ಆದ್ಯೋತ್ ಸುದ್ದಿನಿಧಿ:
ಗ್ರಾಮೀಣಾಭಿವೃದ್ದಿ ಸಚೀವ ಈಶ್ವರಪ್ಪ ವಿರುದ್ದ ಕಮಿಷನ್ ಪಡೆದಿದ್ದಾರೆಂದು ಆರೋಪಿಸಿದ್ದ ಬೆಳಗಾವಿಯ ಗುತ್ತಿಗೆದಾರ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಚೀವ ಈಶ್ವರಪ್ಪನವರು ತಾನು ಮಾಡಿದ್ದ ಕಾಮಗಾರಿಗೆ ಬಿಲ್ ಮಾಡಲು ಶೇ.40 ಕಮಿಷನ್ ಕೇಳುತ್ತಿದ್ದಾರೆಂದು ಸಂತೋಷ ಆರೋಪ ಮಾಡಿದ್ದಲ್ಲದೆ ಪ್ರದಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು ಸುದ್ದಿಯಾಗಿದ್ದರು
.
ಬಿಜೆಪಿ ಕಾರ್ಯಕರ್ತರೂ ಆಗಿದ್ದ ಸಂತೋಷ ಪಾಟೀಲರ ಮೇಲೆ ಎಷ್ಟು ಒತ್ತಡವಿತ್ತೋ ಗೊತ್ತಿಲ್ಲ.ಕಳೆದ ಒಂದುವಾರದಿಂದ ಅವರು
ನಾಪತ್ತೆಯಾಗಿದ್ದರು.ಅವರು ವಾಸವಿದ್ದ ಮನೆಗೆ ಬೀಗಹಾಕಲಾಗಿತ್ತು.ನನ್ನ ಸಾವಿಗೆ ಸಚೀವ ಈಶ್ವರಪ್ಪನವರೇ ಕಾರಣ ಎಂದು ಬರೆದಿಟ್ಟ ಡೆತ್ ನೋಟ್ ಮಾಧ್ಯಮಪ್ರತಿನಿಧಿಗಳಿಗೆ ಕಳುಹಿಸಲಾಗಿತ್ತು.
ಡೆತ್‌ನೋಟ್ ಮೆಸೇಜ್ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಪೊಲೀಸ್ ರು ಸಂತೋಷ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದರು.ಹಿಂಡಲಗಾ ಸಮರ್ಥ ಕಾಲೋನಿಯ ಅವರ ನಿವಾಸ ಲಾಕ್ ಆಗಿತ್ತು. ಮೋಬೈಲ್ ಕರೆ ಆಧರಿಸಿ ಅವರ ಪತ್ತೆಕಾರ್ಯಕ್ಕೆ ಇಳಿದ ಪೊಲೀಸ್ ರಿಗೆ ಕೊನೆಯಬಾರಿ ಉಡುಪಿ ಲೊಕೇಷನ್ ಲ್ಲಿ ಮೊಬೈಲ್ ಕಾರ್ಯನಿರ್ವಹಿಸಿರುವುದು ಕಂಡುಬಂದಿತ್ತು ಉಡುಪಿ ಪೊಲೀಸ್ ರ ಸಹಕಾರದೊಂದಿಗೆ ಶೋಧಕಾರ್ಯ ನಡೆಸಿದಾಗ ಉಡುಪಿಯ ಶಾಂಭವಿ ಲಾಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತ್ತು.
ಈಗಾಗಲೇ ಬಿಜೆಪಿ ಸರಕಾರದ ಮೇಲೆ ಗುತ್ತಿಗೆದಾರರ ಸಂಘ ಶೇ.40 ಕಮಿಷನ್ ಆರೋಪ ಮಾಡಿತ್ತು. ಬಿಜೆಪಿಯ ಕಾರ್ಯಕರ್ತನೂ ಆಗಿರುವ ಗುತ್ತಿಗೆದಾರನೊಬ್ಬ ಸರಕಾರದ ಪ್ರಭಾವಿ ಸಚೀವರ ಮೇಲೆ ಆರೋಪ ಹೊರೆಸಿ ಆತ್ಮಹತ್ಯೆಗೆ ಶರಣಾಗಿರುವುದು ಸರಕಾರಕ್ಕೆ ಶೋಭೆತರುವಂತಹದ್ದಲ್ಲ. ಬ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರಕಾರಕ್ಕಿಂತ ತಾನೇನೂ ಕಡಿಮೆ ಇಲ್ಲ ಎಂದು ಬಿಜೆಪಿ ಸರಕಾರ ತೋರಿಸುತ್ತಿದೆ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.