ಆದ್ಯೋತ್ ಸುದ್ದಿನಿಧಿ:
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಪ್ರಯುಕ್ತ ದೇಶದಾದ್ಯಂತ ಅಮೃತಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ.
ಕರ್ನಾಟಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ,ಅಂಕೋಲ,ಕಾರವಾರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಿದ್ದಾಪುರದಲ್ಲಿ ಸ್ಥಳೀಯ ಆಡಳಿತ ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು.ಪಟ್ಟಣದ ಚಂದ್ರಘಟಕಿ ಪಟಾಂಗಣದಲ್ಕಿ ಪೂಜೆ ನಡೆಸಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ರಂಗಸೌಗಂಧ ತಂಡದವರು ದೇವಿಯ ದೀವಿಗೆ ನಾಟಕವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು
ಹೊಸೂರು ಶಂಕರಮಠದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ರಾಷ್ಟ್ರೀಯತೆ ಜಾಗೃತವಾಗಲು ಇಂತಹ ಕಾರ್ಯಕ್ರಮಗಳು ಬೇಕು. ನಮ್ಮ ರಾಷ್ಟ್ರದ ಬಗ್ಗೆ ನಮ್ಮ ಸಂಸ್ಕøತಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಲ್ಲಕ್ಕಿಂತ ದೇಶ ಮೊದಲು ಎನ್ನುವ ಭಾವನೆ ನಮಗೆ ಇರಬೇಕು ಭಾರತ ಹಿಂದಿನಿಂದಲೂ ಜಗತ್ತಿಗೆ ಗುರುವಿನ ಸ್ಥಾನದಲ್ಲಿತ್ತು ಕಾರಣ ಜಗತ್ತಿಗೆ ಜ್ಞಾನವನ್ನು ನೀಡಿದ್ದು ನಮ್ಮ ದೇಶ. ಜಗತ್ತಿನಲ್ಲಿ ವೇದ,ಉಪನಿಷತ್,ಯೋಗವನ್ನು ನೀಡಿದ್ದು ನಾವು ಇಂದು ಈಡೀ ಜಗತ್ತು ಯೋಗವನ್ನು ಅಳವಡಿಸಿಕೊಳ್ಳುತ್ತಿದೆ ಪುನಃ ನಾವು ವಿಶ್ವಗುರು ಪಟ್ಟವನ್ನು ಹೊರುತ್ತಿದ್ದೆವೆ. ಬ್ರಿಟಿಷ್‍ರಿಗಿಂತ ನೂರಾರು ವರ್ಷದ ಹಿಂದೆಯೇ ಭಾರತದ ಮೇಲೆ ಪರಕೀಯರ ದಾಳಿ ನಡೆದಿತ್ತು ಅದನ್ನು ನಮ್ಮ ಜನರು ಸಮರ್ಥವಾಗಿ ಎದುರಿಸಿದ್ದರು. ನಂತರ ನಮ್ಮನ್ನು ಒಡೆದು ಆಳುವ ನೀತಿಯಿಂದ ಬ್ರೀಟಿಷ್‍ರು ದೇಶವನ್ನು ಆಕ್ರಮಿಸಿದರು ಎಂದು ಕಾಗೇರಿ ಹೇಳಿದರು.
ನಮಗೆ ಸ್ವಾತಂತ್ರ್ಯ ಲಭಿಸಿದ್ದು ಕೇವಲ ಮುಖಂಡರಿಂದ ಮಾತ್ರ ಅಲ್ಲ ಪ್ರತಿ ಹಳ್ಳಿಯಲ್ಲಿಯೂ ಜನರು ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಹೋರಾಟ ಮಾಡಿದ್ದರಿಂದ ದೊರೆಯಿತು. ಶಾಂತಿ ಮಂತ್ರದಿಂದ ಬ್ರಿಟೀಷ್‍ರು ಹೆದರಲಿಲ್ಲ ಅದೆ ಸಮಯದಲ್ಲಿ ಕ್ರಾಂತಿಕಾರರು ಹೋರಾಟ ನಡೆಸಿದ್ದರಿಂದ ಬ್ರಿಟಿಷ್‍ರು ಭಾರತ ಬಿಟ್ಟು ತೊಲಗಬೇಕಾಯಿತು. ಇಂದು ನಕ್ಸಲ್ ವಾದ,ಉಗ್ರವಾದ,ಕಮ್ಯೂನಿಸಂವಾದದ ಮೂಲಕ ನಮ್ಮನ್ನು ಒಡೆಯುವ ಪ್ರಯತ್ನವಾಗಿದೆ ನಾವು ಜವಾಬ್ದಾರಿಯುತ ಪ್ರಜೆಗಳಾಗಿ ಇದೆಲ್ಲವನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಎಂದು ಹೇಳಿದರು.
