ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಯುಗಾದಿ ಉತ್ಸವ,ಶೋಭಾಯಾತ್ರೆ ಶಿಗ್ಗಾಂವ ಶ್ರೀವಿರಕ್ತಮಠದ ಶ್ರೀಗದಿಗೇಶ್ವರ ಸ್ವಾಮೀಜಿ ಹಾಗೂ ಸಿದ್ದಾಪುರ ಶಿರಳಗಿ ಶ್ರ್ರೀಚೈತನ್ಯ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಹೊಸಪೇಟೆಯ ಹನುಮಂತ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ವಿವಿಧ ರೀತಿಯ ಸ್ತಭ್ದಚಿತ್ರಗಳು ಚಂಡೆವಾದನ,ಡೊಳ್ಳು ಕುಣಿತ,ಬೇಡರವೇಷ ಗಮನಸೆಳೆಯಿತು.2000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಶೋಭಾಯಾತ್ರೆಯು ದೇವಸ್ಥಾನಬೀದಿ,ಬಸವಣ್ಣಗಲ್ಲಿ,ಹೊಸೂರು ಬಂಕೇಶ್ವರ ವೃತ್ತ,ಭಗತ್ ಸಿಂಗ್ ವೃತ್ತ,ರಾಜಮಾರ್ಗ,ತಿಮ್ಮಪ್ಪ ನಾಯಕ ವೃತ್ತದ ಮೂಲಕ ಐತಿಹಾಸಿಕ ನೆಹರೂ ಮೈದಾನವನ್ನು ಸೇರಿತು.
ನೆಹರೂ ಮೈದಾನದ ಶ್ರೀ ಶಂಕರಾಚಾರ್ಯ ವೇದಿಕೆಯಲ್ಲಿ ನಡೆದ
ಧರ್ಮಸಭೆಯಲ್ಲಿ ಮಾತನಾಡಿದ ಕಾರ್ಕಳದ ಅಂಕಣಕಾರ ಆದರ್ಶ ಗೋಖಲೆ, ಕೇವಲ 6 ದಿವಸಗಳ ತಯಾರಿಯಲ್ಲಿ ಆರು ದಿನಗಳ ಅಂತರದಲ್ಲಿ ಇಷ್ಟೊಂದು ವಿಜ್ರಂಭಣೆಯಿಂದ ಯುಗಾದಿ ಹಬ್ಬವನ್ನು ಸಿದ್ದಾಪುರ ಜನತೆ ಆಚರಿಸುತ್ತಿದ್ದಾರೆ ಸಿದ್ದಾಪುರದ ಪ್ರತಿಯೊಬ್ಬ ಹಿಂದೂ ಕೂಡ ಜಾಗೃತರಾಗಲು ಕೇವಲ 6 ದಿನದಲ್ಲಿ ಜಾಗೃತರಾಗಲು ಸಾಧ್ಯ ಎಂದಾದರೆ ಯುಗಾದಿ ಹಬ್ಬ ಸಿದ್ದಾಪುರದ ಉತ್ಸವವಾಗಿ ಪುರದ ಉತ್ಸವವಾಗಿ ಆಚರಣೆ ಮಾಡಲು ನಮಗೆ ಸಾಧ್ಯವಾಗುತ್ತದೆ ಎನ್ನುವುದಾದರೆ,
ಒಂದಲ್ಲ ಒಂದು ದಿನ ಕ್ಷಣಗಣನೆ, ದಿನಗಣನೆ ಅಥವಾ ತಿಂಗಳುಗಳ ಗಣನೆ ಒಳಗಡೆಗೆ ದೆಹಲಿಯ ವಿರಾಜಮಾನವಾದ ವೈಭವದ ವೇದಿಕೆಯಲ್ಲಿ ಕೇಸರಿ ವಸ್ತ್ರವನ್ನು ಧರಿಸಿದ ಸಂತನೊಬ್ಬನ ಕೈಯಿಂದ ಸಿದ್ದಾಪುರದಲ್ಲಿ ಹಾರಾಡುತ್ತಿರುವಂತಹ ಭಗವದ್ವಜ ದೆಹಲಿಯಲ್ಲೂ ಹಾರಾಡುವುದನ್ನು ನೋಡುವ ಸೌಭಾಗ್ಯ ಸಿದ್ದಾಪುರದ ಜನತೆಗೆ ನಮಗೆಲ್ಲರಿಗೂ ಸಿಗಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ
ಪ್ರತಿಯೊಂದು ಹಬ್ಬದ ಹಿಂದೆ ಒಂದು ಕಾರಣವಿದೆ ಯಾವುದೇ ಹಬ್ಬ ಮೋಜಿಗಾಗಿ ಅಲ್ಲ ಪ್ರತಿಯೊಂದು ಹಬ್ಬವೂ ಕೂಡ ಹಿಂದೂಗಳಿಗೆ ಸಂಸ್ಕಾರವನ್ನು ಕೊಡುವುದಕ್ಕೆ ಭಾರತೀಯ ಪರಂಪರೆಯನ್ನು ಅರಿಯುವುದಕ್ಕೆ ವ್ಯಕ್ತಿಯ ಮನಸ್ಸಿನಲ್ಲಿ ಇರುವಂತಹ ವಾನರತ್ವ ದೂರ ಮಾಡಿ ನರತ್ವವನ್ನು ತುಂಬಿ ನರನಲ್ಲಿ ನಾರಾಯಣತ್ವವನ್ನು ಜಾಗೃತಗೊಳಿಸುವುದಕ್ಕೆ ಮಾನವನನ್ನು ಮಾಧವ ನನ್ನಾಗಿ ಮಾಡುವುದಕ್ಕೆ ಹಬ್ಬಗಳು ಪ್ರೇರಣೆಯಾಗಿವೆ.
