ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ವಂದಾನೆ ಶಿರೂರು ಸಮೀಪ ಇನೋವಾ ಕಾರು ಹಾಗೂ ಮಾರುತಿ ಇಕೋ ಕಾರು ನಡುವೆ ಮುಖಾಮುಖಿ ಡಿಕ್ಕಿ ನಡೆದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಏಳು ಜನ ಗಂಭೀರ ಗಾಯಗೊಂಡ ಘಟನೆ ರವಿವಾರ ಸಂಜೆ 5 ಗಂಟೆಯ ಸುಮಾರಿಗೆ ನಡೆದಿದೆ.
ಮೃತ ವ್ಯಕ್ತಿ ಸಿದ್ದಾಪುರ ಕಬ್ಬಿನಮನೆ ಮುಳಗುಂದದ ಮಂಜುನಾಥ ಬೆಳ್ಳಾ ಗೌಡ ಇಕೋ ಕಾರಿನ ಚಾಲಕನಾಗಿದ್ದು,ಕಾರಿನಲ್ಲಿದ್ದ ಮಂಜುಳಾ ಮಂಜ ಗೌಡ ಮೋಹಿನಿ ಚೌಡ ಗೌಡ,ಪ್ರತಿಕ್ಷ ಗೌಡ, ಪರಮಿ ಕೃಷ್ಣ ಗೌಡ,ರೂಪಾ ಮಂಜುನಾಥ ಗೌಡ ಹಾಗೂ ಇನೋವಾ ಕಾರಿನಲ್ಲಿದ್ದ ಗಣಪತಿ ರಾಮರಾಯ ರೇವಣಕರ್, ಸುರೇಖಾ ರಾಯ್ಕರ ಇವರಿಗೆ ತೀವ್ರತರಹದ ಗಾಯಗಳಾಗಿವೆ.ಸಿದ್ದಾಪುರ ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
########
ಹೊಳೆಗದ್ದೆಯಲ್ಲಿ ದಾಖಲೆಗಳಿಲ್ಲದ ಹಣ ವಶ
ಕುಮಟಾ ಹೊಳೆಗದ್ದೆ ಚೆಕ್ ಪೋಸ್ಟ್ ನಲ್ಲಿ ಸಮರ್ಪಕ ದಾಖಲೆ ಇಲ್ಲದ 78,52,500/- ರೂ.ವನ್ನು ಪೊಲೀಸ್ ರು
ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಆರೋಪಿತರಾದ ಹಳೆಹುಬ್ಬಳ್ಳಿಯ ರಾಘವೇಂದ್ರ ಪ್ರಕಾಶ ಗೋಂದಕರ್,ಹಳೆಹುಬ್ಬಳ್ಳಿಸದಾಶಿವ ನಗರದ ಗಂಗಾಧರ ಮೀನಪ್ಪ ಕಣಕಿ ಇವರನ್ನು ಬಂಧಿಸಲಾಗಿದ್ದು ಹಣದ ಜೊತೆಗೆ ಮಾರುತಿ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.