ಉರುಳಿಗೆ ಸಿಲುಕಿ ಕಪ್ಪು ಚಿರತೆ ಸಾವು

ಆದ್ಯೋತ್ ಸುದ್ದಿನಿಧಿ:
ಕಾಡು ಪ್ರಾಣಿಗಳನ್ನು ಹಿಡಿಯಲು ಹಾಕಿದ್ದ ತಂತಿಯ ಉರುಳಿಗೆ ಅಪರೂಪದ ನಾಲ್ಕು ವರ್ಷದ ಕಪ್ಪು ಚಿರತೆ ಸಿಲುಕಿ ಮೃತಪಟ್ಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆ ಯಲ್ಲಿ ನಡೆದಿದೆ.

ಬೆಳಗ್ಗೆ ಉರುಳಿಗೆ ಸಿಲುಕಿದ್ದ ಚಿರತೆಯನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಬನವಾಸಿ ಅರಣ್ಯ ಇಲಾಖೆ ಅಧಿಕಾರಿಗಳು ಜೀವವಿದ್ದ ಚಿರತೆಯನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದರು
ಆದರೇ ರಕ್ಷಣೆ ಮಾಡುವುದರೊಳಗೆ ಚಿರತೆ ಸಾವನ್ನಪ್ಪಿದೆ. ಮಲೆನಾಡು ಭಾಗದಲ್ಲಿ ಇದೇ ಮೊದಲಬಾರಿ ಕಪ್ಪು ಚಿರತೆ ಇರುವುದು ಪತ್ತೆಯಾಗಿದೆ. ಚಿರತೆ ಕಳೆಬರಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

About the author

Adyot

Leave a Comment