ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಕುಮಟಾದ ಬಾಡಾ ಕಾಗಲಲ್ಲಿ ಇರುವ ಸಿಲ್ವರ್ ಸ್ಯಾಂಡ್ ರೇಸಾರ್ಟ ಬಳಿ ಸಮುದ್ರದಲ್ಲಿ ಈಜಲು ಹೋಗಿದ್ದ ಒಬ್ಬಳು ಯುವತಿ ಸೇರಿದಂತೆ ನಾಲ್ವರು ಸಮುದ್ರಪಾಲಾದ ಘಟನೆ ಶನಿವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಡೆದಿದೆ.
ಬೆಂಗಳೂರಿನಿಂದ 89 ಸ್ನೇಹಿತರ ಗುಂಪು ಪ್ರವಾಸಕ್ಕೆಂದು ಇಲ್ಲಿಗೆ ಬಂದಿದ್ದು,ರೆಸಾರ್ಟ್ ಬಳಿ ಇರುವ ಸಮುದ್ರದಲ್ಲಿ ಈಜಲು ಹೋಗಿ,ನಾಲ್ಕು ಜನರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.ಕರಾವಳಿ ರಕ್ಷಣಾಪಡೆಯವರು ಯುವತಿಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ ಆದರೆ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಅರ್ಜುನ ವಾಸುದೇವ(23) ಬೆಂಗಳೂರು.ಚೈತಶ್ರೀ ಗೋಪಾಲ ಎಂ.(22) ಪೀಣ್ಯ ಬೆಂಗಳೂರು.ತೇಜಸ್ ಡಿ.(22)ಜೆ.ಪಿ.ನಗರ ಬೆಂಗಳೂರು,ಕಿರಣಕುಮಾರ ಮರಿರಾಜ(27)ಕನಕಪುರ ರಸ್ತೆ ಬೆಂಗಳೂರು