ಆದ್ಯೋತ್ ಸುದ್ದಿನಿಧಿ
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಿ ಅಂಗೀಕರಿಸಿದೆ.ಸಿದ್ದರಾಮಯ್ಯ ನೇತೃತ್ವದ ವಿರೋಧ ಪಕ್ಷ ಇದನ್ನು ಬಲವಾಗಿ ವಿರೋಧಿಸಿತ್ತು. ಆದರೆ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಈ ಕಾನೂನು ಮಂಡಿಸುವ ಪ್ರಸ್ತಾಪವಾಗಿತ್ತು ಎನ್ನುವ ಅಸ್ತ್ರವನ್ನು ಪ್ರಯೋಗಿಸಿ ಕಾಂಗ್ರೆಸ್ ನ ಕೈಯನ್ನು ಕಟ್ಟಿಹಾಕುವಲ್ಲಿ ಸರಕಾರ ಯಶಸ್ವಿಯಾಗಿತ್ತು ಆದರೂ ಸಿದ್ದರಾಮಯ್ಯ ತಾವು ಅಧಿಕಾರಕ್ಕೆ ಬಂದರೆ ಈ ಕಾಯ್ದೆಯನ್ನು ರದ್ದು ಪಡಿಸುತ್ತೇವೆ ಎನ್ನುವ ಮಾತನಾಡಿದ್ದಾರೆ.
ಇದು ಕೇವಲ ಎರಡು ಪಕ್ಷಗಳ ರಾಜಕೀಯ ವಸ್ತು ಆಗಬಾರದು ಇದರ ಅವಶ್ಯಕತೆ ಇದೆಯೇ? ಇದರಿಂದ ಯಾವುದಾದರೂ ಧರ್ಮಕ್ಕೆ ಲಾಭ ಆಗಬಹುದೇ? ಇನ್ನೊಂದು ಧರ್ಮಕ್ಕೆ ಅನ್ಯಾಯವಾಗಬಹುದೇ? ಗೊತ್ತಿಲ್ಲ.
ಆದರೆ ಈ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು ಸರಿಯೋ? ತಪ್ಪೋ? ಈ ಬಗ್ಗೆ ಜನಸಾಮಾನ್ಯರ ಅಭಿಪ್ರಾಯವೇನು ಎಂಬ ಬಗ್ಗೆ ಆದ್ಯೋತ್ ನ್ಯೂಸ್ ಸಾರ್ವಜನಿಕರ ಅಭಿಪ್ರಾಯ ಕ್ರೋಢಿಕರಿಸಲು ಮತದಾನವನ್ನು ಆಯೋಜಿಸಿದೆ. ಇದರಲ್ಲಿ ಆದ್ಯೋತ್ ನ್ಯೂಸ್ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
ಓದುಗರು ಮತದಾನ ಮಾಡಲು ಏನು ಮಾಡಬೇಕು?
ನಾಳೆ ಆದ್ಯೋತ್ ನ್ಯೂಸ್ ವೆಬ್ಸೈಟ್ನಲ್ಲಿ ಪ್ರಕಟವಾಗುವ ಮತದಾನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ನಂತರ ಸರಿ ಅಥವಾ ತಪ್ಪು ಅನ್ನೋ ಆಪ್ಶನ್ ಆಯ್ಕೆ ಮಾಡಬೇಕು.