
ಆದ್ಯೋತ್ ಸುದ್ದಿನಿಧಿ:
ಕಳೆದೆರಡು ಸಂಚಿಕೆಗಳಲ್ಲಿ ಕಲಿಕಾ ಅಸಮಥ೯ನೆಗಳು , ಗುಣ ಲಕ್ಷಣಗಳು , ಪರಿಹಾರ ಮಾಗ೯ಗಳ ಬಗ್ಗೆ ತೀಳಿದು ಕೊಂಡಿದ್ದಿರೆಂದು ಭಾವಿಸುತ್ತ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಯಾರಾದರು ಮಕ್ಕಳು ಈ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದರೇ ನಿಲ೯ಕ್ಷಿಸದೆ ಸಹಾಯ ಹಸ್ತವನ್ನು ಚಾಚುತ್ತಿರೆಂದು ನಂಬುತ್ತೆನೆ . ಹಾಗಿದ್ದರೆ ಅಸಮಥ೯ನೆಗಳನ್ನು ಹೊಂದಿದ ವ್ಯಕ್ತಿಗಳು ಮೂಲೆ ಗುಂಪಾಗಿಯೆ ಉಳಿಯುತ್ತಾರೆಯೆ ? ಯಾವುದೆ ರೀತಿಯ ಸಾಧನೆ ಮಾಡದೆ ಬರಿ ಅನುಕಂಪನ ಆಧಾರದ ಮೆಲೆಯೆ ಜೀವಿಸುತ್ತಿದ್ದಾರೆಯೆ ಎಂದು ತೀಳಿಯೊಣ .
ಮನಶಕ್ತಿಯ ಮುಂದೆ ಯಾವುದೆ ರೀತಿಯ ಶಕ್ತಿಗಳು ಗೆಲ್ಲಲಾರದು ಆತ್ಮಸ್ಥೈಯ೯ , ಛಲ್ , ಗೆಲ್ಲಬೇಕೆಂಬ ಹಂಬಲವಿದ್ದು ದೃಡ ಮನಸ್ಸಿನಿಂದ ಸಂಕಲ್ಪ ಮಾಡಿ ಮುನ್ನುಗ್ಗಿದರೆ ಯಾವುದೆ ಕೆಲಸವು ಕಷ್ಟವಾಗುವುದಿಲ್ಲ ಹಾಗಿದ್ದರೇ ಇವೆಲ್ಲವು ಕೇವಲ ಮಾತಿನಲ್ಲಿ ಮಾತ್ರವಲ್ಲದೆ ಸಾಧನೆ ಮಾಡಿದವರ ಬಗ್ಗೆ ಕಿರು ಪರಿಚಯ ಮಾಡಿಕೊಳ್ಳೊಣ;
ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದವರು ;-
*1-ಆಲ್ಬರ್ಟ್ ಐನ್ಸ್ಟೈನ್ (Dyslexia)
ವಿಶ್ವ ಕಂಡಂತಹ ಪ್ರಸಿದ್ಧ ಭೌತಶಾಸ್ತ್ರಜ್ಞ ಹಾಗು ವಿಜ್ಞಾನ ಕ್ಷೇತ್ರದಲ್ಲಿ ಈವರ ಸಾಧನೆ , ಕೊಡುಗೆ ಅಪಾರ. ಬಾಲ್ಯದಲ್ಲಿ ಓದಲು , ಬರೆಯಲು ಕಷ್ಟಪಟ್ಟರೂ ನಂತರ ಸಾಪೇಕ್ಷತೆಯ ಸಿದ್ಧಾಂತ ( Theory of Relativity)ಯನ್ನು ನೀಡಿ ವಿಜ್ಞಾನ ಕ್ಷೇತ್ರವನ್ನು ಕ್ರಾಂತಿಕಾರಿಯಾಗಿ ಬದಲಿಸಿದರು.
2-ಥಾಮಸ್ ಎಡಿಸನ್ (Dyslexia, ADHD ಲಕ್ಷಣಗಳು)
ವಿದ್ಯುತ್ ದೀಪದ ಆವಿಷ್ಕಾರಕರು ಇವರನ್ನು ಶಾಲೆಯಲ್ಲಿ “ಮಂದಮತಿ” ( slow learner ) ಎಂದು ಪರಿಗಣಿಸಲ್ಪಟ್ಟರೂ, ಜಗತ್ತಿಗೆ ಸಾವಿರಾರು ಆವಿಷ್ಕಾರಗಳನ್ನು ಕೊಟ್ಟರು.
