ಅದ್ಯೋತ ಸುದ್ಧಿ ನಿಧಿ:ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಆಗಬೇಕೆಂದು ಆಗ್ರಹಿಸಿ ಶಿರಸಿಯಲ್ಲಿ ಸಾರ್ವಜನಿಕರು ಪಕ್ಷಾತೀತವಾಗಿ ಅಣಕು ಪ್ರದರ್ಶನ ಜೊತೆಗೆ ಪ್ರತಿಭಟನೆ ನಡೆಸಿದರು.ನಂತರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಮಲೆನಾಡು, ಬಯಲುಸೀಮೆ ,ಕರಾವಳಿಯನ್ನು ಒಳಗೊಂಡ ವಿಭಿನ್ನ ಪರಿಸರದಿಂದ ಒಡಗೂಡಿದ ಉತ್ತರ ಕನ್ನಡ ಜಿಲ್ಲೆಯ
ಜನಸಂಖ್ಯೆ ಸುಮಾರು ಹನ್ನೆರಡು ಲಕ್ಷದಷ್ಟು ಇದ್ದು ಇಲ್ಲಿಯ ಸಾರ್ವಜನಿಕರಿಗೆ ಮಾರಣಾಂತಿಕವಾದ ರೋಗವಾಗಲಿ ಅಪಘಾತವಾಗಿ ಸಂಭವಿಸಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಅಥವಾ ಮಂಗಳೂರು ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಕಾರಣ ಇಲ್ಲಿಯ ಜನತೆಗೆ ಅನುಕೂಲವಾಗುವಂತೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಅವಶ್ಯಕತೆ ಇದೆ.ಈಗಾಗಲೇ ನಮ್ಮ ಜಿಲ್ಲೆಯ ವಿವಿಧ ತಾಲೂಕುಗಳ ಅನೇಕ ರೋಗಿಗಳು ಮತ್ತು ಅಪಘಾತಕ್ಕೆ ಒಳಪಟ್ಟಿ ಗಾಯಾಳುಗಳು, ತುರ್ತು ಸಂದರ್ಭದಲ್ಲಿ ಚಿಕಿತ್ಸೆ ದೊರೆಯದೆ ಪ್ರಾಣವನ್ನು ಕಳೆದುಕೊಂಡ ಹಲವಾರು ದುರ್ಘಟನೆಗಳು ನಡೆದಿವೆ.
ಹಲವು ವರ್ಷಗಳಿಂದ ನಮ್ಮ ಜಿಲ್ಲೆಗೆ ಇಂತದೊಂದು ಆಸ್ಪತ್ರೆ ಬೇಕು ಎಂಬ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮುದ್ರಣ ಮಾಧ್ಯಮದಲ್ಲಿ ಹಾಗೂ ಸುದ್ದಿ ವಾಹಿನಿಗಳಲ್ಲಿ ಸಾಕಷ್ಟು ಬಾರಿ ಚರ್ಚೆಗಳು ನಡೆದಿವೆ. ತೀರಾ ಇತ್ತೀಚೆಗೆ ಶಿರೂರು ಟೋಲೈಟ್ ಬಳಿ ಸಂಭವಿಸಿದ ದುರಂತ ಅಪಘಾತದಲ್ಲಿ ನಾಲ್ಕರ ಅಮೂಲ್ಯ ಪ್ರಾಣ ಆಹುತಿಯಾಗಿದೆ.ನಮ್ಮ ಜಿಲ್ಲೆಯ ಜನ ಸಹನೆಯುಳ್ಳವರು ಆದರೆ ಇದೀಗ ಸಾರ್ವಜನಿಕರ ಸಹನೆ ಮಿತಿ ಮೀರಿದೆ, ಹೀಗಾಗಿ ಮುಂದಿನ ದಿನಗಳಲ್ಲಿ ತೀವ್ರ ತರವಾದ ಹೋರಾಟವನ್ನು ಕೈಗೊಳ್ಳುವ ಮೊದಲೇ ನಮ್ಮ ಜಿಲ್ಲೆಗೆ ಮಲ್ವಿಸ್ನೇಶಾಲಿಟಿ ಆಸ್ಪತ್ರೆ ಒದಗಿಸಿಕೊಡಬೇಕು.
ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.