ಆದ್ಯೊತ್ ಸುದ್ದಿನಿಧಿ;
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಲೇಖಕ ರಾಜು ಅಡಕಳ್ಳಿಯವರ “ಹಾಸ್ಯ ವಿಲಾಸ” ಮತ್ತು “ರಸಗುಲ್ಲಾ” ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಕೃತಿ ಲೋಕಾರ್ಪಣೆಗೊಳಿಸಿದ ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ಮಾತನಾಡಿ, ಪುಸ್ತಕ ಓದಿನಿಂದ ಮಾತ್ರ ಮನುಷ್ಯನ ಬುದ್ಧಿಶಕ್ತಿ ಮತ್ತು ಸೃಜನಶೀಲತೆ ವಿಕಸನಗೊಳ್ಳಲು ಸಾಧ್ಯ ಮೊಬೈಲ್‌ನಿಂದಾಗಿ ಮಕ್ಕಳಲ್ಲಿನ ಕಲ್ಪನಾ ಶಕ್ತಿ ಕುಂಠಿತಗೊಳ್ಳುತ್ತಿದೆ. ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಭಾಷಾ ಪ್ರಜ್ಞೆಯ ಕೊರತೆ ಕಾಣುತ್ತಿದೆ.ಭಾಷೆಯು ಕೇವಲ ಸಂವಹನವಷ್ಟೇ ಅಲ್ಲದೆ ಅದು ಸಂಸ್ಕೃತಿಯ ಮತ್ತು ಅರಿವಿನ ಸಂಕೇತವಾಗಿದೆ. ಹಾಸ್ಯವು ಬದುಕಿನ ಸಂಕೀರ್ಣತೆಗಳನ್ನು ನಗುವಿನ ಮೂಲಕ ಸರಳೀಕರಿಸುವ ಅದ್ಭುತ ಕಲೆ ಜ್ಞಾನದ ದೇವತೆ ಶಾರದೆ ಒಲಿಯಬೇಕಾದರೆ ಕೇವಲ ಮಾಹಿತಿಯಲ್ಲ, ಬದಲಾಗಿ ಪುಸ್ತಕಗಳ ಆಳವಾದ ಅಧ್ಯಯನ ಮತ್ತು ಉತ್ತಮ ಅಭಿರುಚಿ ಅತ್ಯಗತ್ಯ ಎಂದು ಹೇಳಿದರು.


ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಪುಸ್ತಕ ಓದಿನ ಮಹತ್ವ ಮತ್ತು ಕೌಟುಂಬಿಕ ಮೌಲ್ಯಗಳನ್ನು ರಕ್ಷಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯಿಂದಾಗಿ ಮನುಷ್ಯ ಸಂಬAಧಗಳು ದೂರವಾಗುತ್ತಿವೆ ಮತ್ತು ಓದುವ ಹವ್ಯಾಸವು ತೀವ್ರವಾಗಿ ಕುಂಠಿತಗೊಳ್ಳುತ್ತಿದೆ ಪಾಲಕರು ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಪುಸ್ತಕ ಓದುವ ಸಂಸ್ಕೃತಿಯನ್ನು ಧಾರೆ ಎರೆಯಬೇಕು; ಮನೆಯಲ್ಲಿ ಹಿರಿಯರು ಪುಸ್ತಕ ಹಿಡಿದರೆ ಮಾತ್ರ ಮಕ್ಕಳು ಅದನ್ನು ಅನುಸರಿಸಲು ಸಾಧ್ಯ ಸಾಹಿತ್ಯ ಕೃಷಿಯು ಅಡುಗೆ ಮಾಡುವಷ್ಟೇ ತಾಳ್ಮೆ ಮತ್ತು ಶ್ರಮದಾಯಕ ಕೆಲಸವಾಗಿದ್ದು, ಲೇಖಕರು ಪ್ರೀತಿಯಿಂದ ಸೃಜಿಸಿದ ಕೃತಿಗಳನ್ನು ಓದುಗರು ಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು.


ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ಲಲಿತ ಪ್ರಬಂಧಗಳು ಕೇವಲ ಹಾಸ್ಯಕ್ಕಷ್ಟೇ ಸೀಮಿತವಲ್ಲ, ಅವು ಬದುಕಿನ ಕಟು ಸತ್ಯಗಳನ್ನು ಅತ್ಯಂತ ಸರಳವಾಗಿ ಮತ್ತು ರಂಜನೀಯವಾಗಿ ವಿವರಿಸುವ ಶಕ್ತಿಯನ್ನು ಹೊಂದಿವೆ. ಸಾಹಿತ್ಯವು ಮನುಷ್ಯನ ಅಂತರAಗವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ ರಾಜು ಅಡಕಳ್ಳಿಯವರ ಬರಹಗಳು ಪ್ರತಿಯೊಬ್ಬರಿಗೂ ಆಪ್ತವಾಗುವಂತಿವೆ ಮತ್ತು ಅವು ಸಮಾಜದ ವಿವಿಧ ಮುಖಗಳನ್ನು ನಗು ಹಾಗೂ ವಿಡಂಬನೆಯ ಮೂಲಕ ತಿಳಿಸುತ್ತಿದೆ. ಇಸ್ರೇಲ್‌ನಂತಹ ಪುಟ್ಟ ದೇಶದಲ್ಲಿ ಓದಿನ ಸಂಸ್ಕೃತಿ ಜೀವನದ ಭಾಗವಾಗಿದೆ; ಕನ್ನಡದಲ್ಲೂ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಕೃತಿಗಳು ಬರಬೇಕು ಮತ್ತು ಓದುವ ಹವ್ಯಾಸ ಬೆಳೆಯಬೇಕು ಶಿಷ್ಟ ಭಾಷೆಯ ಬಿಗಿ ಹಿಡಿತಕ್ಕಿಂತ ಜನಪದ ಮತ್ತು ಆಡುಭಾಷೆಯ ಸೊಗಡು ಸಾಹಿತ್ಯವನ್ನು
ಹತ್ತಿರವಾಗಿಸುತ್ತದೆ ಎಂದರು.


ಲೇಖಕ ರಾಜು ಅಡಕಳ್ಳಿ ಮಾತನಾಡಿ,ಈ ಸಮಾರಂಭವು ಕೇವಲ ಪುಸ್ತಕ ಬಿಡುಗಡೆಯಲ್ಲ, ಬದಲಾಗಿ ಅದೊಂದು ‘ಪುಸ್ತಕ ಸಂಸ್ಕೃತಿ’ಯ ಭಾಗ,” ಎಂದು ಬಣ್ಣಿಸಿದರು. ಇಂದಿನ ಕ್ರಿಕೆಟ್, ಸಿನಿಮಾ ಮತ್ತು ಮೊಬೈಲ್ ಹಾವಳಿಯ ನಡುವೆ ಪುಸ್ತಕ ಓದುವ ಹವ್ಯಾಸಕ್ಕೆ ವಿಶೇಷ ಶ್ರದ್ಧೆ ಮತ್ತು ವ್ಯವಧಾನದ ಅಗತ್ಯವಿದೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಕಲಾವಿದ ಸತೀಶ ಯಲ್ಲಾಪುರರವರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನುವಿಕಾಸ ಸಂಸ್ಥೆಯ ಮುಖ್ಯಸ್ಥ ಗಣಪತಿ ಭಟ್ ಕರ್ಜಗಿ ವಹಿಸಿದ್ದರು. ರಾಘವೇಂದ್ರ ಬೆಟ್ಟಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ಗಾಯತ್ರಿ ರಾಘವೇಂದ್ರ ಪ್ರಾರ್ಥಿಸಿದರು. ಶ್ರೀಕಾಂತ ಹೆಗಡೆ ಸ್ವಾಗತಿಸಿದರು ಮತ್ತು ಎಮ್.ಜಿ. ಹೆಗಡೆ ವಂದಿಸಿದರು.
