ಸಿದ್ದಾಪುರ : ಸೂರ್ಯ ತನ್ನ ದಿಕ್ಕನ್ನು ಬದಲಾಯಿಸುವ ಉತ್ತರಾಯನ ಪುಣ್ಯಕಾಲ ಮಕರ ಸಂಕ್ರಮಣದ ದಿನವಾದ ಇಂದು ಆದ್ಯೋತ್ ವೆಬ್ ನ್ಯೂಸ್ ಲೋಕಾರ್ಪಣೆಗೊಂಡಿತು.
ಸಿದ್ದಾಪುರದ ಭಾನ್ಕುಳಿಯ ಗೋಸ್ವರ್ಗದಲ್ಲಿ ನಡೆದ ಗೋದಿನದ ಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಶ್ರೀರಾಮಚಂದ್ರಾಪುರಮಠ ರವರು ತಮ್ಮ ಅಮೃತ ಹಸ್ತದಿಂದ ವೆಬ್ ನ್ಯೂಸ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಆದ್ಯೋತ್ ಅಂದರೆ ಬೆಳಕು ಎಂದರ್ಥ. ಒಳಗಡೆ ಹಾಗೂ ಹೊರಗಡೆ ಬೆಳಕು ಚೆಲ್ಲು ಅನ್ನೋ ಅರ್ಥದ ಈ ವೆಬ್ ನ್ಯೂಸ್ ವಿಶ್ವಕ್ಕೇ ಬೆಳಕು ಚೆಲ್ಲುವಂತಾಗಲಿ. ಎಲ್ಲ ದಿನಗಳನ್ನು ಆಚರಿಸೋ ನಾವು ಗೋದಿನವನ್ನ ಕೂಡ ಆಚರಿಸಬೇಕು. ವಿಶ್ವಕ್ಕೆ ಮಾತೆಯಾದ ಗೋಮಾತೆಯ ದಿನವನ್ನ ಸಂಕ್ರಮಣ ಪುಣ್ಯಕಾಲದಂದು ನಾವೇ ಆಚರಿಸೋ ಮೂಲಕ ದೇಶದ ಸರ್ಕಾರ ಹಾಗೂ ವಿಶ್ವಸಂಸ್ಥೆಗೆ ಸಂದೇಶವನ್ನ ನೀಡೋಣ. ಉತ್ತರಾಯಣ ಪುಣ್ಯಕಾಲವು ದೇಶಕ್ಕೆ ಒಳ್ಳೇದನ್ನ ಮಾಡಲಿ ಎಂದು ಶುಭಹಾರೈಸಿದರು.
ವೆಬ್ ನ್ಯೂಸ್ ಜಗತ್ತಿನಲ್ಲಿ ಮೊದಲ ಪುಟಾಣಿ ಹೆಜ್ಜೆ ಇಡುತ್ತಿರೋ ಈ ಆದ್ಯೋತ್ ವೆಬ್ ನ್ಯೂಸ್ ಪೋರ್ಟಲ್ ಗೆ ನಿಮ್ಮೆಲ್ಲರ ಸಹಕಾರ ಬಹುಮುಖ್ಯವಾದುದು. ದಯವಿಟ್ಟು ಆದ್ಯೋತ್ ಪೋರ್ಟಲ್ ಗೆ ಲಾಗಿನ್ ಆಗಿ. ಫೇಸ್ಬುಕ್, ಟ್ವಿಟ್ಟರ್, ಯೂಟ್ಯೂಬ್ ಹಾಗೂ ವೆಬ್ಸೈಟ್ ಗಳಲ್ಲಿ ನಮ್ಮ ನ್ಯೂಸ್ ಪೋರ್ಟಲ್ ಲಭ್ಯವಿದೆ.
ವೆಬ್ಸೈಟ್ – www.adyot.news
ಫೇಸ್ಬುಕ್ – www.facebook.com/adyotnews/
ಟ್ವಿಟ್ಟರ್ – https://twitter.com/AdyotNews?s=09
ಯೂಟ್ಯೂಬ್ – https://www.youtube.com/channel/UCSNUjx094j8iYc3p2avfaKg
ಲೈಕ್ ಹಾಗೂ ಫಾಲೋ ಮಾಡಿ.
congratulations.. mava
Nice news