರಣ್ಯಅತಿಕ್ರಮಣದಾರರ ಹಲವು ಅರ್ಜಿಗಳು ತಿರಸ್ಕರೆಗೊಂಡಿದ್ದು, ಸುಪ್ರೀಂಕೋರ್ಟ್ ಅರ್ಜಿಗಳ ಪುನರ್ ಪರಿಶೀಲನೆಗೆ ಅವಕಾಶ ಕಲ್ಪಿಸಿದೆ. ಆದರೆ ಇದಕ್ಕೆ ನೀಡಲಾದ ಸಮಯ ಕಡಿಮೆ ಇದೆ ಈ ಸಮಯವನ್ನು ವಿಸ್ತರಿಸುವಂತೆ ಮನವಿ ಮಾಡುತ್ತೇನೆ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳು. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು, ಗ್ರಾಮ ಸಮಿತಿ ಎಲ್ಲರೂ ಜೊತೆಗೂಡಿ ಸರಿಯಾದ ರೀತಿಯಲ್ಲಿ ಜಿಪಿಎಸ್ ಮಾಡಿ ಸಾಗುವಳಿದಾರರಿಗೆ ಅನ್ಯಾಯವಾಗದ ರೀತಿಯಲ್ಲಿ ನ್ಯಾಯ ಒದಗಿಸಬೇಕು. ಈ ವಿಷಯದಲ್ಲಿಎಲ್ಲಿಯೂ ಉದಾಸೀನವಾಗಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷ ವಸಂತ ನಾಯ್ಕ ಮನಮನೆ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ ಜಿ ನಾಗರಾಜ, ಪ್ರಮುಖರಾದ ವಿ ಎನ್ ನಾಯ್ಕ ಬೇಡ್ಕಣಿ, ಸಿ ಆರ್ ನಾಯ್ಕ, ಅಣ್ಣಪ್ಪ ಶಿರಳಗಿ ಮುಂತಾದವರು ಇದ್ದರು.


ಮುಖ್ಯಮಂತ್ರಿ ಬದಲಾವಣೆ ಹಾಗೂ ಶಾಸಕರ ಬೆಂಬಲ ಯಾರಿಗೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಭೀಮಣ್ಣ ನಾಯ್ಕ, ನಮ್ಮದು ಹೈಕಮಾಂಡ ಪಕ್ಷವಾಗಿದ್ದು ನನ್ನ ಬೆಂಬಲ ಹೈಕಮಾಂಡಗೆ. ಹೈಕಮಾಂಡ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆಯೋ ಅವರಿಗೆ ನನ್ನ ಬೆಂಬಲವಿದೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಯಾರು ಏನು ಹೇಳಿದರು ಎನ್ನುವುದು ನನಗೆ ಬೇಡ ಪಕ್ಷದ ತೀರ್ಮಾನವೇ ನನ್ನದು.
ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ ಆದರೆ ನಮ್ಮ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನವೂ ಸರಿಯಾಗಿ ಆಗುತ್ತಿದ್ದು ಅಭಿವೃದ್ಧಿ ಕಾರ್ಯಗಳು ವೇಗದಿಂದ ನಡೆಯುತ್ತಿದೆ ಎಂದು ಹೇಳಿದರು.
—-

About the author

Adyot

Leave a Comment