ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿ ಮೇ- 4 ರಿಂದ ಮೇ 9 ರವರೆಗೆ ಶಂಕರ ಪಂಚಮಿ ಉತ್ಸವ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಭಾನ್ಕುಳಿಮಠದ ಶ್ರೀ ರಾಮದೇವಮಠದಲ್ಲಿ ಮೇ-4 ರಿಂದ ಮೇ-9 ರವರೆಗೆ ಶಂಕರಪಂಚಮಿ ಉತ್ಸವ ನಡೆಯಲಿದೆ.

ಕಳೆದ ಎರಡುವರ್ಷದಿಂದ ಕೊವಿಡ್ ಕಾರಣದಿಂದ ಸಾಂಕೇತಿಕವಾಗಿ,ಧಾರ್ಮಿಕ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದ್ದ ಶಂಕರಪಂಚಮಿ ಉತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ರವಿವಾರ
ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರು ಗೋಕರ್ಣದ ಅಶೋಕೆಯಲ್ಲಿ ಲೋಕಾರ್ಪಣೆಗೊಳಿಸಿದರು.

ಶಂಕರಪಂಚಮೀ ಉತ್ಸವ ಸಮೀತಿ ಅಧ್ಯಕ್ಷ ಮಂಜುನಾಥ ಭಟ್ಟ ಕೌಲ್ಮನೆ, ಮಹಾಮಂಡಲದ ಅಧ್ಯಕ್ಷ ಆರ್ ಎಸ್ ಹೆಗಡೆ ಹರಗಿ, ಉಪಾಧ್ಯಕ್ಷೆ ಶೈಲಜಾ ಕೋಂಕೋಡಿ, ಪ್ರಧಾನ ಕಾರ್ಯದರ್ಶಿ ನಾಗಾರಾಜ ಭಟ್ ಪೆದಮಲೆ, ಸೇವಾ ಪ್ರಧಾನ ಅರವಿಂದ ಭಟ್ಟ ಧರ್ಭೆ ಸಿದ್ದಾಪುರ ಮಂಡಲದ ಅಧ್ಯಕ್ಷ ಮಹೇಶ ಭಟ್ ಚಟ್ನಳ್ಳಿ, ಸಂಘಟನಾ ಕಾರ್ಯದರ್ಶಿ ಚಂದನ
ಶಾಸ್ತ್ರಿ ಮಗೇಗಾರ, ಸವಾರಿ ವ್ಯವಸ್ಥಾಪಕರಾದ
ಸಂತೋಷ ಹೆಗಡೆ ಮಂಗಳೂರು ಹಾಗೂ ಉಪ್ಪಿನಂಗಡಿ ಮಂಡಲದ ಪದಾಧಿಕಾರಿಗಳು ಹಾಗೂ ಶ್ರೀಪರಿವಾರದ ಸದಸ್ಯರು ಉಪಸ್ಥಿತರಿದ್ದರು.

About the author

Adyot

Leave a Comment