ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಸಿದ್ದಾಪುರ ಹೊಸೂರು ಶಂಕರಮಠದಲ್ಲಿ ಅಗ್ನ್ಯಾರಾಧಕ ನಡಗೋಡು ವಿ.ನರಸಿಂಹ ಭಟ್ಟ ಮಹಾಲಕ್ಷ್ಮಿ ದಂಪತಿಗಳಿಗೆ ದೊಡ್ಮನೆ ಗಣೇಶ ಹೆಗಡೆ ಸ್ಮೃತಿಪುರಸ್ಕಾರ-ಶುಭಕೃತ್ ಪ್ರದಾನ ಮಾಡಲಾಯಿತು.
ಜಿಲ್ಲೆಯ ಶೈಕ್ಷಣಿಕ,ಧಾರ್ಮಿಕ,ಸಹಕಾರಿ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿರುವ ದೊಡ್ಮನೆ ಗಣೇಶ ಹೆಗಡೆಯವರ ಸ್ಮರಣೆಗಾಗಿ ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತಿದೆ.
ಅಗ್ನಿ ಆರಾಧನೆಯನ್ನು ನಿರಂತರವಾಗಿ ನಡೆಸುತ್ತಿರುವವರು ದೇಶದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಇದು ಕಠಿಣವಾದ ತಪಸ್ಸಾಧನೆಯಾಗಿದ್ದು ಇಂತಹ ಸಾಧನೆ ಮಾಡಿದವರು
ವಿ.ನರಸಿಂಹ ಭಟ್ಟ ಮಹಾಲಕ್ಷ್ಮಿ ದಂಪತಿಗಳು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶಿರಳಗಿ ಶ್ರೀ ಚೈತನ್ಯರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ,ಧರ್ಮಗ್ರಂಥವನ್ನು,ವಿಜ್ಞಾನ ಗ್ರಂಥಗಳನ್ನು ಪ್ರಕಟಿಸುವುದರಿಂದ ಧರ್ಮವನ್ನು ಉಳಿಸುವುದಾಗಲಿ ವಿಜ್ಞಾನವನ್ನು ಉಳಿಸುವುದಾಗಲಿ ಆಗುವುದಿಲ್ಲ ಧರ್ಮವನ್ನು ಆಚರಣೆ ಮಾಡುವುದರ ಮೂಲಕ ಧರ್ಮವನ್ನು,ವಿಜ್ಞಾನಿಗಳನ್ನು ಸೃಷ್ಟಿಸುವ ಮೂಲಕ ವಿಜ್ಞಾನವನ್ನು ಉಳಿಸಬೇಕು ಭಾರತ ಈಡೀ ಜಗತ್ತಿಗೆ ಸಂಸ್ಕೃತಿಯ ಪಾಠ ಮಾಡಿದ ದೇಶ ಬೇರೆ ದೇಶಗಳು ಸಂಸ್ಕøತಿಯನ್ನು ಅರಿಯುವ ಮೊದಲೇ ನಾವು ಸಂಸ್ಕೃತಿಯ ಬಗ್ಗೆ ದೊಡ್ಡ ಸಾಧನೆ ಮಾಡಿದ್ದೆವು.ವೈದಿಕ ಪರಂಪರೆ ಉತ್ತುಂಗದಲ್ಲಿದ್ದಾಗ ಪ್ರತಿಮನೆಯಲ್ಲೂ ಅಗ್ನಿಹೋತ್ರಾದಿಗಳು ನಡೆಯುತ್ತಿದ್ದವು.ವೇದಗಳು ನಮ್ಮ ಬದುಕಿನ ಮಾರ್ಗದರ್ಶಕ ಸೂತ್ರಗಳಾಗಿದ್ದವು ಆದರೆ ನಾವು ಇಂದು ವೇದಗಳ ಆಶಯವನ್ನೆ ಮರೆತುಬಿಟ್ಟಿದ್ದೆವೆ. ವೇದಗಳು ನಾಶವಾಗುವಂತಹದ್ದಲ್ಲ. ಇಂದು ಹಣ,ಐಶ್ವರ್ಯದಿಂದ ಯಶಸ್ವಿ ಮನುಷ್ಯನನ್ನು ಗುರುತಿಸಲಾಗುತ್ತಿದೆ.