ಹೈಕೋರ್ಟ್ ಅಲ್ಲ ಸುಪ್ರೀಂಕೋರ್ಟ್ ಆದೇಶ ಮಾಡಿದರು ನಾವು ಅದನ್ನು ಜಾರಿಗೆ ತರಲು ಒಪ್ಪುವುದಿಲ್ಲ ಅಂತ ಅನ್ನುವ ಮನೋಭಾವ ಇವತ್ತು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡುತ್ತದೆ ಅಂದರೆ ಅದರ ಹಿಂದಿನ ಶಕ್ತಿಗಳು ಎಷ್ಟು ಪ್ರಬಲವಾಗಿರಬೇಕು. ದೇಶದ ಸಂಸ್ಕೃತಿಯನ್ನು ಬಗ್ಗುಬಡಿಯುವಂತಹ ಯೋಚನೆಯನ್ನು ಹೇಗೆ ಅಂತರರಾಷ್ಟ್ರೀಯಮಟ್ಟದಲ್ಲಿ ಹರಿಬಿಟ್ಟಿದ್ದಾರೆ ಎಂದು ಒಮ್ಮೆ ಆಲೋಚಿಸಿದರೆ ಸುಲಭವಾಗಿ ಉತ್ತರವನ್ನು ಕಂಡುಕೊಳ್ಳಬಹುದು
ನಾವು ಕೈಗೆ ಬಳೆ ಧರಿಸ ಬಾರದು ,ಹಣಿಗೆ ಕುಂಕುಮ ಹಚ್ಚುವುದನ್ನು ನಿಷೇಧ ಮಾಡುವ ಶಾಲೆಗಳಿಗೆ ಕೇವಲ ಇಂಗ್ಲಿಷ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಮಕ್ಕಳನ್ನು ಕಳಿಸುತ್ತೇವೆ . ಇದರಿಂದ ಇಂದಿನ ದಿನಮಾನಗಳಲ್ಲಿ ನಮ್ಮ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಏನು ತಿಳಿಯದಂತಾಗಿದೆ ಯಾರು ದೇಶಕ್ಕೆ ಬಾಂಬ್ ಇಡ್ತಾರೆ, ಯಾರು ಹಿಂದೂಗಳು ಆರ್ಥಿಕವಾಗಿ ಕುಗ್ಗಿಸಲು ನೋಡುತ್ತಾರೆ, ಯಾರು ಹಿಂದುಗಳನ್ನು ಕೊಲೆ ಮಾಡುತ್ತಾರೆ, ಹಿಂದೂಗಳ ವಿರುದ್ಧ ಹೊರಡುತ್ತಾರೆ, ಇವರೆಲ್ಲರ ಜೊತೆ ವ್ಯವಹಾರವನ್ನು ನಿಲ್ಲಿಸಿಬಿಡಿ ಹಿಂದುಗಳ ಜೊತೆ ಮಾತ್ರ ವ್ಯವಹಾರ ಮಾಡಿ ಎಂದು ಅವರು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಕೃಷಿ ಕೆಲಸ ಮಾಡುವಾಗ ಅದರಲ್ಲಿ ಕಳೆ ಎನ್ನುವಂಥ ಅನುಪಯುಕ್ತ ಗಿಡಗಳು ಇರುತ್ತವೆ. ಆ ಕಳೆಯನ್ನು ತೆಗೆದಾಗಲೇ ನಮಗೆ ಸಮೃದ್ಧವಾದ ಫಲ ಸಿಗುತ್ತದೆ ಅದೇ ರೀತಿ ನಮ್ಮ ಮನಸ್ಸಿನಲ್ಲಿರುವ ಕಳೆಯನ್ನು ನಾವು ತೊಳೆಯಬೇಕು
ಈ ಯುಗಾದಿ ಹಬ್ಬ ನಮಗೆಲ್ಲರಿಗೂ ಸಿಹಿಯನ್ನು ನೀಡಲಿ ಹಿಂದೂ ಧರ್ಮ ಎಲ್ಲರೂ ಸುಖವಾಗಿರಿ ಎಂಬ ಉದಾತ್ತ ಮನೋಭಾವ ಹೊಂದಿದ್ದು, ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ಇಂದು ಕೆಲವರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹೊರಬಂದಿಲ್ಲ. ಯಾರನ್ನೂ ಮೆಚ್ಚಿಸಲು, ಯಾವುದೋ ಲಾಭ ಪಡೆಯಲು, ಅಗ್ಗದ ಪ್ರಚಾರ ಪಡೆಯಲು ಇಂದು ಹಿಂದೂ ಧರ್ಮವನ್ನು ಹೀಗಳೆಯುವ ಕೆಲಸ ಮಾಡುತ್ತಿದ್ದು ಇಂತಹವರಿಗೆ ಉತ್ತರ ಕೊಡಲು ನಾವು ಸಿದ್ಧರಿಬೇಕು. ಜೀವನದಲ್ಲಿ ಸಿಹಿ ಹಾಗೂ ಕಹಿ ಸಮಾನವಾಗಿ ಸ್ವೀಕರಿಸಲು ಸಿದ್ದರಿರಬೇಕು ಎಂದರು
ಇನ್ನೋರ್ವ ಅತಿಥಿ ಡಾ.ಶಶಿಭೂಷಣ ಹೆಗಡೆ ಮಾತನಾಡಿ,ಐತಿಹಾಸಿಕ ಸನಾತನ ಧರ್ಮವನ್ನು ನಾಶಪಡಿಸಲು ಯಾವುದೇ ಬಾಹ್ಯ ಶಕ್ತಿಗಳಿಗೆ ಸಾಧ್ಯವಿಲ್ಲ ನಾವು ನಮ್ಮ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ದೃಢಮನಸ್ಕರಾಗಿರಬೇಕು ಎಂದರು.
ಯುಗಾದಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ,ಇಂದಿನ ದಿನಗಳಲ್ಲಿ ಹಿಂದೂಗಳ ಜನಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಹಿಂದುಗಳಾದ ನಾವು ಜಾತಿ ಸಮಸ್ಯೆಯಿಂದ ತೊಳಲಾಡುತ್ತಿದ್ದೇವೆ. ಸಾಕಷ್ಟು ಜನಾಂಗಗಳು ಸೇರಿ ಹಿಂದೂ ಧರ್ಮವಾಗಿದೆ ಹಾಗಾಗಿ ನಾವು ಜಾತಿ ವ್ಯವಸ್ಥೆಯ ಮೇಲೆ ಹೋಗುತ್ತಿದ್ದೇವೆ ನಾವೆಲ್ಲರೂ ಒಂದೇ ಎನ್ನುವ ಭಾವನೆ ಕಡಿಮೆಯಾಗುತ್ತಿದೆ ಇದರಿಂದಾಗಿ ಬೇರೆ ಬೇರೆ ಧರ್ಮದವರು ಬೇರೆ-ಬೇರೆ ರೀತಿಯ ಪ್ರಯೋಜನವನ್ನು ಪಡೆದು ಕೊಂಡು ನಮ್ಮ ಜನಸಂಖ್ಯೆಯನ್ನು ಹೇಗೆ ಕಡಿಮೆ ಮಾಡಬಹುದು ಮತ್ತು ಅವರ ಸಂಖ್ಯೆಯನ್ನು ಹೇಗೆ ಎರಿಸಿಕೊಳ್ಳಬಹುದು ಎಂಬ ವಿಚಾರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಒತ್ತಡ ಹಾಗೂ ವೋಟ್ ಬ್ಯಾಂಕ್ ರಾಜಕಾರಣದಿಂದ ತಮ್ಮ ಕೆಲಸಗಳನ್ನು ಹೇಗೆ ಸಾಧಿಸಿ ಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ
ಹಿಂದುಗಳಲ್ಲಿ ಜಾಗೃತಿಯಾಗಬೇಕು ಹಿಂದೂ ಧರ್ಮದ ವಿಚಾರ ನಮಗೆಲ್ಲರಿಗೂ ಗೊತ್ತಿರಬೇಕು ನಾವೆಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿ ಮೂಡಬೇಕು ಎನ್ನುವ ಭಾವನೆಯಿಂದ ಇಂಧನ ಯುಗಾದಿ ಉತ್ಸವ ಹಾಗೂ ಶೋಭಾಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.