ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಅಬಕಾರಿ ಉಪನಿರೀಕ್ಷಕಿ ಪ್ರೀತಿ ರಾಥೋಡ ಎನ್ನುವವರು ಲಂಚಪಡೆಯುತ್ತಿದ್ದ ವೇಳೆ ಬ್ರಷ್ಟಾಚಾರ ನಿಗ್ರಹದಳದವರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಫೇಬ್ರವರಿ ತಿಂಗಳಲ್ಲಿ ಮುಸ್ತಾಕ ಹಸನ್ ಬೇಗ್ ಎನ್ನುವ ವ್ಯಕ್ತಿಯ ವಾಹನ ಪರಿಶೀಲಿಸುವಾಗ ಅದರಲ್ಲಿ ಗೋವಾ ಮಧ್ಯ ಇರುವುದು ಪತ್ತೆಯಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು.
ಬೈಕ್ ಮಾಲಿಕ ಗೋವಾ ರಾಜ್ಯದವರಾಗಿದ್ದು ಅವರ ಮೇಲೂ ಪ್ರಕರಣದಾಖಲಿಸುವುದಾಗಿ ನಿರೀಕ್ಷಕಿ ಹೇಳುತ್ತಿದ್ದರು ಅವರ ಮೇಲೆ ಪ್ರಕರಣ ದಾಖಲಿಸದಿರಲು 50 ಸಾವಿರರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿ ಆಪಾದಿಸಿದ್ದಾನೆ
ಈ ಬಗ್ಗೆ ಬ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು ಮಂಗಳವಾರ ಮೊದಲ ಕಂತು 20 ಸಾವಿರರೂ. ನೀಡುವಾಗ ಡಿವೈಎಸಪಿ ಪ್ರಕಾಶ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.