3- ಸ್ಟೀವನ್ ಸ್ಪೀಲ್ಬರ್ಗ್ (Dyslexia)
ಹಾಲಿವುಡ್ನ ದಂತಕಥೆ ಹಾಗು ಜನಪ್ರಿಯ ಚಲನಚಿತ್ರ ನಿರ್ದೇಶಕರು ಓದುವುದರಲ್ಲಿ ತುಂಬಾ ಕಷ್ಟಪಡುತ್ತಿದ್ದರು ( reading difficulties) ಶಾಲೆಯಲ್ಲಿ ಹಿಂಬಾಗಿದ್ದರು, ಆದರೆ ನಂತರ ವಿಶ್ವದ ಶ್ರೇಷ್ಠ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದರು.
4.-ರಿಚರ್ಡ್ ಬ್ರಾನ್ಸನ್ (Dyslexia, ADHD)
Virgin Groupನಾ ಸಂಸ್ಥಾಪಕರು. ಶಾಲೆಯಲ್ಲಿ ಕಲಿಕಾ ಅಡಚಣೆಗಳಿಂದ ( learninng difficulties) ಹೋರಾಡಿದರೂ, ನಂತರ ಜಗತ್ತಿನ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದರು.
5. ಅಗಾಥಾ ಕ್ರಿಸ್ಟಿ (Dyslexia)
ಪ್ರಸಿದ್ಧ ಅಪರಾಧ ಕಥೆಗಾರ್ತಿ( criminal novalist) ಓದು ಮತ್ತು ಬರವಣಿಗೆಯಲ್ಲಿ (reading and writting difficulties) ಕಷ್ಟ ಅನುಭವಿಸಿದರೂ, ಇತಿಹಾಸದಲ್ಲೇ ಅತ್ಯಧಿಕ ಪುಸ್ತಕ ಮಾರಾಟವಾದ ಲೇಖಕಿಯಾದರು.
6. ಮ್ಯಾಜಿಕ್ ಜಾನ್ಸನ್ (ADHD, Learning Difficulties)
ಅಮೇರಿಕಾದ ಖ್ಯಾತ ಬ್ಯಾಸ್ಕೆಟ್ಬಾಲ್ ಆಟಗಾರರಾದ ಇವರು. ಶಾಲಾ ದಿನಗಳಲ್ಲಿ ಕಲಿಕಾ ತೊಂದರೆಗಳಿದ್ದರೂ (learning disabilities) , ಕ್ರೀಡಾ ಲೋಕದಲ್ಲಿ ದಂತಕಥೆಯಾದರು
ಕಲಿಕಾ ಅಸ್ವಸ್ಥತೆಗಳನ್ನು ಮೆಟ್ಟಿನಿಂತವರಲ್ಲಿ ಭಾರತೀಯರೆನು ಹಿಂದೆ ಬಿದ್ದಿಲ್ಲ , ಕಲಿಕಾ ಅಸಮಥ೯ತೆಯನ್ನು ಎದುರಿಸಿ ಯಶಸ್ಸು ಸಾಧಿಸಿದ ಭಾರತೀಯರು
1.-ಅಭಿಷೇಕ್ ಬಚ್ಚನ್ (ಡಿಸ್ಲೆಕ್ಸಿಯಾ)
ಜನಪ್ರಿಯ ಬಾಲಿವುಡ್ ನಟರು, ಬಾಲ್ಯದಲ್ಲಿ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲಿದ ವಿಷಯವನ್ನು ಇತ್ತಿಚಿನ ಮಾಧ್ಯಮದ ಸಂದಶ೯ನದಲ್ಲಿ ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದರೂ, ನಂತರ ಯಶಸ್ವಿ ನಟನಾಗಿ ಹೆಸರು ಮಾಡಿದವರು.
2. -ಹೃತಿಕ್ ರೋಷನ್ (ಮಾತಿನ ತೊಂದರೆ, ಓದು ಸಮಸ್ಯೆಗಳು, ADHD ಲಕ್ಷಣಗಳು)
ಬಾಲಿವುಡ್ನ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು, ಬಾಲ್ಯದಲ್ಲಿ ತೀವ್ರ ಅಡ್ಡಮಾತು , ತೋದಲುವಿಕೆ (stammering) ಮತ್ತು ಓದುವ ಕಷ್ಟ(learning difficulties) ಅನುಭವಿಸಿದರು. ನಿರಂತರ ಚಿಕಿತ್ಸೆ, ಅಭ್ಯಾಸ ಮತ್ತು ಹಠದಿಂದ ತಮ್ಮ ಸಮಸ್ಯೆಯನ್ನು ಎದುರಿಸಿ, ಇಂದಿಗೆ ಜಗತ್ತಿನ ಮಟ್ಟದ ದೊಡ್ಡ ಹೆಸರು ಮಾಡಿದ್ದಾರೆ.
