ಸಿದ್ದಾಪುರದಲ್ಲಿ ಜರ್ನಲಿಸ್ಟ್ ಯೂನಿಯನ್ ನಿಂದ ಮಾಧ್ಯಮ ದಿನಾಚರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಉ.ಕ.ಜಿಲ್ಲಾಘಟಕದಿಂದ ಮಾಧ್ಯಮದಿನಾಚರಣೆ ಮೂವರು ಸಾಧಕರಿಗೆ ಸನ್ಮಾನ ಮೂವರು ಯುವಉತ್ಸಾಹಿಗಳಿಗೆ
ಅಭಿನಂದನೆ ಹಾಗೂ ಕನ್ನಡದಲ್ಲಿ ಪತ್ರಿಕೆಯನ್ನು ಪ್ರಾರಂಭಿಸುವ ಮೂಲಕ ಕನ್ನಡಪತ್ರಿಕೋದ್ಯಮಕ್ಕೆ ಓಂಕಾರ ಹಾಕಿದ್ದ ಹರ್ಮನ್ ಮೊಗ್ಲಿಂಗ್ ಹೆಸರಲ್ಲಿ ನೀಡುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.

ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತ ದಿನೇಶ ಅಮ್ಮಿನಮಟ್ಟು ಮಾತನಾಡಿ,ಪತ್ರಿಕಾ ಪ್ರಕಟಣೆ ಉದ್ಯಮವಾಗಿ ಬದಲಾಗಿರುವ ಸನ್ನಿವೇಶದಲ್ಲಿ ಪತ್ರಕರ್ತನಾದವನಿಗೆ ಕೇವಲ ಆತ್ಮಸ್ಥೈರ್ಯ ಇದ್ದರೆ ಸಾಲುದು ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳಬೇಕು
ಪತ್ರಿಕೆ ಇಲ್ಲದ ಕಾಲದಲ್ಲೂ ಜನಜೀವನ ಎಂದಿನಂತೆ ನಡೆಯುತ್ತಿತ್ತು ಆಗ ಸಂವಹನ ಬೇರೆ ರೀತಿಯಲ್ಲಿ ನಡೆಯುತ್ತಿತ್ತು. ಪತ್ರಿಕೆ ಎಂದರೆ ಸತ್ಯವನ್ನು ಹೇಳುವುದು ಪತ್ರಿಕೆಯಲ್ಲಿ ಸಣ್ಣ
ದೊಡ್ಡ ಎಂದೇನೂ ಇಲ್ಲ ಅದು ಏನನ್ನು ಹೇಳುತ್ತದೆ ಎನ್ನುವುದು ಮುಖ್ಯವಾಗಿರುತ್ತದೆ.ಇಂದು ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಕೊಡುತ್ತಿರುವುದು ಪತ್ರಿಕೆ ಮತ್ತು ರೈತ ಮಾತ್ರ ಆದರೆ ಪತ್ರಿಕೆಗೆ ಬೇರೆ ಬೇರೆ ಮೂಲಗಳಿಂದ ಆದಾಯವನ್ನು ಹುಟ್ಟು ಹಾಕಬಹುದು ರೈತ ಮಾತ್ರ ಇಂದಿಗೂ ಅಸಹಾಯಕನಾಗಿದ್ದಾನೆ.

ಪತ್ರಿಕೆಗೆ ಓದುಗನಿಗಿಂತ ಮಾರಾಟಗಾರ,ಜಾಹೀರಾತುಗಾರ ಮುಖ್ಯನಾಗಿದ್ದಾನೆ ಇಂತಹ ಕಾಲಘಟ್ಟದಲ್ಲಿ ಪತ್ರಕರ್ತ ಸತ್ಯವನ್ನು ಬರೆಯುವ ಪ್ರಯತ್ನಕ್ಕಿಂತ ಜನರಿಗಾಗಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಸಾಮಾಜಿಕ ಜವಾಬ್ದಾರಿ ಇಲ್ಲದ ಯಾವುದೇ ಕೆಲಸವೂ ಗೌಣವಾಗಿರುತ್ತದೆ. ರಾಜ್ಯಮಟ್ಟದ ಪತ್ರಿಕೆಗಿಂತ ಗ್ರಾಮೀಣ ಪ್ರದೇಶದಲ್ಲಿರುವ ಸಣ್ಣ ಪತ್ರಿಕೆಗಳು ಇಂದು ಹೆಚ್ಚು ಜವಾಬ್ದಾರಿಯಾಗಿ ಕೆಲಸ ಮಾಡುತ್ತಿವೆ ಪತ್ರಕರ್ತ ಪತ್ರಿಕೆಯ ವಿಸ್ತಾರವನ್ನು ನೋಡದೆ ವರದಿಯನ್ನು ಪ್ರಾಮಾಣಿಕವಾಗಿ ಸತ್ಯನಿಷ್ಠವಾಗಿ ಬರೆಯಬೇಕು ಎಂದು ಹೇಳಿದರು.

