ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲಿಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಬೇಕು ಎಂಬ ಕೂಗು ಹೆಚ್ಚಾಗುತ್ತಿದ್ದಂತೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಜಿಲ್ಲೆಯ ಕುಮಟಾದಲ್ಲಿ ಆಸ್ಪತ್ರೆ ತಲೆಎತ್ತಲಿದೆ.
ಈ ಕುರಿತು ಉಸ್ತುವಾರಿ ಸಚೀವ ಶ್ರೀನಿವಾಸ ಪೂಜಾರಿ ಬುಧವಾರ ಶಿರಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಶ್ರೀನಿವಾಸ ಪೂಜಾರಿ ಮಾತನಾಡಿ,ಜಿಲ್ಲೆಗೆ ಒಂದು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಅವಶ್ಯಕತೆ ಇರುವುದು ಸರಕಾರದ ಗಮನದಲ್ಲಿದೆ.ಜಿಲ್ಲೆಯ ಹೃದಯ ಭಾಗದಲ್ಲಿ ಒಂದು ಪೂರ್ಣ ಪ್ರಮಾಣದ ಸುಸಜ್ಜಿತವಾದ ಆಸ್ಪತ್ರೆ ಆಗಬೇಕು ಎನ್ನುವುದು ಜನಸಾಮಾನ್ಯರ ಬೇಡಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಆದ ಅಪಘಾತದಿಂದ ಈ ಆಸ್ಪತ್ರೆಯ ಕೂಗು, ಇನ್ನಷ್ಟು ಹೆಚ್ಚಾಗಿದೆ.
ಜಿಲ್ಲೆಯ ಹೃದಯ ಭಾಗವಾದ ಕುಮಟಾದ ಆಸು ಪಾಸಿನಲ್ಲಿ ಆಸ್ಪತ್ರೆ ಗೋಸ್ಕರ 15 ರಿಂದ 20 ಎಕರೆ ಜಾಗವನ್ನು ಕಾಯ್ದಿರಿಸಲು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೆನೆ
ಒಂದು ವಾರದಲ್ಲಿ ಈ ಕಾರ್ಯ ಪೂರ್ಣಗೊಳಿಸುತ್ತೇನೆ. ಶಿರಸಿ ಸಿದ್ದಾಪುರಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೊಂದಿಗೆ ಮಾತನಾಡಿ ಸುಸಜ್ಜಿತ ಆಸ್ಪತ್ರೆ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಯಾವುದೇ ಬೇಡಿಕೆ ಇಲ್ಲದಿದ್ದರು ಮುಖ್ಯಮಂತ್ರಿಯವರು ಕಾರವಾರದಲ್ಲಿ ಟ್ರಾಮಾ ಸೆಂಟರ್ ಮಾಡಬೇಕೆಂಬ ಪ್ರಸ್ತಾಪ ಮಾಡಿದ್ದಾರೆ.ಮುಂದಿನ ತಿಂಗಳು 10 ನೇ ತಾರೀಖಿನೊಳಗೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿ ಹೆಂಜಾ ನಾಯ್ಕ ಸೈನ್ಯ ಪೂರ್ವ ತರಬೇತಿ ಸಂಸ್ಥೆ ಉದ್ಘಾಟನೆ ಹಾಗೂ ನಾರಾಯಣಗುರು ಶಿಕ್ಷಣ ಸಂಸ್ಥೆ ಯ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ ಎಂದು ಪೂಜಾರಿ ಹೇಳಿದರು.