ಇಂದಿಗೆ 47 ವರ್ಷದ ಹಿಂದೆ ಜೂನ್ 25 ರಂದು ಅಧಿಕಾರದ ಲಾಲಸೆಗಾಗಿ ದೇಶಕ್ಕೆ ತುರ್ತುಪರಿಸ್ಥಿತಿಯನ್ನು ಹೇರಲಾಯಿತು.ದೇಶದ ಬಗ್ಗೆ ಮಾತನಾಡುವವರಿಗೆ,ಪ್ರಜಾಪ್ರಭುತ್ವ ವ್ಯವಸ್ಥೆ ಬೇಕು ಎನ್ನುವವರಿಗೆ ಜೈಲು ಶಿಕ್ಷೆ ವಿಧಿಸಲಾಯಿತು. ಜೈಹಿಂದ್ ಎನ್ನುವವರಿಗೆ ಲಾಠಿ ರುಚಿ ತೋರಿಸಲಾಯಿತು ಲಕ್ಷಾಂತರ ಜನರು ಅಮದು ಎರಡನೆ ಬಾರಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಬೇಕಾಯಿತು. ಸತತ ಹೋರಾಟದ ನಂತರ ಎರಡು ವರ್ಷದ ತರುವಾಯ ಪುನಃ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತರಲಾಯಿತು ಇಂತಹ ಘಟನೆ ಮರುಕಳಿಸದಂತೆ ನಮ್ಮನ್ನು ಸತತವಾಗಿ ಎಚ್ಚರಿಸಬೇಕು.
ಸ್ವಾತಂತ್ರ್ಯ ಅಮೃತಮಹೋತ್ಸವದ ನೆನಪಿಗೆ ಸ್ವಾತಂತ್ರ್ಯ ಉದ್ಯಾನವನಕ್ಕೆ ಚಾಲನೆ
ಸ್ವಾತಂತ್ರ್ಯದ ಅಮೃತಮಹೋತ್ಸವದ ನೆನಪಿಗಾಗಿ ಪಟ್ಟಣದ ಬಾಲಿಕೊಪ್ಪದಲ್ಲಿ ಅರಣ್ಯ ಇಲಾಖೆಯು ಸ್ಥಳೀಯ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸಲು ಮುಂದಾಗಿದ್ದು ಶನಿವಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇದಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,ತಾಲೂಕಿನಲ್ಲಿ 975 ಸ್ವಾತಂತ್ರ್ಯ ಹೋರಾಟಗಾರರು ನೇರವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕಿ ತಮ್ಮ ಮನೆ,ಆಸ್ತಿ,ಸಂಸಾರವನ್ನು ಕಳೆದುಕೊಂಡಿದ್ದಾರೆ. ಇವರು ಮಾಡಿರುವ ತ್ಯಾಗ,ಬಲಿದಾನದ ನೆನಪು ಶಾಶ್ವತವಾಗಿರಬೇಕು ಎಂಬ ಉದ್ದೇಶದಿಂದ ಉದ್ಯಾನವನ್ನು ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದೊಂದು ಶ್ಲಾಘನೀಯ ಕೆಲಸವಾಗಿದೆ. ಹಲವು ಜನೋಪಯೋಗಿ ಕೆಲಸವನ್ನು ಮಾಡಿರುವ ಲಯನ್ಸ್ ಕ್ಲಬ್ ಈ ಕೆಲಸಕ್ಕೆ ಕೈಜೋಡಿಸಿದೆ. ಪಟ್ಟಣದ ಸಮೀಪವಿರುವ ಬಾಲಿಕೊಪ್ಪದಲ್ಲಿ 4-5 ಎಕರೆ ಪ್ರದೆಶದಲ್ಲಿ 1000 ಗಿಡವನ್ನು ನೆಟ್ಟು ಪ್ರತಿಗಿಡಕ್ಕು ಒಬ್ಬೊಬ್ಬರು ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಫಲಕ ಇಡುವುದು. ಇದಕ್ಕೆ ವ್ಯವಸ್ತಿತವಾಗಿ ಕಂಪೌಂಡ ಮಾಡಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಮಾಡಲಾಗುತ್ತದೆ ಇದೊಂದು ಪವಿತ್ರ ಹಾಗೂ ಪ್ರೇಕ್ಷಣೀಯ ಸ್ಥಳವಾಗಬೇಕು ಎಂದು ಸೂಚಿಸಿದರು.
ಲಯನ್ಸ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ,ಡಾ.ರವಿ ಹೆಗಡೆ ಹೂವಿನಮನೆ, ಎಸಿಎಪ್ ಹರೀಶ್,ಆರ್‍ಎಪ್‍ಒ ಶಿವಾನಂದ ನಿಂಗಾಣಿ,ಉಪವಿಭಾಗಾಧಿಕಾರಿ ದೇವರಾಜ್ ಆರ್.ತಹಸೀಲ್ದಾರ ಸಂತೋಷ ಭಂಡಾರಿ, ದಲಿತ ಸಂಘರ್ಷ ಸಮಿತಿಯ ಶಿವಾನಂದ ಕಾನಗೋಡು ಮುಂತಾದವರು ಉಪಸ್ಥಿತರಿದ್ದರು.