ಆದ್ಯೋತ್ ಸುದ್ದಿನಿಧಿ:
ಎಂಟನೇ ಅಂತರಾಷ್ಟ್ರೀಯ ಯೋಗದಿನಾಚರಣೆಗೆ ಪ್ರದಾನ ಮಂತ್ರಿ ನರೇಂದ್ರಮೋದಿಯವರು ಚಾಲನೆ ನೀಡಿದರು.
ಮೈಸೂರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಆಯುಷ್ ಇಲಾಖೆಯ ಮಂತ್ರಿ,ಸರ್ಬಾನಂದ ಸೋನುವಾಲ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ರಾಜ್ಯಪಾಲ ಗೆಹ್ಲೋಟ,ಮೈಸೂರು ಉಸ್ತುವಾರಿ ಸಚೀವ ಸೋಮಶೇಖರ,ಸಂಸದ ಪ್ರತಾಪ ಸಿಂಹ,ರಾಜಮಾತೆ ಪ್ರಮೋದಾ ದೇವಿ ಮುಂತಾದ ಗಣ್ಯರ ಜೊತೆಗೆ 15000 ಯೋಗಪಟುಗಳು ಉಪಸ್ಥಿತರಿದ್ದರು.
ನಾಡಗೀತೆ ಜಯಭಾರತ ಜನನಿಯ ತನುಜಾತೆ ಹಾಡಿನೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ,ನಮ್ಮ ಋಷಿ- ಮುನಿಗಳು ಯೋಗದ ಮಹತ್ವವನ್ನು ಅರಿತು ಇದರಿಂದ ಕೇವಲ ವ್ಯಕ್ತಿಗಷ್ಟೆ ಅಲ್ಲ ಈಡೀ ಸಮಾಜಕ್ಕೆ
ಶಾಂತಿ ಸಿಗುತ್ತದೆ ಎಂದು ಕಂಡುಹಿಡಿದಿದ್ದರು.ಯೋಗ ನಮ್ಮ ವ್ಯಕ್ತಿತವವನ್ನು ಶುದ್ಧಗೊಳಿಸುತ್ತದೆ.ಆಧ್ಯಾತ್ಮಿಕಕೇಂದ್ರವಾದ ಭಾರತದಲ್ಲಿ ಯೋಗ ಮನೆಗಳಲ್ಲಿ,ಆಧ್ಯಾತ್ಮಿಕ ಕೇಂದ್ರಗಳಲ್ಲಿ ಮಾಡಲಾಗುತ್ತಿತ್ತು ಆದರೆ ಇಂದು ಯೋಗ ವಿಸ್ತಾರವನ್ನು ಪಡೆದಿದೆ ಜಗತ್ತಿನ ದೇಶಗಳು ಯೋಗವನ್ನು ಅಳವಡಿಸಿಕೊಳ್ಳುತ್ತಿವೆ.ಇಂದು ಸೂರ್ಯನ ಪ್ರಥಮ ಕಿರಣದೊಂದಿಗೆ ಯೋಗವನ್ನು ಜಗತ್ತಿನ ಎಲ್ಲಾ ದೇಶಗಳು ಯೋಗದಿನಾಚರಣೆಯನ್ನು ಆಚರಿಸುತ್ತಿವೆ
ಇಂದು ಜಗತ್ತು ಭಿನ್ನ ಭಿನ್ನ ಆಲೋಚನೆಗಳಿಂದ ವೈರುಧ್ಯದಲ್ಲಿದ್ದರೆ ಯೋಗ ವಿಶ್ವಶಾಂತಿ ಸಂದೇಶದೊಂದಿಗೆ ಒಂದೇ ಸೂತ್ರದಲ್ಲಿ ಬಂಧಿಸುತ್ತಿದೆ.
ಕೊವಿಡ್ ಈಡೀ ಜಗತ್ತನ್ನು ತಲ್ಲಣಗೊಳಿಸಿದೆ ನಾವು ಸಾಕಷ್ಟು ದೇಶಗಳಿಗೆ ಸಹಾಯ ಹಸ್ತ ನೀಡಿದ್ದೆವೆ ಈಗಲೂ ಜಗತ್ತು ಹಲವು ಸಂಕಷ್ಟವನ್ನು ಅನುಭವಿಸುತ್ತಿದೆ ಆದ್ದರಿಂದ ಈ ಬಾರಿ ಮಾನವೀಯತೆಗಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಯೋಗದಿನಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ದೇಶದ ಸಾಂಸ್ಕೃತಿಕ ನಗರದಲ್ಲಿ ಮೈಸೂರು ಪ್ರಮುಖವಾದುದು ಇಲ್ಲಿಯ ಸಾಂಸ್ಕೃತಿ,ಆಧ್ಯಾತ್ಕಿಕ ವೈಭವದ ಜೊತೆಗೆ ಈಗ ಯೋಗವೈಭವನ್ನು ಕಾಣುವಂತಾಗಿದೆ ಎಂದು ಮೋದಿಜಿ ಹೇಳಿದರು.
ಬಸವರಾಜ ಬೊಮ್ಮಾಯಿ ಮಾತನಾಡಿ,ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರಚಲಿತವಾಗಲು ಮೋದಿಜೀಯವರ ಪಾತ್ರ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ.ವ್ಯಕ್ತಿಯ ದೇಹ-ಮನಸ್ಸನ್ನು ಹೇಗೆ ಯೋಗ ಒಂದು ಮಾಡುತ್ತದೆಯೋ ಅದೇ ರೀತಿ ಜಗತ್ತನ್ನು ಒಂದು ಮಾಡುತ್ತದೆ ಎಂದು ಹೇಳಿದರು.
ನಂತರ ನರೇಂದ್ರ ಮೋದಿಯವರು ಯೋಗಪಟುಗಳ ಜೊತೆ ಕುಳಿತು ಯೋಗಾಸನ ಮಾಡಿದರು.