ಆದ್ಯೋತ್ ಸುದ್ದಿನಿಧಿ
ಮಾರುತಿ ಝೆನ್ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಕಾರು ಸಂಪೂರ್ಣ ಭಸ್ಮವಾದ ಘಟನೆ ಸಿದ್ದಾಪುರ ಪಟ್ಟಣದ ಸಾಗರ ವೃತ್ತದಲ್ಲಿ ಭಾನುವಾರ ರಾತ್ರಿ 8 ಗಂಟೆಯ ಸುಮಾರಿಗೆ ನಡೆದಿದೆ.
ಕಾರಿನಲ್ಲಿ ಮೂರು ಮಕ್ಕಳು ಸಹಿತ ಐದು ಜನರು ಪ್ರಯಾಣಿಸುತ್ತಿದ್ದರು.ಸಾಗರವೃತ್ತದ ಸಮೀಪ ಕಾರಿನಲ್ಲಿ ಹೊಗೆ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ ಕೂಡಲೆ ಕಾರಿನಿಂದ ಇಳಿದಿದ್ದಾರೆ.ಒಮ್ಮೆಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿಯಲು ಪ್ರಾರಂಭಿಸಿದೆ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ ಆಷ್ಟರಲ್ಲಿ ಕಾರು ಸಂಪೂರ್ಣ ಭಸ್ಮವಾಗಿತ್ತು.
ಕಾರಿನಲ್ಲಿ ಶಿರಸಿಯ ಅಸ್ಲಮ್ ಮೋದಿನ್ ಹಾಗೂ ಮೂರು ಮಕ್ಕಳು ಸೇರಿದಂತೆ ಒಟ್ಟೂ ಐದು ಜನರು ಪ್ರಯಾಣಿಸುತ್ತಿದ್ದರು