ಮುಂಡಗೋಡು: ಕರಡಿ ದಾಳಿಯಿಂದ ಮೃತನಾದ ರೈತನಿಗೆ15ಲಕ್ಷರೂ. ಪರಿಹಾರ ವಿತರಣೆ

ಆದ್ಯೋತ್ ಸುದ್ದಿನಿಧಿ:
ಮುಂಡಗೋಡ ತಾಲೂಕಿನ ಮರಗಡಿ ಗ್ರಾಮದ ರೈತ ಜಿಮ್ಮು ವಾಘು ತೋರವತ್ ಕಳೆದ ಎರಡು ದಿನದ ಹಿಂದೆ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ದಾಳಿ ಮಾಡಿ ರೈತನ ಕುತ್ತಿಗೆ,ಕೈ,ಕಾಲುಗಳಿಗೆ ಗಾಯಗೊಳಿಸಿ ತೀವ್ರ ರಕ್ತಸ್ರಾವದಿಂದ ರೈತ ಮೃತಪಟ್ಟಿದ್ದ‌


ಕರಡಿ ದಾಳಿಯಿಂದ ಮೃತಪಟ್ಟ ರೈತ ಕುಟುಂಬಕ್ಕೆ 48 ಗಂಟೆಗಳ ಒಳಗಾಗಿ 15 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ನ್ನು ಶಾಸಕ ಶಿವರಾಮ ಹೆಬ್ಬಾರ್ ವಿತರಿಸಿದರು.
ಶನಿವಾರ ಮೃತ ರೈತನ ಮನೆಗೆ ಭೇಟಿ ನೀಡಿದ ಶಿವರಾಮ ಹೆಬ್ಬಾರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಿ ಸಾಂತ್ವಾನ ಹೇಳಿದರು

About the author

Adyot

Leave a Comment