75ನೇ ಸ್ವಾತಂತ್ರ್ಯೋತ್ವದ ಅಂಗವಾಗಿ ಕಾಂಗ್ರೆಸ್ ನಿಂದ ಪಾದಯಾತ್ರೆ,ಅಮೃತಮಹೋತ್ಸವ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜಿಲ್ಲಾಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಾದಯಾತ್ರೆ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಬೇಡಕಣಿ ಐತಿಹಾಸಿಕ ಕೋಟೆಹನುಮಂತ ದೇವಾಲಯದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಐವಾನ್ ಡಿಸೋಜ,ಮಧುಬಂಗಾರಪ್ಭ ಭೀಮಣ್ಣ ನಾಯ್ಕ,ವಸಂತ ನಾಯ್ಕ,ಜಗದೀಶ ಗೌಡ ಮುಂತಾದವರು ಭಾಗವಹಿಸಿದ್ದರು.

ನಂತರ ಸಿದ್ದಾಪುರಪಟ್ಟಣದ ರಾಘವೇಂದ್ರ ಮಠದಲ್ಲಿ ನಡೆದ ಅಮೃತಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಉತ್ತರಕನ್ನಡಜಿಲ್ಲೆಯ ಕಾಂಗ್ರೆಸ್ ಉಸ್ತುವಾರಿ ಐವಾನ್ ಡಿಸೋಜ ಮಾತನಾಡಿ,ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯದ ಪೂರ್ವದಲ್ಲಿ ಹಾಗೂ ನಂತರದಲ್ಲಿ ದೇಶದ ಬೆಳವಣಿಗೆಗೆ ದೊಡ್ಡಕೊಡುಗೆಯನ್ನೆ ಕೊಟ್ಟಿದೆ. ಕಾಂಗ್ರೆಸ್ ನಾಯಕರ ತ್ಯಾಗ,ಬಲಿದಾನದಿಂದ ಇಂದು ನಾವು ಸ್ವತಂತ್ರವಾಗಿದ್ದೆವೆ ಆದರೆ ೨೦೧೪ರಿಂದ ಅಧಿಕಾರ ಹಿಡಿದಿರುವ ಬಿಜೆಪಿ ಸ್ವಾತಂತ್ರ್ಯಗಳಿಸಿದ್ದೇ ತಾವು ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೆ ಸ್ವಾತಂತ್ರ್ಯಹೋರಾಟದಲ್ಲಿ ಅವರ ಮುಖ್ಯಸ್ಥ ಸಾವರಕರ್ ತನ್ನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಬ್ರಿಟೀಷ್‌ರಿಗೆ ಪತ್ರಬರೆದು ಬೇಡಿಕೊಂಡಿದ್ದರು.ಇಂದು ಸಮಾಜವನ್ನು,ಧರ್ಮವನ್ನು,ಜಾತಿಯನ್ನು ಒಡೆಯುವ ಕೆಲಸ ಮಾಡುತ್ತಾ ದೇಶವನ್ನು ವಿಭಜನೆ ಮಾಡಲು ಬಿಜೆಪಿ ಸರಕಾರ ಹವಣಿಸುತ್ತಿದೆ. ಸ್ವಾತಂತ್ರ್ಯದ ಉದ್ದೇಶ ಅದನ್ನು ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ಯುವಪೀಳಿಗೆಗೆ ತಿಳಿಸಬೇಕು ಎಂಬ ಉದ್ದೇಶದಿಂದ ಈ ಅಮೃತಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಸಿದ್ದರಾಮಯ್ಯನವರ ಜನ್ಮದಿನಾಚರಣೆಗೆ ಜನರು ಸ್ವಯಂಸ್ಪೂರ್ತಿಯಿಂದ ಬಂದಿರುವುದನ್ನು ನೋಡಿರುವ ಬಿಜೆಪಿಯವರಿಗೆ ಆತಂಕ ಪ್ರಾರಂಭವಾಗಿದೆ.ಈಗ ಅಮೃತಮಹೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ೨೦೨೩ರ ಚುನಾವಣೆಗೆ ಇವೆಲ್ಲ ದಿಕ್ಸೂಚಿಯಾಗಲಿದೆಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಡಿಸೋಜ ಹೇಳಿದರು.

ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಮಾತನಾಡಿ, ಸಿದ್ದಾಂತದೊಂದಿಗೆ ಹೋರಾಟ ನಡೆಸುವವರು ಜೈಲು,ಬಂಧನಕ್ಕೆ ಹೆದರಬಾರದು ಅನ್ಯಾಯವನ್ನು ಖಂಡಿಸಬೇಕಾದ್ದು ಎಲ್ಲರ ಜವಾಬ್ದಾರಿ ದೇಶ, ರಾಜ್ಯದಲ್ಲಿ ಏನಾಗುತ್ತಿದೆ ಎಂಬುದನ್ನು ಜನ ಅಳೆದು-ತೂಗಿ ನೋಡಬೇಕು. ಕಾಂಗ್ರೆಸ್ ಸೋಲಿಗೆ ಕಾರಣ ಏನು ಎಂಬುದನ್ನು ಎಲ್ಲರೂ ಚಿಂತನೆ ಮಾಡಬೇಕು. ಸಂಘಟನೆ ತುಂಬಾ ಕ್ಷೀಣವಾಗಿದೆ. ಇದು ಆಗಬಾರದು. ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿ ಮಾಡಲು ಇಂತಹ ಕಾರ್ಯಕ್ರಮ ನಡೆಸಬೇಕು. ಹೋರಾಟ ಎನ್ನುವುದು ನನ್ನ ಜೀವನದ ಅವಿಭಾಜ್ಯ ಅಂಗ. ಹೋರಾಟದಿಂದಲೆ ನಾನು ನ್ಯಾಯ ಪಡೆದಿದ್ದೇನೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಬ್ರಿಟಿಷರಿಂದ ಸ್ವಾತಂತ್ರ‍್ಯ ಪಡೆದು ೭೫ ವರ್ಷವಾಗಿದೆ. ಈಗ ಬ್ರಿಟಿಷ್ ಜನತಾ ಪಾರ್ಟಿಯಾದ ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಬಿಜೆಪಿಯವರು ಭಾವುಟದ ಹೆಸರಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಸರ್ವರಿಗೂ ಸಮಾನವಾದ ಅವಕಾಶ ಸಿಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.
ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಸ್ವಾಗತಿಸಿದರು. ವೆಂಕಟೇಶ ಕೊಂಡ್ಲಿ ಪ್ರಾರ್ಥನೆ ಹಾಡಿದರು. ಪತ್ರಕರ್ತ ಸುರೇಶ ಮಡಿವಾಳ ನಿರೂಪಣೆ ಮಾಡಿದರು.

ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ರವೀಂದ್ರನಾಥ ನಾಯ್ಕ,ರಾಜಾನಂದಿನಿ ಕಾಗೋಡು,ಆರ್.ಎಂ.ಹೆಗಡೆ ಬಾಳೆಸರ,ಸುಜಾತ ಗಾಂವ್ಕರ್ ಜಗದೀಶ ಗೌಡ ಅಬ್ದುಲ್ ಮಜೀದ್ ಮುಂತಾದವರು ಉಪಸ್ಥಿತರಿದ್ದರು.
೧೫ಜನ ಮಾಜಿಸೈನಿಕರನ್ನು ಅಮೃತಮಹೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು.

About the author

Adyot

Leave a Comment