ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಬಾಲಭವನದಲ್ಲಿ ತಾಲೂಕು ಕನ್ನಡಸಾಹಿತ್ಯಪರಿಷತ್ವತಿಯಿಂದ ಬುಧವಾರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ೧೦೦ ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಮಾತನಾಡಿ,ಕನ್ನಡ ಭಾಷೆ ಜಗತ್ತಿನ ಭಾಷೆಗಳಲ್ಲೆ ಶ್ರೇಷ್ಠವಾದುದು ನಮ್ಮ ಭಾಷೆಯ ಪ್ರೌಢಿಮೆ ಅಪಾರವಾದುದು. ಮಕ್ಕಳು ಮಾತೃಭಾಷೆಯಲ್ಲೆ ಅಧ್ಯಯನ ಮಾಡುವುದು ಒಳ್ಳೆಯದು ನಮ್ಮ ಮಾತೃಭಾಷೆಯಲ್ಲಿ ಒಂದು ಶಕ್ತಿ ಇದೆ. ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡುವುದರಿಂದ ಉದ್ಯೋಗಕ್ಕೆ ಸಮಸ್ಯೆ ಇಲ್ಲ. ಕನ್ನಡ ಮಾದ್ಯಮದಲ್ಲಿ ಕಲಿತ ಹಲವರು ದೊಡ್ಡ ಅಧಿಕಾರಿಗಳಾಗಿದ್ದಾರೆ,ಸಾಹಿತಿಗಳಾಗಿದ್ದಾರೆ,ರಾಜಕಾರಣಿಗಳಾಗಿದ್ದಾರೆ ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಕಲಿಯುವುದಕ್ಕೆ ಹಿಂಜರಿಯುವುದು ಬೇಡ. ಕನ್ನಡ ಭಾಷೆಯಲ್ಲಿ ಶೆ೧೦೦ ಅಂಕಪಡೆದವರಿಗೆ ಸನ್ಮಾನ ಮಾಡುತ್ತಿರುವ ಸಾಹಿತ್ಯಪರಿಷತ್ನ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ ಮಾತನಾಡಿ,ಮಕ್ಕಳು ಮೊಬೈಲ್ನಿಂದ ದೂರ ಇರಬೇಕು ತಮ್ಮ ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು ಆಗ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಜಿಲ್ಲಾಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆವಹಿಸಿದ್ದರು. ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆರ್.ಕೆ.ಹೊನ್ನೆಗುಂಡಿ ಅಭಿನಂದನಾ ನುಡಿಗಳನ್ನಾಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ಬಿ.ಆರ್. ಸಿ ಸಮನ್ವಯಾಧಿಕಾರಿ ಚೈತನ್ಯಕುಮಾರ್, ಅಕ್ಷರ ದಾಸೋಹದ ಭೂಮೇಶ, ಸ.ನೌ.ಸಂಘದ ಗೌರವಾಧ್ಯಕ್ಷ ಪ್ರಶಾಂತ ಜಿ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಸತೀಶ್ ಹೆಗಡೆ, ಪ್ರೌ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಆರ್.ನಾಯ್ಕ, ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಸ್.ಎಸ್.ಪಮ್ಮಾರ. ಸಭೆಯನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಪ್ರಾಸ್ತಾವಿಕ ಭಾಷಣ ಮಾಡಿದರು.ಶಿಕ್ಷಕಿ ಸುಮಿತ್ರಾ ಶೇಟ್ ಪ್ರಾರ್ಥಿಸಿದರು. ಎಸ್.ವಿ. ಪ್ರೌಢಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕೋಶಾಧ್ಯಕ್ಷ ಪಿ.ಬಿ. ಹೊಸೂರು ಸ್ವಾಗತಿಸಿದರು. ಸಿ.ಎಸ್. ಗೌಡರ ವಂದನಾರ್ಪಣೆ ಮಾಡಿದರು. ಚಂದ್ರಶೇಖರ ಕುಂಬ್ರಿಗದ್ದೆ , ಅಣ್ಣಪ್ಪ ನಾಯ್ಕ ನಿರ್ವಹಿಸಿದರು.