3.-ತಾರೆ ಜಮೀನ್ ಪರ್ (ಚಿತ್ರದಲ್ಲಿ ಡಿಸ್ಲೆಕ್ಸಿಯಾ ಕುರಿತ ಕಥೆ ಎಲ್ಲರು ನೋಡಬೇಕಾದ ಚಲನ ಚಿತ್ರ)
ಆಮೀರ್ ಖಾನ್ ಅವರ 2007ರ ತಾರೆ ಜಮೀನ್ ಪರ್ ಚಿತ್ರವು ಭಾರತದಲ್ಲಿ ಡಿಸ್ಲೆಕ್ಸಿಯಾ ಕುರಿತ ದೊಡ್ಡ ಜಾಗೃತಿ ಮೂಡಿಸಿದ ಸಿನಿಮಾ .ಇಶಾನ್ ಅವಾಸ್ತಿ (ದರ್ಶೀಲ್ ಸಫಾರಿ) ಎಂಬ ಪಾತ್ರವು ನಿಜಜೀವನದ ಅನೇಕ ಮಕ್ಕಳ ಹೋರಾಟವನ್ನು ಪ್ರತಿಬಿಂಬಿಸಿದ್ದು ಇಂಚು ಇಂಚು ಮಾಹಿತಿಯನ್ನು ನೀಡಿತ್ತು. ಈ ಚಿತ್ರವು ಪೋಷಕರು ಮತ್ತು ಶಿಕ್ಷಕರು ಕಲಿಕಾ ಅಸ್ವಸ್ಥತೆಗಳನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳುವಂತೆ ಪ್ರೇರೇಪಿಸಿತು.
4.-ಪ್ರತಿಭಾ ಪಾಟೀಲ್ (ಬಾಲ್ಯದ ಕಲಿಕಾ ಕಷ್ಟಗಳು)
ಭಾರತದ ಮಾಜಿ ರಾಷ್ಟ್ರಪತಿಯಾದವರು (2007-2012) ಬಾಲ್ಯದಲ್ಲಿ ಕಲಿಕೆಯಲ್ಲಿ ತೊಂದರೆಗಳನ್ನು(learning disability) ಎದುರಿಸಿದರೂ, ಅವನ್ನು ಮೆಟ್ಟಿನಿಂತು ಕಷ್ಟದ ಹಾದಿಯಲ್ಲಿ ಹೋಗಿ ದೇಶದ ಅತಿ ಉನ್ನತ ಹುದ್ದೆಯವರೆಗೆ ಏರಿದರು.
5.-ನರೇಂದ್ರ ಜಾಧವ್ (Learing disability ಹಾಗೂ ADHD)
ಇವರು ಅರ್ಥಶಾಸ್ತ್ರಜ್ಞನಾಗಿದ್ದು ಅದರ ಜೋತೆಗೆ , ಶಿಕ್ಷಣ ತಜ್ಞರಾಗಿಯೂ ಮತ್ತು ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಬಾಲ್ಯದ ಕಲಿಕಾ ಹೋರಾಟಗಳ ಬಗ್ಗೆ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದು ತದನಂತರ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹಾಗೂ ಶಿಕ್ಷಣ ಕ್ಷೇತ್ರದ ಪ್ರಮುಖ ವ್ಯಕ್ತಿಯಾಗಿ ಬೆಳೆದರು.
ಕರ್ನಾಟಕದಲ್ಲಿ ಕಲಿಕಾ ಅಸ್ವಸ್ಥತೆಗಳನ್ನು ಎದುರಿಸಿ ಸಾಧನೆ ಮಾಡಿದವರು;-
1- ಕೇಂಪಹೊಣ್ಣಯ್ಯ – UPSC ಸಾಧಕ (ದೃಷ್ಟಿಹೀನತೆ)
ತುಮಕೂರು ಜಿಲ್ಲೆಯ ಕುಣಿಗಲ್ ಮೂಲದವರಾದ ಇವರು ಬಾಲ್ಯದಲ್ಲೇ ದೃಷ್ಟಿಯನ್ನು ಕಳೆದುಕೊಂಡರೂ ಮೈಸೂರು ಅಂಧಶಾಲೆಯಲ್ಲಿ ಶಿಕ್ಷಣ ಪಡೆದರು ನಂತರ ಎಂ.ಫಿಲ್ ಪದವಿ ಪೂರೈಸಿ, UPSC ಪರೀಕ್ಷೆಯಲ್ಲಿ 340ನೇ ರ್ಯಾಂಕ್* ಪಡೆದು ದೇಶದ ಗಮನ ಸೆಳೆದರು.
