ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜನ್ಮದಿನಾಚರಣೆಯನ್ನು 62 ಜನರು ರಕ್ತದಾನ ಮಾಡುವ ಮೂಲಕ,15 ನಿವೃತ್ತ ಸೈನಿಕರಿಗೆ ಸನ್ಮಾನ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜನ್ಮ ದಿನಾಚರಣೆಯನ್ನು ಖಾಸಗಿಯಾಗಿ ಆಚರಿಸಬೇಕೆ ವಿನಃ ಸಾರ್ವಜನಿಕ ಸಮಾರಂಭವಾಗಿ ಆಚರಿಸಬಾರದು ಎನ್ನುವುದು ನನ್ನ ನಿಲುವು ಆದರೆ ಇಂದು ರಕ್ತದಾನ ಶಿಬಿರವಿದೆ ಎಂದು ಹೇಳಿದ ಕಾರಣ ನಾನು ಭಾಗವಹಿಸುತ್ತಿದ್ದೆನೆ. ಮನುಷ್ಯನ ಜೀವನ ಅಲ್ಪಾವಧಿಯಾಗಿದ್ದು ನಾವು ಬದುಕಿದಷ್ಟು ದಿನ ಸಮಾಜಮುಖಿಯಾಗಿ ಕೆಲಸ ಮಾಡಬೇಕು ದೇಹದ ಬೇರೆ ಅಂಗಗಳನ್ನು ಕೃತಕವಾಗಿ ತಯಾರಿಸಬಹುದು ಆದರೆ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾದ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವವನ್ನು ಉಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರೋತ್ಥಾನ ರಕ್ತಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ಮಾತನಾಡಿ,ಮನುಷ್ಯನ ಏಳಿಗೆಗೆ ಹಲವು ದಾನಗಳು ನಡೆಯುತ್ತದೆ ಸಾಕಷ್ಟು ಜನರು ಸಾಕಷ್ಟು ದಾನಗಳನ್ನು ಮಾಡುತ್ತಾರೆ ಆದರೆ ಎಲ್ಲಾ ದಾನಕ್ಕಿಂತ ರಕ್ತದಾನವೇ ಶ್ರೇಷ್ಠವಾದುದು. ನಾವು ನೀಡುವ ಒಂದು ಯುನಿಟ್ ರಕ್ತ ಮೂರು ಜನರ ಪ್ರಾಣ ಉಳಿಸುತ್ತದೆ ರಕ್ತವನ್ನು ನೀಡುವುದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಸುಮಾರು 7ಲಕ್ಷ ಯುನಿಟ್ ರಕ್ತಕ್ಕೆ ಬೇಡಿಕೆ ಇದೆ ಆದರೆ ನಮ್ಮಲ್ಲಿ ಕೇವಲ 3.5ಲಕ್ಷ ಯುನಿಟ್ ರಕ್ತ ಮಾತ್ರ ಸಂಗ್ರಹವಾಗುತ್ತಿದೆ. ನಮ್ಮ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಹುಬ್ಬಳ್ಳಿ ಶಾಖೆಯಲ್ಲಿ ಪ್ರತಿತಿಂಗಳು 1200 ಯುನಿಟ್ ರಕ್ತವನ್ನು ನೀಡಲಾಗುತ್ತದೆ ಬೆಂಗಳೂರು ಶಾಖೆಯಲ್ಲಿ 5000 ಯುನಿಟ್ ರಕ್ತ ನೀಡಲಾಗುತ್ತದೆ ಇದು ಆರ್‍ಎಸ್‍ಎಸ್‍ನ ಅಂಗ ಸಂಸ್ಥೆಯಾಗಿದ್ದು ದಾನಿಗಳ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಇಲ್ಲಿ ಉಚಿತವಾಗಿ ರಕ್ತವನ್ನು ನೀಡಲಾಗುತ್ತದೆ ಎಂದು ಹೇಳಿದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವೀರಭದ್ರ ಪಾಟೀಲ ಮಾತನಾಡಿ,ಸೈನ್ಯದಲ್ಲಿ ಯಾವ ರೀತಿಯ ಸೇವೆಯನ್ನು ಸಲ್ಲಿಸಿದ್ದೆವೋ ಅದೇ ರೀತಿ ನಿವೃತ್ತಿಯ ನಂತರವೂ ಸಮಾಜಮುಖಿ ಕೆಲಸ ಮಾಡಲು ನಾವು ತೀರ್ಮಾನಿಸಿದ್ದೆವೆ.ಶಾಲಾ-ಕಾಲೇಜ್ ಗಳಲ್ಲಿ ಸೈನ್ಯಕ್ಕೆ ಸೇರುವ ಯುವಕರಿಗೆ ತರಬೇತಿ ನೀಡುವ ಕೆಲಸವನ್ನು ಮಾಡಲಿದ್ದೆವೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಡಾ.ಶ್ರೀಧರ ವೈದ್ಯ ಮಾತನಾಡಿ,ನಾನು ಇಲ್ಲಿಯ ಸರಕಾರಿ ಆಸ್ಪತ್ರೆಯ ವೈದ್ಯನಾಗಿ 18 ವರ್ಷ ಕೆಲಸಮಾಡಿದ್ದೆನೆ ಆಗ ಕೇವಲ 30 ಹಾಸಿಗೆಯ ಆಸ್ಪತ್ರೆ ಇದಾಗಿತ್ತು ಮೂರು ಶಾಸಕರು ಆ ಅವಧಿಯಲ್ಲಿ ಆಗಿದ್ದರೂ ನಾನು ಎಲ್ಲಾ ಶಾಸಕರಲ್ಲೂ ಪ್ರಸ್ತಾಪ ಮಾಡುತ್ತಿದ್ದೆ ಆದರೆ ಆಗಿರಲಿಲ್ಲ ಆದರೆ ಕಾಗೇರಿಯವರು ಶಾಸಕರಾಗಿ ಹತ್ತು ವರ್ಷದ ಒಳಗೆ 100 ಹಾಸಿಗೆಯ ಆಸ್ಪತ್ರೆ ಮಾಡಿರುವುದಲ್ಲದೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಅದನ್ನು ಅಭಿವೃದ್ಧಿ ಪಡಿಸಿದ್ದಾರೆ ಇದರಂತೆ ಶಿಕ್ಷಣ ಕ್ಷೇತ್ರ ಹಾಗೂ ಅಭಿವೃದ್ಧಿಯ ಕೆಲಸದಲ್ಲೂ ತಾಲೂಕು ಮೇಲ್ಪಂಕ್ತಿಯಲಿದೆ. ಹಿಂದೆ ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲೂಕು ಎಂದು ಹೇಳಲಾಗಿತ್ತು ಆದರೆ ಈಗ ನಮ್ಮ ತಾಲೂಕು ಎಲ್ಲಾ ರೀತಿಯಿಂದಲೂ ಮುಂದುವರಿದಿದೆ ಎಂದು ಹೇಳಿದರು.
ಪಪಂ ಸದಸ್ಯ ಗುರುರಾಜ ಶಾನಭೋಗ ಪ್ರಾಸ್ತಾವಿಕ ಮಾತನಾಡಿದರು.ಪಪಂ ಸದಸ್ಯ ಮಾರುತಿ ನಾಯ್ಕ ಸ್ವಾಗತಿಸಿದರು.