ಹಿಂದಿಗಿಂತ ಇಂದು ಸಾಕ್ಷರರು ಹೆಚ್ಚಾಗುತ್ತಿದ್ದಾರೆ ಆದರೆ ಮೌಲ್ಯಗಳು ಕುಸಿಯುತ್ತಿವೆ. ಮೋಸ,ವಂಚನೆ ಮಾಡುತ್ತಿರುವವರೆಲ್ಲರೂ ಸಾಕ್ಷರರೆ ಆಗಿದ್ದಾರೆ.ಪ್ರತಿಯೊಂದರಲ್ಲೂ ಜಾತಿ,ಧರ್ಮವನ್ನು ಎಳೆದು ತರುತ್ತಿದ್ದೇವೆ ವಿದ್ಯೆ ನಮ್ಮನ್ನು ಬೌಧ್ಧಿಕ ದಾಸ್ಯದಿಂದ ಬಿಡುಗಡೆ ಮಾಡಬೇಕು ಸತ್ಯವನ್ನು ಹೇಳುವ ಧೈರ್ಯ ನೀಡಬೇಕು. ಆದರೆ ಇಂದು ಸತ್ಯದ ಧ್ವನಿ ಅಡಗುತ್ತಿದೆ ಪಠ್ಯ-ಪುಸ್ತಕ ಪರಿಷ್ಕರಣೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ ಸರಕಾರ ಏನಾದರೂ ಮಾಡಲಿ ಬೋಧನೆ ಮಾಡುವವರು ಶಿಕ್ಷಕರು ತಾನೇ ಅಂಬೇಡ್ಕರ ಬಗ್ಗೆ ಅಥವಾ ಇನ್ಯಾವುದೇ ಸತ್ಯದ ಬಗ್ಗೆ ಅವರು ಮಕ್ಕಳಿಗೆ ತಿಳಿಸಬೇಕು ಆದರೆ ದುರ್ದೈವ ಎಂದರೆ ಶಿಕ್ಷಕರ ಕೇಸರೀಕರಣ ಆಗುತ್ತಿರುವುದು ಎಂದು ಹೇಳಿದರು.

ಅಂಕಣಕಾರ ರಾಮಪ್ಪ ಡಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧಕರಾದ ಡಾ.ಮಹೇಂದ್ರಕುಮಾರ,ಹೇಮಂತ ರಾಮಡಗಿ,ಶಂಕರ ಸಿ.ಎ,ಯವರನ್ನು ಸನ್ಮಾನಿಸಲಾಯಿತು.ಯುವ ಸಮೂಹದ ಲೋಹಿತ್ ನಾಯ್ಕ,ಪ್ರಥ್ವಿರಾಜ ಪಾಟೀಲ,ಗಣೇಶ ನಾಯ್ಕರನ್ನು ಸನ್ಮಾನಿಸಲಾಯಿತು.

ಯೂನಿಯನ್‍ನ ರಾಜ್ಯಾಧ್ಯಕ್ಷ ಬಿ.ನಾರಾಯಣ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾದ್ಯಕ್ಷ ಮನಮೋಹನ ನಾಯ್ಕ ಉಪಸ್ತಿತರಿದ್ದರು. ಯೂನಿಯನ್‍ನ ಗೌರವಾಧ್ಯಕ್ಷ ಕನ್ನೇಶ ನಾಯ್ಕ ಕೋಲಸಿರ್ಸಿ ಪ್ರಾಸ್ತಾವಿಕ ಮಾತನಾಡಿದರು. ಸುರೇಶ ಮಡಿವಾಳ ಕಡಕೇರಿ ನಿರೂಪಣೆ ಮಾಡಿದರು. ನಾಗರಾಜ ಜೋಗಿ ದೇಶಭಕ್ತಿ ಗೀತೆ ಹಾಡಿದರು.

About the author

Adyot

Leave a Comment