ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸ್ವರ್ಣವಲ್ಲಿಯಲ್ಲಿ ಯೋಗಪಟುಗಳೂ ಆಗಿರುವ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಯೋಗದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ,ಯೋಗ ನಮ್ಮ ಬದುಕಿನ ಅವಿಬಾಜ್ಯ ಅಂಗವಾಗಬೇಕಾಗಿದೆ.ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಯೋಗದಿಂದ ಸಾಧ್ಯ ಜಗತ್ತಿಗೆ ಯೋಗ,ಆಯುರ್ವೇದ,ವೇದ ಸೇರಿದಂತೆ ಹಲವು ಮಹತ್ವವನ್ನು ನಮ್ಮ ಪರಂಪರೆಯು ನೀಡಿದೆ. ಪ್ರದಾನಿ ನರೇಂದ್ರ ಮೋದಿಯವರು ನಮ್ಮ ಪರಂಪರೆಯ ಅತಿಮಹತ್ವದ ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇಂದಿನ ದಿನವನ್ನು ವಿಶ್ವದಾದ್ಯಂತ ಯೋಗದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಇದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ಪರಿಸರ ತಜ್ಞ ಅನಂತ ಹೆಗಡೆ ಆಶೀಸರ,ಉಪವಿಭಾಗಾಧಿಕಾರಿ ದೇವರಾಜ್ ಆರ. ಮುಂತಾದವರು ಭಾಗವಹಿಸಿದ್ದರು
ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ,ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಅಲ್ಲಿ ಸೇರಿದ್ದವರು ಯೋಗವನ್ನು ಮಾಡಿದರು.
######
ಸಿದ್ದಾಪುರದಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆ
ಸಿದ್ದಾಪುರ ಶಂಕರಮಠದಲ್ಲಿ ಮಂಗಳವಾರ ಸ್ಥಳೀಯ ಪತಂಜಲಿ ಯೋಗ ಸಮಿತಿ,ಮಹಿಳಾ ಯೋಗ ಸಮಿತಿ,ಹಾಗೂ ಮತ್ತಿತ್ತರ ಸಂಘಟನೆಗಳ ಸಹಯೋಗದಲ್ಲಿ 8ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಆಚರಿಸಲಾಯಿತು.
ಯೋಗದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಕøತಿಯ ಅತಿಮುಖ್ಯವಾದ ಒಂದು ವಿಭಾಗ ಯೋಗವಾಗಿದ್ದು ಹಿಂದೆ ಸೀಮಿತವಾಗಿದ್ದ ಯೋಗ ಇಂದು ಎಲ್ಲಾ ಕಡೆಗೂ ವಿಸ್ತಾರವಾಗುತ್ತಿರುವುದು ಸಂತೋಷದ ವಿಷಯವಾಗಿದೆ. ಯೋಗವನ್ನು ನಿತ್ಯ ಮಾಡಿದರೆ ರೋಗ ರಹಿತ ಜೀವನ ನಡೆಸಲು ಸಾಧ್ಯ. ಯೋಗ ನಮ್ಮ ಸಂಸ್ಕøತಿ ಆಗಬೇಕು . ಸಾವಿರಾರು ವರ್ಷಗಳ ಇತಿಹಾಸ ಇರುವ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಹ ಮತ್ತು ಮನಸ್ಸು ಚೇತೋಹಾರಿ ಆಗಿರುತ್ತದೆ ಎಂದು ಹೇಳಿದರು.
ಶಂಕರಮಠಧ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಉದ್ಯಮಿ ಆನಂದ ನಾಯ್ಕ, ನ್ಯಾಯವಾದಿ ಡಾ.ರವಿ.ಹೆಗಡೆ ಹೂವಿನಮನೆ, ಯೋಗ ಶಿಕ್ಷಕ ಮಂಜುನಾಥ ನಾಯ್ಕ, ವೀಣಾ ಶೇಟ್, ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು ಇದ್ದರು.
ನಂತರ ನಡೆದ ಯೋಗ ಪ್ರದರ್ಶನದಲ್ಲಿ 150ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.