2.- ಪ್ರಕಾಶ್ ಜಯರಾಮಯ್ಯ – ಕ್ರಿಕೆಟ್ ತಾರೆ (ದೃಷ್ಟಿಹೀನತೆ)
ಕರ್ನಾಟಕ ಮೂಲದವರಾದ ಇವರು ಭಾರತದ ಅಂಧ ಕ್ರಿಕೆಟ್ ತಂಡದ ಉಪನಾಯಕರಾಗಿ, ವಿಶ್ವಕಪ್ ಹಾಗೂ ಟಿ–20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
3- SSLC 2023 – ಕಲಿಕಾ ಅಸ್ವಸ್ಥತೆ ಹೊಂದಿದ ಮಕ್ಕಳ ಸಾಧನೆ
ಕರ್ನಾಟಕ SSLC ಪರೀಕ್ಷೆಯಲ್ಲಿ ವೈಶಿಷ್ಟ್ಯಗೊಳಿಸಿದ ಕಲಿಕಾ ಅಸ್ವಸ್ಥತೆ (Specific Learning Disability – SLD) ಹೊಂದಿದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ 84.12% ಆಗಿದೆ
ಇದು ಸಾಮಾನ್ಯ ಸರಾಸರಿ (80.08%) ಗಿಂತ ಹೆಚ್ಚಾಗಿದ್ದು, ಸರಿಯಾದ ಸಹಾಯ ಮತ್ತು ಸೌಲಭ್ಯಗಳಿಂದ ಯಶಸ್ಸು ಸಾಧ್ಯವೆಂದು ಸಾಬೀತಾಗಿದೆ.
4- ಕರ್ನಾಟಕದಲ್ಲಿ SSLC 2024 (ಪರೀಕ್ಷೆ-1) ಒಟ್ಟಾರೆ ಉತ್ತೀರ್ಣ ಪ್ರಮಾಣ 73.40% ಆಗಿದ್ದು ಇದರಲ್ಲಿಗೆ ಸೇರಿ, 4,660 ವಿಶೇಷ ವಿದ್ಯಾರ್ಥಿಗಳಲ್ಲಿ 2,960 ಮಂದಿ ಪಾಸಾಗಿದ್ದಾರೆ ಉತ್ತೀರ್ಣ ಪ್ರಮಾಣ 64%
ಮೈಸೂರಿನ ರಂಗರಾವ್ ಮೆಮೋರಿಯಲ್ ಶಾಲೆ (RMSD) ಯಲ್ಲಿ ಓದುತ್ತಿರುವ 12 ದೃಷ್ಟಿ ಹೀನ ಬಾಲಕಿಯರೆಲ್ಲರೂ (100%) ಉತ್ತೀರ್ಣರಾಗಿದ್ದು, ಪ್ರಥಮ ದರ್ಜೆ (First Class) ಅಂಕಗಳನ್ನು ಗಳಿಸಿದ್ದಾರೆ. ಒಬ್ಬಳು ವಿದ್ಯಾರ್ಥಿನಿ ಗರಿಷ್ಠ 83% ಅಂಕಗಳನ್ನು
ಇನ್ನು ತಮಿಳುನಾಡಿನಲ್ಲಿ 2024 SSLC ಪರೀಕ್ಷೆಗೆ 13,510 ವಿಶೇಷ ಮಕ್ಕಳು ಹಾಜರಾಗಿದ್ದು ಅದರಲ್ಲಿ 12,491 ಮಂದಿ ಉತ್ತೀರ್ಣರಾದರು ಉತ್ತೀರ್ಣ ಪ್ರಮಾಣ 92.45%
ಇವರೆಲ್ಲರೂ ತಮ್ಮ ಅಸಮಥ೯ತೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದವರು , ಸಾಧಕರ ಪಟ್ಟಿಯಲ್ಲಿ ಗುರುತಿಸಿಕೊಂಡವರು , ಇವರೆಲ್ಲರೂ ಸಮಾಜಕ್ಕೆ ಸ್ಪೂತಿ೯ ಹಾಗು ಪ್ರೇರಣೆ , ಮನೋಭಲ ಹಾಗು ಮನಶಕ್ತಿ ಇದ್ದರೇ ಯಾವುದೆ ಸಾಧನೆಯು ಕಷ್ಟವಲ್ಲ.
ಮುಂದಿನ ಸಂಚಿಕೆಯಲ್ಲಿ ಬೇರೆ ವಿಷಯದ ಬಗ್ಗೆ ಅರಿಯೊಣ
ಧನುಷ್ ಭಟ್
9945266006

