ಮನರೇಗಾವನ್ನು ಮರು ಜಾರಿಗೊಳಿಸಲು ಆಗ್ರಹಿಸಿ ಆಂಜನೇಯ ನೇತೃತ್ವದಲ್ಲಿ ಪಾದಯಾತ್ರೆ

ಆದ್ಯೋತ್ ಸುದ್ದಿನಿಧಿ:
ವಿಬಿಜಿರಾಮಜಿಯು ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿ ಮನರೇಗಾ ಮರುಸ್ಥಾಪನೆಯಾಗಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಹೋರಾಟ ನಡೆಸುತ್ತಿದೆ. ಈ ಹೋರಾಟವನ್ನು ಬೆಂಬಲಿಸಿ ಚಿತ್ರದುರ್ಗದ ಚಿಕ್ಕಜಾಜೂರನಿಂದ ಮಾಜಿ ಸಚೀವ ಆಂಜನೇಯ ನೇತೃತ್ವದಲ್ಲಿ ಮನರೇಗಾ ಬಚಾವೋ ಪಾದಯಾತ್ರೆ ನಡೆಯಿತು.


ವಿಬಿಜಿರಾಮಜಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಮನರೇಗಾವನ್ನು ಮರು ಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ಪಂಚಾಯತ್ ಸ್ವಯಂ ಆಡಳಿತದ ಹಕ್ಕು ಮರುಸ್ಥಾಪನೆಯಾಗಬೇಕು, ದಿನಕ್ಕೆ 400 ರೂ.ಗಳ ಕನಿಷ್ಠ ವೇತನವನ್ನು ದೇಶಾದ್ಯಂತ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಪಾದಯಾತ್ರೆ ನಡೆಯಿತು.

ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ಎಸ್ಎಂಎಲ್ ಪ್ರವೀಣ್, ಗ್ಯಾರೆಂಟಿ ಉಪಾಧ್ಯಕ್ಷ ನಿರಂಜನ್ ನೇತ್ರಾನಂದ್ ಸರ್ಕಲ್ ವಿಜಯ್ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment