ಶಿರಸಿ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ನಿಂದ ಜಾತ್ರೆಯಲ್ಲಿ ಉಚಿತ ಅನ್ನಸಂತರ್ಪಣೆ

ಆದ್ಯೋತ್ ಸುದ್ದಿನಿಧಿ: ದಕ್ಷಿಣಭಾರತದ ಪ್ರಸಿದ್ದ ಜಾತ್ರೆಯಾದ ಶಿರಸಿ ಶ್ರೀಮಾರಿಕಾಂಬಾ ಜಾತ್ರೆಯು ವಿಜೃಂಭಣೆಯಿಂದ ನಡೆಯುತ್ತಿದ್ದು ಸ್ಥಳೀಯ ಶ್ರೀಅನ್ನಪೂರ್ಣೇಶ್ವರಿ
ಟ್ರಸ್ಟವತಿಯಿಂದ ಪ್ರತಿದಿನ ಅನ್ನಸಂತರ್ಪಣೆ ನಡೆಯುತ್ತಿದೆ.


ಶುಕ್ರವಾರ ಅನ್ನಸಂತರ್ಪಣೆ ಕಾರ್ಯಕ್ರಮವು ಟ್ರಸ್ಟ್ ನ ಸಹಭಾಗಿತ್ವದಲ್ಲಿ ಬೆಂಗಳೂರು ನರ್ಸಿಂಗ್ ಇಲಾಖೆಯ ಸಹನಿರ್ದೇಶಕಿ ಉಷಾ ಎಮ್ ಭಂಡಾರಿ ವಿದ್ಯಾ ಸಾಲಿಯಾನಾ, ಸಹೋದರಿ ಗೌರಿ ಭಂಡಾರಿ ಮತ್ತು ಬಂಧುಗಳೊಂದಿಗೆ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ಸಿಹಿ ಮತ್ತು ಅನ್ನ ಪ್ರಸಾದ ಬಡಿಸುವುದರೊಂದಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.


ಸುಮಾರು ಐದು ಸಾವಿರದಷ್ಟು ಜನ ವಿವಿಧೆಡೆಯಿಂದ ಆಗಮಿಸಿದ ಭಕ್ತರು,ಸಾರ್ವಜನಿಕರು ಭೋಜನ ಪ್ರಸಾದವನ್ನು ಸವಿದರು. ಕಾರ್ಯಕ್ರಮ ಕ್ಕೆ ಶಾಮಿಯಾನಾ ಮತ್ತು ಅಡುಗೆ ತಯಾರಿಸಲು ಬೇಕಾಗುವ ಪಾತ್ರೆಗಳನ್ನು ಊಟದ ಬಟ್ಟಲುಗಳನ್ನು ನೀಡಿ ಸಹಕರಿಸುತ್ತಿರುವ ಶ್ರೀ ರೇಣುಕಾಂಬಾ ಶಾಮಿಯಾನಾ ದ ಮಧುಕರ ನಾಯ್ಕ ಕಾನಗೋಡ ದಂಪತಿಗಳನ್ನು ಸನ್ಮಾನಿಸಲಾಯಿತು.

ಬಿಜೆಪಿ ಶಿರಸಿ ಮಂಡಳದ ಅಧ್ಯಕ್ಷ ಆನಂದ ಸಾಲೇರ ಮಿತ್ರರೊಂದಿಗೆ ಪಾಲ್ಗೊಂಡು ಭಕ್ತರಿಗೆ ಅನ್ನ ಪ್ರಸಾದ ಬಡಿಸಿದರು.ಟ್ರಸ್ಟಿನ ಪದಾಧಿಕಾರಿಗಳಾದ ಸಚಿನ್ ಕೋಡ್ಕಣಿ,ಶ್ರೀಪತಿ ನಾಯ್ಕ್,ಕೇಶವ ಪಾಲೇಕರ್,ಸತೀಶ ನಾಯ್ಕ್ ಮಧುರವಳ್ಳಿ,ಕಿರಣ್ ಮಡಿವಾಳ,ಉದಯ ಗಣಪತಿ ಶೆಟ್ಟಿ,ಶಂಕರ ಗುಡ್ಡದಮನೆ,ದಿನೇಶ ನಾಯ್ಕ್,ರಾಜೇಶ ಚಾವಡಿ,ರಾಜೇಶ ಮೈದುರ್ಗಿಮಠ,ಪ್ರಭಾ ಕಿರಣ್,ರೊಂದಿಗೆ ರಾಘು ಮರಾಠಿಕೊಪ್ಪ,ರಾಜು ಮರಾಠಿಕೊಪ್ಪ,ಎಂ ಎನ್ ಕೊಳಗಿ,ಸತ್ಯಸಾಯಿ ಸೇವಾ ಸಮಿತಿಯ ಸದಸ್ಯರು, ಸ್ವಯಂ ಸೇವೆ ಸಲ್ಲಿಸಲು ಬಂದ ಅನೇಕ ಆತ್ಮೀಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕಾರ ನೀಡಿದರು.

About the author

Adyot

Leave a Comment