ಆದರೆ ಇವು ಸಂತುಷ್ಟಿಯನ್ನು ನೀಡುವಂತಹದ್ದಲ್ಲ,ಚಿತ್ತಶುದ್ದಿ ಇರುವವನು,ಭಗವತ್ಪ್ರಾಪ್ತಿಗೆ ಸೇವೆ ಮಾಡುವವನು ಯಶಸ್ವಿ ಪುರುಷನಾಗುತ್ತಾನೆ. ಹೊರಗಡೆ ಶ್ರೀಮಂತಿಕೆಗೆ ನಾವು ಒಳಗಾಗಬಾರದು ಆಂತರಿಕ ಶ್ರಿಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ನಡಗೋಡು ನರಸಿಂಹ ಭಟ್ಟರು ಶ್ರೌತಾಗ್ನಿ ಅನುಷ್ಠಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಅಂತಹವರನ್ನು ಗುರುತಿಸಿ ಗೌರವಿಸುವ ಮೂಲಕ ವಿಜಯ ಹೆಗಡೆ ದೊಡ್ಮನೆಯವರು ಮಹತ್ವದ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಹಕಾರಿ ರತ್ನ ಆರ್.ಎಂ.ಹೆಗಡೆ ಬಾಳೆಸರ ಮಾತನಾಡಿ,ತಾಲೂಕಿನ ಶಿಕ್ಷಣ ಹಾಗೂ ಸಹಕಾರಿ ಕ್ಷೇತ್ರಕ್ಕೆ ದೊಡ್ಮನೆ ಗಣೇಶ ಹೆಗಡೆಯವರ ಕೊಡುಗೆ ದೊಡ್ಡದು ಸರಕಾರದಿಂದ ಶಿಕ್ಷಣ ವ್ಯವಸ್ಥೆ ಮಾಡಲಾಗದ ಸಮಯದಲ್ಲಿ ಗಣೇಶ ಹೆಗಡೆಯವರು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು ಅವರ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಲಕ್ಷಾಂತರ ಜನರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅದೇ ರೀತಿ ಸಹಕಾರ ಕ್ಷೇತ್ರಕ್ಕೂ ಅವರ ಕೊಡುಗೆ ಇದೆ ಇಮದು ನಾನು ಸಹಕಾರ ಕ್ಷೇತ್ರದಲ್ಲಿ ಕಿಂಚಿತ್ ಸಾಧನೆ ಮಾಡಿದ್ದರೆ ಅದಕ್ಕೆ ಕಾರಣ ಗಣೇಶ ಹೆಗಡೆಯವರು ಎಂದು ಹೇಳಿದರು.
ದೊಡ್ಮನೆ ಗಣೇಶ ಹೆಗಡೆ ಸ್ಮøತಿಪುರಸ್ಕಾರ-ಶುಭಕೃತ್ ಫಲಕ ಹಾಗೂ 21000ರೂ ಚೆಕ್ನ್ನು ಶ್ರೌತಾಗ್ನಿಯ ಆರಾಧಕ ನಡಗೋಡು ವಿ.ನರಸಿಂಹ ಭಟ್ಟ-ಮಹಾಲಕ್ಷ್ಮೀ ದಂಪತಿಗಳಿಗೆ ಪ್ರದಾನ ಮಾಡಲಾಯಿತು.
ಸಂಮ್ಮಾನಿತ ವಿ.ನರಸಿಂಹ ಭಟ್ಟ ಮಾತನಾಡಿ, ಆರ್ಥಿಕ ಧೃಡತೆ ಇದ್ದರೆ ಸಾಧನೆ ಮಾಡಲು ಸಾಧ್ಯ ನನಗೆ ನಿಶ್ಚಿತವಾದ ಪ್ರಾದ್ಯಾಪಕ ವೃತ್ತಿ ಸಕ್ಕಿದನಂತರ ನಾನು ಶ್ರೌತಾಗ್ನಿ ಆರಾಧನೆ ಪ್ರಾರಂಭಿಸಿದೆ. ಈ ಅಗ್ನಿ ಆರಾದನೆಗೆ ಸಂಗಾತಿಯ ಪಾತ್ರ ಬಹಳಮುಖ್ಯವಾದುದು ನನ್ನ ಮಡದಿ ಈ ವಿಚಾರದಲ್ಲಿ ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾಳೆ. ನಾನು ಅವಳ ಸ್ವಾತಂತ್ರ್ಯವನ್ನೆ ಕಸಿದುಕೊಂಡಿದ್ದೆನೋ ಅನಿಸುತ್ತದೆ. ಹಿಂದೆ ಶ್ರೌತಾಗಿ ಆರಾಧನೆ ಕಷ್ಟವಾಗಿತ್ತು ಆದರೆ ಇಮದು ಇದನ್ನು ಸುಲಭವಾಗಿ ಮಾಡಬಹುದು ಆದರೆ ಯುವ ಜನಾಂಗ ಈ ಬಗ್ಗೆ ಆಸಕ್ತಿವಹಿಸುತ್ತಿಲ್ಲ ಎಂದು ಹೇಳಿದರು.
ಸಂಸ್ಕøತಿ ಸಂಪದದ ಮುಖ್ಯಸ್ಥ ವಿಜಯ ಹೆಗಡೆ ದೊಡ್ಮನೆ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಭಟ್ಟ ಬಾಲಿಗದ್ದೆ ನಿರೂಪಣೆ ಮಾಡಿದರು. ಚೈತನ್ಯ ಮತ್ತು ಸಂಗಡಿಗರು ವೇದಘೋಷ ಮಾಡಿದರು.