
ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಶಾಸಕ ಭೀಮಣ್ಣ ನಾಯ್ಕ
ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ವಿವಿಧಕಟ್ಟಡವನ್ನು,ಮಳೆನೀರುಕೊಯ್ಲು ಘಟಕವನ್ನು ಉದ್ಘಾಟಿಸಿದರು.ನಂತರ ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾಗುವ ಯಂತ್ರೋಪಕರಣಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭೀಮಣ್ಣ ನಾಯ್ಕ,ಕೃಷಿಉತ್ಪನ್ನಮಾರುಕಟ್ಟೆ ಸಮಿತಿಯಿಂದ ರೈತರಿಗೆ ಯಾವೆಲ್ಲ ಸೌಲಭ್ಯ ಸಿಗುತ್ತದೆ ಎಂಬುದನ್ನು ತಿಳಿಸಲು ರೈತಸಂಪರ್ಕ ಸಭೆ ನಡೆಸಬೇಕು.ಎಪಿಎಂಸಿಯಿಂದ ರೈತರಿಗೆ ಸಾಕಷ್ಟು ಸೌಲಭ್ಯಗಳು ಸಿಗುತ್ತವೆ. ಕೃಷಿ ಚಟುವಟಿಕೆ ಯಲ್ಲಿ ತೊಡಗಿದ್ದಾಗ ಅವಘಡಗಳು ಸಂಭವಿಸಿದರೆ ಪರಿಹಾರ ಸಿಗುತ್ತದೆ.ಆದರೆ ಇದರ ಬಗ್ಗೆ ಎಷ್ಟೋ ರೈತರಿಗೆ ಮಾಹಿತಿಯೇ ಇಲ್ಲ. ಇದಕ್ಕಾಗಿ ಎಪಿಎಂಸಿ ಅಧಿಕಾರಿಗಳು ರೈತಸಂಪರ್ಕ ಸಭೆಯನ್ನು ನಡೆಸಬೇಕು. ಈ ಸಭೆಗೆ ಹೆಚ್ಚಿನ ರೈತರು ಸೇರುವಂತೆ ಮಾಡಬೇಕು.ಸಭೆಯಲ್ಲಿ ತೋಟಗಾರಿಕೆ, ಕೃಷಿ,ಕಂದಾಯ ಸೇರಿದಂತೆ ರೈತರಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭಾಗವಹಿಸಬೇಕು,ಸಹಕಾರಿ ಸಂಘದ ಅಧ್ಯಕ್ಷರನ್ನು,ಪದಾಧಿಕಾರಿಗಳನ್ನು ಆಹ್ವಾನಿಸಬೇಕು ಈ ಸಭೆಯಲ್ಲಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು, ಅದನ್ನು ಪಡೆಯಲು ಮಾಡಬೇಕಾದ ಕಾಗದಪತ್ರಗಳ ಬಗ್ಗೆ ಮಾಹಿತಿ ನೀಡಬೇಕು ಇದರಿಂದ ರೈತರ ಮನೋಸ್ಥೈರ್ಯ ಹೆಚ್ಚಾಗುತ್ತದೆ
ಎಂದು ಹೇಳಿದರು

ಎಪಿಎಂಸಿಯ ಆರು ಗೋದಾಮುಗಳ ಉದ್ಘಾಟನೆಯನ್ನು ಮಾಡಲಾಗಿದೆ ವ್ಯಾಪಾರಸ್ಥರು ಇದರ ಉಪಯೋಗ ಪಡೆದುಕೊಳ್ಳಬೇಕು.ಮಳೆನೀರು ಕೊಯ್ಲಿನ ಉದ್ಘಾಟನೆಯನ್ನೂ ಮಾಡಿದ್ದೆನೆ ಮಲೆನಾಡಿನಲ್ಲಿ ಮಳೆನೀರಿನ ಕೊಯ್ಲಿನ ಅವಶ್ಯಕತೆ ಇಲ್ಲ ಎಂದು ಕೆಲವರು ಹೇಳುತ್ತಾರೆ ಆದರೆ
ಎರಡು ವರ್ಷದ ಹಿಂದೆ ತಾಲೂಕಿನಲ್ಲಿ ನೀರಿನ ಅಭಾವ ಆಗಿತ್ತು ಮಳೆನೀರಿನ ಕೊಯ್ಲಿನಿಂದ ಅಂತರ್ಜಲ ಹೆಚ್ಚುತ್ತದೆ. ಎಪಿಎಂಸಿ ಉತ್ತಮ ಕಾರ್ಯವನ್ನು ಮಾಡಿದೆ. ಎಲ್ಲಾ ಇಲಾಖೆಯವರು,ಸಂಘಸಂಸ್ಥೆಗಳು ಮಳೆನೀರಿನ ಕೊಯ್ಲು ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು

ನಂತರ ಕೃಷಿ ಉಪಕರಣಗಳನ್ನು ರೈತರಿಗೆ ವಿತರಿಸಿ,ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚ ಬೇಕು.ಇದರಿಂದ ಮಾನವ ಶಕ್ತಿಯ ಉಪಯೋಗ ಕಡಿಮೆಯಾಗುವುದಲ್ಲದೆ ಸಮಯದ ಉಳಿತಾಯ,ಹಣಕಾಸಿನ ಉಳಿತಾಯದ ಜೊತೆಗೆ ಉತ್ತಮ ಬೆಳೆಯನ್ನು ಪಡೆಯಬಹುದು ಎಂದು ಹೇಳುದರು.

ಸಭೆಯಲ್ಲಿ ತಹಸೀಲ್ದಾರ ಎಂ.ಆರ್.ಕುಲಕರ್ಣಿ ಟಿಎಂಎಸ್ ಅಧ್ಯಕ್ಷ ಆರ್ಎಂಹೆಗಡೆ ಬಾಳೇಸರ,ಕೃಷಿಮಾರಾಟ ಸಮಿತಿಯ ಸಹಾಯಕ ನಿರ್ದೇಶಕ ಮಂಗೇಶ ನಾಯಕ,ಕಾರ್ಯದರ್ಶಿ ಆಶಾ, ಮುಂತಾದವರು ಉಪಸ್ಥಿತರಿದ್ದರು.

