ಕದಂಬರ ಬನವಾಸಿಯಲ್ಲಿ ಹೋರಿ ಓಡಿಸೋ ಸ್ಪರ್ಧೆ

ಆದ್ಯೋತ್ ಸುದ್ದಿನಿಧಿ
ಕದಂಬರ ಬನವಾಸಿಯಲ್ಲಿ ಸ್ಥಳೀಯ ರೈತರು ಹಾಗೂ ಕದಂಬ ಯುವಕ ಮಂಡಳಿ ರಾಜ್ಯಮಟ್ಟದ ಹೋರಿ ಓಡಿಸೋ ಸ್ಪರ್ಧೆ
ಆಯೋಜಿಸಿದ್ದರು.

ಗ್ರಾಮದಲ್ಲಿ ಈ ಬಾರಿ ಗ್ರಾಮಸ್ಥರು ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದರು. ಬೈಕ್, ಪ್ರಿಡ್ಜ್ ಸೇರಿದಂತೆ ವಿವಿಧ ಬಗೆಯ ಬಹುಮಾನಗಳನ್ನು ಸ್ಪರ್ಧೆಗೆ ಇಟ್ಟಿದ್ದರು. ಹಾವೇರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ನೂರಾರು ಸಂಖ್ಯೆಯ ಹೋರಿಗಳು ಮತ್ತು ಸಾವಿರಾರು ಸಂಖ್ಯೆಯ ಜನರು ಹೋರಿ ಹಬ್ಬ ವೀಕ್ಷಣೆಗೆ ಆಗಮಿಸಿದ್ದರು. ದೀಪಾವಳಿ ಹಾಗೂ ಸಂಕ್ರಾಂತಿ ಹಬ್ಬದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವ ಪಡೆದಿದುಕೊಳ್ಳತ್ತೆ.

ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು
ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದ ಭಾರೀ ಸಂಖ್ಯೆಯಲ್ಲಿ ಹೋರಿ ಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು. ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ರಾಣೆಬೆನ್ನೂರು ಡಾನ್‌, ಬಾರಂಗಿ ಮಹಾವೀರ, ಹಂಸಭಾವಿಯ ಕರ್ನಾಟಕ ನಂದಿ, ಬೆಣ್ಣಿಗೇರಿಯ ಮಿಡಿನಾಗ, ತಡಸನಹಳ್ಳಿ
ಡಾನ್‌, ಶಿಕಾರಿಪುರ ಗಾಂಧಿನಗರದ ಸೂಪರ್‌, ಯಲವಳ್ಳಿ ಪಾಳೆಗಾರ, ಕುಪ್ಪಗಡ್ಡೆ ಈಡಿಗರ ಹುಲಿ ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು.

ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು. ಹೋರಿ ಹಬ್ಬದ ಆಯೋಜಿಸಿದ್ದ ಬನವಾಸಿ ಗ್ರಾಮಸ್ಥರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ
ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.

About the author

Adyot

Leave a Comment