ಸೇನೆಯಿಂದ ನಿವೃತ್ತರಾದ ವಿನಾಯಕ ಮಡಿವಾಳ

ಆದ್ಯೋತ್ ಸುದ್ದಿನಿಧಿ:
ಕಳೆದ 17 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಹೆರವಳ್ಳಿಯ ಲಾನ್ಸ್ ನಾಯಕ್ ವಿನಾಯಕ ಮಡಿವಾಳ ಸೇನೆಯಿಂದ ನಿವೃತ್ತರಾಗಿ ಏ.-3 ರಂದು ಊರಿಗೆ ಮರಳಲಿದ್ದಾರೆ.

2005ರಲ್ಲಿ ಸೇನೆಯ ಸೇವೆಗೆ ಸೇರಿದ ವಿನಾಯಕ ಆಂದ್ರಪ್ರದೇಶದ ಸಿಕಂದರಾಬಾದ್,ಜಮ್ಮು-ಕಾಶ್ಮೀರದ ಪೂಂಚ್,ಸಿಯಾಚಿನ ಗ್ಲಿಸಿಯಾರ್,ಜಾರ್ಖಂಡದ ರಾಂಚಿ,
ರಾಜಸ್ಥಾನದ ಅಲ್ವಾರ್,ಅಸ್ಸಾಂ ಮಿಸ್ಸಮಾರಿ,ಅರುಣಾಚಲ ಪ್ರದೇಶದ ತವಾಂಗ ಮುಂತಾದ ದೇಶದ ಆಯಕಟ್ಟಿನ ಗಡಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ‌

2007 ರಲ್ಲಿ ನಡೆದ ವಿಶ್ವ ಸೇನಾ ಕ್ರೀಡಾಕೂಟದ ಆಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2018 ರಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ ಇವರು ಭಾರತೀಯ ಸೇನೆಯ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಅವರನ್ನು ಭೇಟಿಯಾದ ಉತ್ತರ ಕನ್ನಡ ಜಿಲ್ಲೆಯ ಕೆಲವೇ
ಸೈನಿಕರಲ್ಲಿ ಒಬ್ಬರು.ಸೇನೆಗೆ ಸೇರ್ಪಡೆಯಾದ ಹೊಸ ಸೈನಿಕರಿಗೆ ತರಬೇತಿ ನೀಡುವಲ್ಲಿ ಸಹ ವಿಶೇಷ ಪಾತ್ರ ವಹಿಸಿದ್ದರು. ಅವರು ಮಾರ್ಚ್ 31-2022 ರಂದು ನಿವೃತ್ತಿಹೊಂದಿ ಹುಟ್ಟೂರಿಗೆ ಆಗಮಿಸುತ್ತಿದ್ದಾರೆ.

About the author

Adyot

Leave a Comment