ಶಿರಸಿಯಲ್ಲಿ ಜನಸಾಗರದ ನಡುವೆ ನಡೆದ ಯುಗಾದಿ ಉತ್ಸವ,ಶೋಭಾಯಾತ್ರೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡದ ಶಿರಸಿಯಲ್ಲಿ ಶನಿವಾರ ಜನಸಾಗರದ ನಡುವೆ ವೈಭವದಿಂದ ಯುಗಾದಿ ಉತ್ಸವ,ಶೋಭಾಯಾತ್ರೆ ನಡೆಯಿತು.

ಯುಗಾದಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ,ಯುಗಾದಿ ಉತ್ಸವ ಸಾರ್ವತ್ರಿಕವಾಗಿ ಆಚರಿಸಬೇಕು ಇದು ನಮ್ಮ ಸನಾತನ ಧರ್ಮದ ವರ್ಷಾಚರಣೆಯ ಸಂದರ್ಭ.ಡಿ.31ರಂದು ಆಚರಿಸುವ ನೂತನ ವರ್ಷಾಚರಣೆ ವಿಕೃತಿಯಿಂದ ಕೂಡಿದ್ದು ಹಿಂದೂ ಸಮಾಜ ಇದರಿಂದ ಹೊರಬರಬೇಕಾಗಿದೆ. ಆ ಸಮಯದಲ್ಲಿ ಯುವಕರಲ್ಲಿ ಇರುವ ಉತ್ಸಾಹ ಯುಗಾದಿ ಆಚರಣೆಯಲ್ಲಿ ಇಲ್ಲವಾಗಿರುವುದು ಸರಿಯಲ್ಲ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸರಕಾರ ಶಾಲಾ ಪಠ್ಯ-ಪುಸ್ತಕದಲ್ಲಿ ಭಗವದ್ಗೀತೆಯನ್ನು ಸೇರಿಸಲು ನಿರ್ಧರಿಸಿರುವ ಸರಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದು ಹೇಳಿದರು.

ಮುಂಡಗೋಡು ಅತ್ತಿವೇರಿ ಬಸವಧಾಮದ ಶ್ರೀ ಬಸವೇಶ್ವರಿ ಮಾತಾಜಿ ಮಾತನಾಡಿ, ಈ ದೇಶಕ್ಕೆ ಜಾತಿಯತೆ ಎನ್ನುವುದು ಒಂದು ರೋಗವಿದ್ದ ಹಾಗೆ. ಜಾತಿ ಬೇಧ ದೇಶಕ್ಕೆ ಅಂಟಿದ ಕ್ಯಾನ್ಸರರೋಗವಿದ್ದ ಹಾಗೆ, ಧರ್ಮ ಎನ್ನುವುದು ಎಲ್ಲರನ್ನೂ ಬೆಸೆಯುವ ಕೊಂಡಿಯಾಗಬೇಕು ಹಿಂದುಗಳಲ್ಲಿರುವ ಅನೇಕ ಲೋಪದೋಷವನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಆರ್.ಎಸ್.ಎಸ್.ಪ್ರಚಾರಕ ಮಂಗಳೂರಿನ ಜಯರಾಮ ಬೊಳ್ಳಾಜಿ ಮಾತನಾಡಿ,ಹಿಂದೂತ್ವದ ಉಸಿರಿಗಾಗಿ ಇರುವ ಕಾರ್ಯಕ್ರಮ ಯುಗಾದಿ ಉತ್ಸವವಾಗಿದೆ.ಇಂದು ಡಾ// ಕೇಶವ ಹೆಡಗೆವಾರ ರವರ ಹುಟ್ಟಿದ ದಿನವಾಗಿದೆ. ಅವರು ಹಿಂದೂ ಧರ್ಮವನ್ನು ಉಳಿಸಲು ಶ್ರಮಿಸಿದರು .ಅವರಿರದಿದ್ದಲ್ಲಿ ನಾವು ತಲೆಯ ಮೇಲೆ ಟೋಪಿ ಹಾಕಬೇಕಿತ್ತು.ನೂರಾರು ವರ್ಷದ ಗುಲಾಮಗಿರಿಯ ನಂತರ ಹಿಂದೂ ಸಮಾಜ ಅರ್ಥಮಾಡಿಕೊಳ್ಳುತ್ತಿದೆ.ಹಿಂದೂ ಸಮಾಜದ ರಕ್ಷಣೆಗೆ ನಮ್ಮ. ಕೊಡುಗೆ ನೀಡಬೇಕು. ಅಸ್ಪಶ್ಯತೆ ಇರುವುದರಿಂದ ಕ್ರೈಸ್ತ ಸಮಾಜದವರಿಗೆ ಮತಾಂತರ ಮಾಡಲು ಅನೂಕೂಲವಾಗಿದೆ.ಆದ್ದರಿಂದ ಸಮಾಜದಿಂದ ಅಸ್ಪೃಶ್ಯತೆ ನಿವಾರಣೆ ಆಗಬೇಕು ಎಂದರು

ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಕೃಷ್ಣಾನಂದ ಕೊಡಿಯಾ ಮಾತನಾಡಿ,24 ವರ್ಷದ ಯುಗಾದಿ ಉತ್ಸವ ಆಚರಿಸುತ್ತಿದ್ದೆವೆ. ಇದರ ಉದ್ದೇಶ ಹಿಂದೂ ಸಮಾಜದ ಸಂಘಟನೆಯಾಗಬೇಕು. ಹಿಂದೂಗಳ ರಕ್ಷಣೆಯಾಗಬೇಕು. ಹಿಂದೂಗಳಲ್ಲಿ ಸಾಮರಸ್ಯ ಇರಲು ಇಂತಹ ಉತ್ಸವ ಹೆಚ್ಚಾಗ ಆಗಬೇಕು. ಭಾರತದ ಮೇಲೆ ಚೀನಾ ಪಾಕಿಸ್ಥಾನ ಯುದ್ದ ಮಾಡಿದರೆ ನಮಗೆ ಹೋಗಲು ಬೇರೆ ಹಿಂದೂ ದೇಶ ಇಲ್ಲ. ನಮ್ಮ ದೇಶ ಉಳಿಸಿಕೊಳ್ಳಬೇಕು‌ ಎಂದು ಹೇಳಿದರು.

ನಂತರ ನಡೆದ ಶೋಭಾಯಾತ್ರೆಯಲ್ಲಿ ಸುಮಾರು 5000 ಜನರು ಭಾಗವಹಿಸಿದ್ದರು 19 ಸ್ಥಬ್ಧಚಿತ್ರಗಳು ಭಾಗವಹಿಸಿದ್ದವು.

About the author

Adyot

Leave a Comment