ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಬಾಳೇಸರದ ಶ್ರೀ ಮಲ್ಲಿಕಾರ್ಜುನ ವ್ಯವಸಾಯ ಸೇವಾ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ನೂತನಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಹಕಾರಿ ತತ್ವವನ್ನು ಅಳವಡಿಸಿಕೊಂಡು ಆರ್ಥಿಕ ದುರ್ಬಲರಿಗೆ ಸಹಾಯ ಹಸ್ತ ನೀಡುವ ಉದ್ದೇಶದಿಂದ ನೂರುವರ್ಷದ ಹಿಂದೆಯೇ ಸಂಘವನ್ನು ಸ್ಥಾಪಿಸಿ ಅನುಕೂಲ ಕಲ್ಪಿಸಲು ಪ್ರಾರಂಭಿಸಿದ್ದು ಶ್ಲಾಘನೀಯ ವಾಗಿದೆ.ಸಂಘ ನಡೆಯುವಾಗ ವ್ಯವಸ್ಥೆಗಳು ಸರಿಯಾಗಿರಬೇಕು ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಗಳು ತಪ್ಪುದಾರಿಯಲ್ಲಿ ಸಾಗುತ್ತಿವೆ ಆರ್ಥಿಕ ಪಾರದರ್ಶಕತೆ, ಸದೃಢತೆ ಇಲ್ಲವಾಗುತ್ತಿದೆ ಇದು ಸಹಕಾರಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗಬಹುದು ಎಲೆಚುಕ್ಕಿ ಸೇರಿದಂತೆ ಹಲವು ರೋಗಗಳು ಅಡಿಕೆ ಬೆಳೆಗಾರರ ನ್ನು ಕಾಡುತ್ತಿದೆ ಬೆಳೆಯು ನಷ್ಟವಾಗಿ ಕಂಗಾಲಾಗಿದ್ದಾನೆ ಇಂತಹ ಸಮಯದಲ್ಲಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು ರೈತರ ನೆರವಿಗೆ ನಿಲ್ಲಬೇಕಾಗಿದೆ ಎಂದು ಹೇಳಿದರು.

ಶತಮಾನೋತ್ಸವದ ನೆನಪಿಗೆ ಹೊರತಂದಿರುವ ನಾಣ್ಯ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ,ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಮಾತನಾಡಿ,
ಅಡಿಕೆ ಬೆಳೆ ನಷ್ಟದಿಂದ ರೈತರು ಭಯಪಡುವ ಅವಶ್ಯಕತೆ ಇಲ್ಲ ಡಿಸಿಸಿ ಬ್ಯಾಂಕ್ ರೈತರ ನೆರವಿಗೆ ನಿಲ್ಲಲಿದೆ ಸಹಕಾರಿ ಕ್ಷೇತ್ರ ಹುಟ್ಟಿದ್ದು ಗದಗ ಜಿಲ್ಲೆಯಲ್ಲಾದರೂ ಅದು ಸಶಕ್ತವಾಗಿ ಬೆಳೆದಿರುವುದು ನಮ್ಮ ಜಿಲ್ಲೆಯಲ್ಲಿ ಇದಕ್ಕೆ ಕಾರಣ ಇಲ್ಲಿಯ ರೈತರು. ಈ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ ನಮಗೆ ಜನರ ಬದುಕು ಮುಖ್ಯ.ಸಂಘದ ಮೂಲಕ ವ್ಯವಹರಿಸಿದರೆ ಮಾತ್ರ ಲಾಭಗಳಿಸಲು ಸಾಧ್ಯ,ಸಂಘವನ್ನು ಗಟ್ಟಿಗೊಳಿಸಲು ಸಾಧ್ಯ.ಕೆಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ. ಇದಕ್ಕೆ ನಮ್ಮ ಹಿಂದಿನ ಬಹಳಷ್ಟು ಅಧ್ಯಕ್ಷರು, ನಿರ್ದೇಶಕರು ಕಾರಣ ಎಂದು ಹೇಳಿದರು


ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗಡೆ ಪ್ರಾಸ್ತಾವಿಕ ಮಾತನಾಡಿ,
ಸಂಘವು ಕಳೆದ ೧೦೦ ವರ್ಷದಲ್ಲಿ ಸಾಕಷ್ಟು ಏರಿಳಿತವನ್ನು ಕಂಡಿದೆ ಆದರೆ ಇಪ್ಪತ್ತು ವಷ೮ ದಿಂದ ನಿರಂತರ ವಾಗಿ ಲಾಭವನ್ನುಗಳಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ರುವ ನಮ್ಮ ಸಂಘವು ಗ್ರಾಮೀಣ ಜನರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಪೂರೈಸುವ ಮೂಲಕ ಜನಪ್ರಿಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆಬಾಳೇಸರ,ಶಿರಸಿ ಯ ಡೆವಲಪ್ ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಮಾತನಾಡಿದರು.


ಕೆಡಿಸಿಸಿ ಬ್ಯಾಂಕ್ ನಿರ್ದೇಶಕ
ರವಿ ಹೆಗಡೆ ಹುಳಗೋಡು ,ಮನುವಿಕಾಸದ ಗಣಪತಿ ಭಟ್ಟ,ಪತ್ರಕರ್ತ ಪ್ರವೀಣ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಹಿಂದೆ
ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದವರನ್ನು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
