ಆದ್ಯೋತ್ ಸುದ್ದಿನಿಧಿ:
ಚವತಿ ಹಬ್ಬದಂದು ಮಣ್ಣಿನ ಗಣಪತಿಯನ್ನು ಪೂಜಿಸುವುದು ಸಂಪ್ರದಾಯ ಆಧುನಿಕ ಯುಗದಲ್ಲಿ ವಿವಿಧ ರೀತಿಯ ಗಣಪತಿಯನ್ನು ತಯಾರಿಸಲಾಗುತ್ತಿದೆ. ಈಗ ಗಣಪತಿ ತಯಾರಿಕೆಗೆ ಸಾಕಷ್ಟು ಅನುಕೂಲವೂ ಇದೆ.ಮೂರ್ತಿಯ
ಅಂದವನ್ನು ಹೆಚ್ಚಿಸಲು ಬಣ್ಣ ಸೇರಿದಂತೆ ಹಲವು ವಸ್ತುಗಳೂ ಸಿಗುತ್ತದೆ ಆದರೆ ಸಾಂಪ್ರದಾಯಿಕವಾಗಿ ಗಣಪತಿ ತಯಾರಿಸುವುದು ಮುಖ್ಯ ಈ ರೀತಿಯ ಗಣಪತಿ ತಯಾರಿಸುವಲ್ಲಿ ಸಿದ್ದಾಪುರದ ಭುವನಗಿರಿಯ ಸತ್ಯನಾರಾಯಣ ಒಬ್ಬರು.
ಕಳೆದ 20-25ವರ್ಷದಿಂದ ಮಣ್ಣಿನ ಗಣಪತಿ ಮೂರ್ತಿಯನ್ನು ತಯಾರಿಸುತ್ತಿರುವ ಇವರು ಈಗ ಸುಮಾರು 80-90 ಗಣಪತಿ ಮೂರ್ತಿಯನ್ನು ತಯಾರಿಸುತ್ತಿದ್ದಾರೆ.ಸಿದ್ದಾಪುರ ತಾಲೂಕಿನ ಹೆಚ್ಚಿನ ಸಾರ್ವಜನಿಕ ಗಣಪತಿಯನ್ನು ಇವರು ತಯಾರಿಸುತ್ತಿದ್ದಾರೆ.
5 ತಿಂಗಳದ ಹಿಂದಿನಿಂದ ಗಣಪತಿ ತಯಾರಿಕೆ ಪ್ರಾರಂಭಿಸುವ ಸತ್ಯನಾರಾಯಣ ಭುವನಗಿರಿಯವರು ಸಾಂಪ್ರದಾಯಿಕವಾಗಿ ಗಣಪತಿಯನ್ನು ತಯಾರಿಸುವ ಇವರು ಸಾದ್ಯವಾದಷ್ಟು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಬಣ್ಣಗಳನ್ನು ಬಳಸುತ್ತಾರೆ.ಇಂತಹ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕೆಲಸವಾಗಬೇಕು.