ಸಿದ್ದಾಪುರ ಹಾರ್ಸಿಕಟ್ಟಾ ಸೊಸೈಟಿ ನೂತನ ಕಟ್ಟಡ ಹಾಗೂ ಗೋದಾಮು ಉದ್ಘಾಟನೆ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದಲ್ಲಿ ನಿರ್ಮಾಣಗೊಂಡ ಅಮೃತ ಗ್ರಾಹಕರ ಮಳಿಗೆ ಹಾಗೂ ಎಪಿಎಂಸಿ ನಿರ್ಮಿಸಿರುವ ಗೋದಾಮು ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು.

ನೂತನ ಕಟ್ಟಡದ ಸಂಕೀರ್ಣ ಉದ್ಘಾಟಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಹಾರ್ಸಿಕಟ್ಟಾ ಸಾಂಸ್ಕೃತಿಕವಾಗಿ ಗುರುತಿಸಿಕೊಂಡ ಸ್ಥಳ. ಇಲ್ಲಿ ಇತ್ತೀಚಿನ ವರ್ಷದಲ್ಲಿ ಸಹಕಾರಿ ಕ್ಷೇತ್ರವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಕಾರಿ ಕ್ಷೇತ್ರವನ್ನು ಬಲಿಷ್ಟಗೊಳಿಸಲು ಮುಂದಾಗಿದೆ.೯೧ ಲಕ್ಷ ಹಣವನ್ನು ನಬಾರ್ಡ್ ನಿಂದ ಕಟ್ಟಡಕ್ಕೆ ಕೊಡಲಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಯಾದ ಮೇಲೆ ಸಹಕಾರಿ ಕ್ಷೇತ್ರದ ಬದಲಾವಣೆಗೆ ದೊಡ್ಡ ರೀತಿಯಲ್ಲಿ ಕಾರಣಿಭೂತರಾಗಿದ್ದಾರೆ. ಪ್ರತ್ಯೇಕವಾಗಿ ಇಲಾಖೆಯನ್ನು ಮಾಡಿ ಅಮಿತ್ ಶಾ ರವರಂತಹ ಹಿರಿಯ ಹಿರಿಯರನ್ನು ಸಚಿವರನ್ನಾಗಿ ಮಾಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಸಾಪ್ಟವೇರ್ ಅನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎನ್ನುವುದನ್ನು ಕೇಂದ್ರ ತಂಡ ಜಿಲ್ಲೆಯ ಬೈರುಂಬೆಗೆ ಬಂದು ಅಧ್ಯಯನ ನಡೆಸಿ ಈಗ ದೇಶದೆಲ್ಲೆಡೆ ಇಂಪ್ಲಿಮೆAಟೇಶನ್ ಮಾಡುತ್ತಿದೆ. ಇದಕ್ಕೆ ಸಹಕಾರಿ ಕ್ಷೇತ್ರದ ಅನೇಕ ಹಿರಿಯ ಕೊಡುಗೆ ಇದೆ ಎಂದು ಹೇಳಿ ಇನ್ನು ಏಳು ದಿನದೊಳಗೆ ರೈತರ ಬೆಳೆ ವಿಮೆ ಅವರ ಖಾತೆಗೆ ಜಮಾ ಆಗಲಿದೆ ಎಂದು ಹೇಳಿದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ಸಹಕಾರಿ ಸಂಸ್ಥೆ ರೈತರಿಗೆ ಜೀವಾಳ ಇದ್ದಂತೆ. ರೈತರ ಸಂಕಷ್ಟಕ್ಕೆ ಸಹಕಾರಿ ಸಂಘಗಳು ಸ್ಪಂದಿಸುತ್ತಿರುವುದು ಆಶಾದಾಯಕವಾಗಿದೆ. ಪಾರದರ್ಶಕವಾದ ಸೇವೆಯನ್ನು ಸಲ್ಲಿಸುತ್ತಿರುವ ಸಹಕಾರಿ ಸಂಘಗಳ ಮೇಲೆ ಸಹಕಾರಿ ಇಲಾಖೆ ಅಧಿಕಾರಿಗಳು ತಮ್ಮ ಹಸ್ತಕ್ಷೇಪ ನಡೆಸುತ್ತಿರುವುದು ಕಂಡು ಬರುತ್ತಿದ್ದು ಇದು ನಿಲ್ಲಬೇಕಾಗಿದೆ.ರೈತರಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಬೆಳೆಯಬೇಕು. ಜಿಲ್ಲೆಯಲ್ಲಿ ಅನೇಕರು ಸಹಕಾರಿ ಸಂಘಗಳು ಬೆಳೆಯಲು ಕಾರಣೀಕರ್ತರಾಗಿದ್ದಾರೆ. ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಉಳಿಸಿಕೊಂಡು ಹೋಗುವುದು ಮುಖ್ಯ. ಸಹಕಾರಿ ಸಂಘಗಳು ನಮ್ಮದು ಎನ್ನುವ ಭಾವನೆ ಎಲ್ಲರಲ್ಲಿಯೂ ಬಂದರೆ ಮಾತ್ರ ಸಂಸ್ಥೆ ಅಭಿವೃದ್ಧಿಯಾಗುತ್ತದೆ. ಶಾಸಕರ ಅನುದಾನದಡಿಯಲ್ಲಿ ಸಂಘದ ಅಭಿವೃದ್ಧಿಗೆ ೫ಲಕ್ಷ ರೂಗಳನ್ನು ನೀಡುತ್ತೇನೆ ಎಂದು ಹೇಳಿದರು.

ಕೃಷಿ ಸೇವಾ ಮತ್ತು ಸಂಘದ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ, ಅಡಕೆ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ.ಅಡಕೆ ಕ್ಷೇತ್ರ ಬೆಳೆಯುತ್ತಿರುವುದನ್ನು ನೋಡಿದರೆ ಬೆಳೆಗಾರರ ಸ್ಥಿತಿ ಮುಂದಿನ ದಿನದಲ್ಲಿ ಚಿಂತಾಜನಕವಾಗಿದೆ. ಬಯದ ವಾತಾವರಣದಲ್ಲಿ ಕಾಲಕಳೆಯುವಂತಾಗಿದೆ. ಸಹಕಾರಿ ಸಂಘಗಳು ಶಿಸ್ತನ್ನು ಅಳವಡಿಸಿಕೊಳ್ಳುವುದರ ಜತೆಗೆ ಸಂಘದ ಸದಸ್ಯರಿಗೆ ಆರ್ಥಿಕ ಶಿಸ್ತನ್ನು ಕಲಿಸಬೇಕಾಗಿದೆ. ಸದಸ್ಯರು ಸಂಘದ ಶಕ್ತಿಯನ್ನು ನೋಡಿ ಸಾಲ ಕೇಳಬೇಡಿ. ನಿಮ್ಮ ಬೆಳೆಯನ್ನು, ಜೀವನದ ನಿರ್ವಹಣೆಯನ್ನು ನೋಡಿಕೊಳ್ಳಬೇಕು. ಸಾಲದ ಸಂಕೋಲೆಯಿAದ ಹೊರ ಬರಬೇಕಾಗಿದೆ. ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳದಿದ್ದರೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಡಿಸಿಸಿ ಬ್ಯಾಂಕ್‌ಗೆ ಎಷ್ಟೇ ಹಣಬರುವುದಿದ್ದರೂ ಪ್ರಾಥಮಿಕ ಸಂಘಗಳಿಗೆ ನಾವು ಆರ್ಥಿಕ ಸಹಕಾರ ನೀಡುತ್ತಿರುವುದನ್ನು ತಡೆಯಲಿಲ್ಲ. ಸಂಘದ ಸದಸ್ಯರು ಸಂಘದೊAದಿಗೆ ವ್ಯವಹಾರ ಮಾಡುವಂತೆ ತಿಳಿಸಿದರು.

ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅವರು ನೂತನ ಕಟ್ಟಡದ ಮೊದಲ ಮಹಡಿ ಉದ್ಘಾಟಿಸಿದರು.ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತಿç ಬಿಳಗಿ, ಶಿರಸಿ ಕದಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿAಗ ಹೆಗಡೆ ನಿಡಗೋಡ, ಹಾರ್ಸಿಕಟ್ಟ ಗ್ರಾಪಂ ಅಧ್ಯಕ್ಷೆ ಹನುಮಕ್ಕ ರಂಗಪ್ಪ ಭೋವಿ, ಉಪಾಧ್ಯಕ್ಷ ಸಿದ್ದಾರ್ಥ ಡಿ.ಗೌಡರ್ ಇತರರಿದ್ದರು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ವಂದನಾ ಹೆಗಡೆ, ಪವಿತ್ರಾ ಹೆಗಡೆ, ಪವಿತ್ರಾ ಗೌಡ ಪ್ರಾರ್ಥನೆ ಹಾಡಿದರು. ನರೇಂದ್ರ ಹೆಗಡೆ ಹೊಂಡಗಾಸಿಗೆ, ದಿನೇಶ ಹೆಗಡೆ ಚಳ್ಳೆಹದ್ದ, ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.

About the author

Adyot

Leave a Comment