ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಸಿದ್ದಾಪುರ ಹೊಸಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀರಾಮ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನೆ ಹಾಗೂ ಅಷ್ಟಬಂಧ ಸಮಾರೋಪದ ಅಂಗವಾಗಿ ಧರ್ಮಸಭೆ ನಡೆಯಿತು.
ಧರ್ಮಸಭೆಯ ದಿವ್ಯಸಾನ್ನಿಧ್ಯವಹಿಸಿದ್ದ ಶಿರಳಗಿ ಶ್ರೀಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿ,ಮನೆಗೊಂದು ದೇವರಸ್ಥಳ ಹಾಗೂ ಊರಿಗೊಂದು ದೇವಸ್ಥಾನ ಇದ್ದರೆ ಅಲ್ಲಿ ಶಾಂತಿ,ಸಮೃದ್ಧಿ ನೆಲೆಸುತ್ತದೆ. ಜಗತ್ತು ಒಂದು ಕುಟುಂಬವಾದರೆ ನಮ್ಮ ಭಾರತ ದೇಶ ಅದರ ದೇವಾಲಯವಾಗಿದೆ ಪಾಶ್ಚಿಮಾತ್ಯ ದೇಶಗಳು ಸಂಪತ್ತಿನಲ್ಲಿ ಶ್ರೀಮಂತರಾಗಿರಬಹುದು. ಆದರೆ ಭಾರತೀಯರು ಸಂಸ್ಕøತಿಯಲ್ಲಿ ಮನಃಶಾಂತಿಯಲ್ಲಿ ನಾವು ಎಲ್ಲರಿಗಿಂತ ಶ್ರೀಮಂತರು.ನಮ್ಮ ರಾಮಾಯಣ ಮಹಾಭಾರತದಂತಹ ಗ್ರಂಥಗಳು ನಮ್ಮ ಜ್ಞಾನಭಂಡಾರವಾಗಿದೆ.ಇವುಗಳ ಶ್ರವಣದಿಂದ ನಮ್ಮಲ್ಲಿ ಸದ್ಭಾವನೆ ಬೆಳೆಯುತ್ತದೆ. ನಮ್ಮ ಮುಂದಿನ ಪೀಳಿಗೆಯವರು ಒಳ್ಳೆಯ ಸಂಸ್ಕøತಿ,ಮೌಲ್ಯಾಧಾರಿತ ಶಿಕ್ಷಣ ದೊರೆತಾಗ ಮಾತ್ರ ಭಾರತದ ಭಾರತೀಯತೆ ಉಳಿಯುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿದ್ದ ಕೋಟೆ ಆಂಜನೇಯ ದೇವಸ್ಥಾನದ ಅಧ್ಯಕ್ಷ ವಿ.ಎನ್.ನಾಯ್ಕ ಮಾತನಾಡಿ,ಊರಿನ ಜನರು ಅನ್ಯೋನ್ಯವಾಗಿದ್ದರೆ ಎಂತಹ ಮಹತ್ಕಾರ್ಯವನ್ನಾದರೂ ಸಾಧಿಸಬಹುದು ಎಂಬುದನ್ನು ಪುಟ್ಟ ಊರಿನ ಈ ಜನರು ತೋರಿಸಿಕೊಟ್ಟಿದ್ದಾರೆ. ದೇವಾಲಯಗಳು ಮನಃಶಾಂತಿಯ ಉತ್ತಮ ಸಂಸ್ಕಾರದ ಕೇಂದ್ರವಾಗಬೇಕು ಹಾಗಿದ್ದಲ್ಲಿ ಊರಿನ ಜನರು ಸಂಸ್ಕಾರವಂತರಾಗುತ್ತಾರೆ. ಭಗವಂತನ ಇಚ್ಚೆಯಂತೆ ಶ್ರೀರಾಮ ದೇವಾಲಯ ನಿರ್ಮಾಣವಾಗಿದೆ ಶ್ರೀರಾಮನಂತೆ ಆದರ್ಶ ಬದುಕನ್ನು ನಡೆಸುವ ಸಂಕಲ್ಪವನ್ನು ಮಾಡಬೇಕು ಎಂದು ಹೇಳಿದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹರೀಸ ನಾಯ್ಕ,ಕಟ್ಟಡ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ನಾಯ್ಕ,ಕಡ್ಲೆ ಹನುಮಂತ ದೇವಾಲಯದ ಅಧ್ಯಕ್ಷ ವಿ.ಎಂ.ಭಟ್ ಡೊಂಬೆಕೈ,ಕುಂಬ್ರಿಗದ್ದೆ ವೀರಭದ್ರೇಶ್ವರ ದೇವಾಲಯದ ಅಧ್ಯಕ್ಷ ಉಮೇಶ ವಿ.ಕಳೂರಿನ ಕಲ್ಲೇಶ್ವರ ದೇವಾಲಯದ ಅಧ್ಯಕ್ಷ ಈಶ್ವರ ನಾಯ್ಕ ಗ್ರಾಪಂ ಸದಸ್ಯ ಗೋವಿಂದ ನಾಯ್ಕ ಉಪಸ್ಥಿತರಿದ್ದರು.
ಪ್ರೋ.ಎಮ್.ಕೆ.ನಾಯ್ಕ ಹೊಸಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ದೇವಾಲಯದ ವಿಗ್ರಹ ನಿರ್ಮಿಸಿದ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಚಂದ್ರಶೇಖರ ನಾಯ್ಕ ದಂಪತಿಗಳನ್ನು ಸನ್ಮಾನಿಸಲಾಯಿತು.