ಆದ್ಯೋತ್ ಸುದ್ದಿನಿಧಿ:
ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಡಾ. ಶಿವಕುಮಾರ ಸ್ವಾಮೀಜಿಯವರ 116 ಜನ್ಮದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಾಜಿ ಸಚೀವ ಆಂಜನೇಯ ಮಾತನಾಡಿ,ವಿದ್ಯೆ ಕಡಿಮೆಯಾದರೂ ಪರವಾಗಿಲ್ಲ ನಡತೆ ಶುದ್ಧವಾಗಿರಬೇಕು ಎಂದು ಹೇಳಿದ ಡಾಕ್ಟರ್ ಕರ್ನಾಟಕ ರತ್ನ ಶಿವಕುಮಾರ ಸ್ವಾಮೀಜಿಯವರ ಆದೇಶವನ್ನು ಪರಿಪಾಲನೆ ಮಾಡಬೇಕು ಆದ್ದರಿಂದ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ವೀರಶೈವಲಿಂಗಾಯತ ಯುವ ವೇದಿಕೆಯ ರಾಜ್ಯ ಕಾರ್ಯದರ್ಶಿ ಎಸ್ಎಂಎಲ್ ಪ್ರವೀಣ್ ಮಾತನಾಡಿ,ಶಿಕ್ಷಣಕ್ಕೆ ಮಹತ್ವ ನೀಡಿದ್ದ ಶಿವಕುಮಾರ ಸ್ವಾಮೀಜಿಯವರು ಬಡಮಕ್ಜಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಜೋಳಿಗೆಯೊಡ್ಡಿ ಬಿಕ್ಷಾಟನೆ ಮಾಡಿ ಬೃಹತ್ ವಿದ್ಯಾಸಂಸ್ಥೆಯನ್ನು ಕಟ್ಟಿದರು.ಜಾತಿ,ಮತ,ಪಂಥದ ಭೇದವಿಲ್ಲದೆ ಎಲ್ಲರೂ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದರು ಅವರ ಆದರ್ಶವನ್ನು ನಾವು ಪಾಲಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಪಿಸಿಸಿ ಸದಸ್ಯ
ಎಚ್ ಎನ್ ತಿಪ್ಪೇಸ್ವಾಮಿ,ಜಿಲ್ಲಾ ಪ್ರಚಾರ ಸಮಿತಿ
ಅಧ್ಯಕ್ಷ ಕೃಷ್ಣಮೂರ್ತಿ, ನಾಗೇಂದ್ರಪ್ಪ ಪಂಚಾಯಿತಿ ಅಧ್ಯಕ್ಷ ಮಂಜುಳಾ ಕರಿಬಸಪ್ಪ. ರಂಗವನಹಳ್ಳಿ ಹನುಮಂತಪ್ಪ, ಮೌನೇಶ್,ಮಂಜುನಾಥ್ ಜಹೀರ್ ಎಂಟಿಬಿ ಮಂಜುನಾಥ್ ಕುಬೇ ನಾಯಕ್ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು