ಆದ್ಯೋತ್ ಸುದ್ದಿನಿಧಿ
ಸಿದ್ದಾಪುರ ತಾಲೂಕಿನ ಹೇರೂರಿನ ಪ್ರಮುಖ ರಸ್ತೆಗಳಲ್ಲಿ ರವಿವಾರ ಆರ್ಎಸ್ಎಸ್ ಪಥಸಂಚಲನ ಕಾರ್ಯಕ್ರಮ ನಡೆಯಿತು.

ವಿಶ್ವಹಿಂದೂಪರಿಷತ್ನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಮಾತನಾಡಿ,ದೇಶದ ಉನ್ನತಿ ಅವನತಿ ಹಿಂದುಗಳ ಕೈಯಲ್ಲಿದೆ . ಹಿಂದೂ ಎದ್ದರೆ ದೇಶ ಎದ್ದಂತೆ ದೇಶವನ್ನು ಸಂಘಟಿಸಬೇಕು ಎಂಬ ಉದ್ದೇಶದಿಂದ ಹೆಗಡೆವಾರ್ ಸಂಘವನ್ನು ಸ್ಥಾಪಿಸಿದರು. ಯಾವುದೇ ಒಂದು ಸಂಘಟನೆ ಬೆಳೆಯಬೇಕಾದರೆ ಮೂರು ಹಂತಗಳನ್ನು ಎದುರಿಸಬೇಕಾಗುತ್ತದೆ. ಸಂಘ ಈ ಮೂರು ಹಂತವನ್ನು ದಾಟಿ ಬೆಳೆದು ನಿಂತಿದೆ. ರಾಷ್ಟೀಯ ಸ್ವಯಂ ಸೇವಕ ಸಂಘ ತನ್ನ ೧೦೦ ವರ್ಷ ಪೂರ್ಣ ಮಾಡಿದೆ. ಸಂಘ ಪುಟ್ಟದಾಗಿ ಪ್ರಾರಂಭವಾಗಿ ದೇಶೋವಿಶಾಲವಾಗಿ, ವಿಶ್ವಪ್ರಸಾರಿತವಾಗಿ ಬೆಳೆದು ನಿಂತಿದೆ.ಆರಂಭದಲ್ಲಿ ಹೆಗ್ಗಡೆವಾರರನ್ನು ಹೆಡ್ ಗವಾರ ಎಂದು ಅಪಹಾಸ್ಯವನ್ನು ಮಾಡಿದರು ಅದನ್ನೆಲ್ಲ ಸಹಿಸಿಕೊಂಡು. ಬೇಸರ ಪಡದೇ ಸಂಘಕ್ಕೆ ಬೇಸುಗೆಯನ್ನು ಮಾಡುವ ಕಾರ್ಯ ಮಾಡಿದರು.

೧೯೪೮ ರಲ್ಲಿ ಗಾಂಧಿ ಹತ್ಯೆಯನ್ನು ಇಟ್ಟುಕೊಂಡು ಸಂಘವನ್ನು ವಿರೋಧಿಸಲಾಯಿತು ಆದರೆ ಸಂಘವು ಇದಾವುದನ್ನು ಲೆಕ್ಕಿಸದೆ ಜನರ ಮನೆ ಮನೆಗಳಿಗೆ ಭೇಟಿ ನೀಡಿ ಅವರ ಮನೆಗೆದ್ದು ಸಂಘ ಮುನ್ನೆಡೆಯಿತು. ಈಗ ಸಂಘ ಬೆಳೆದು ನಿಂತಿದೆ. ಅಪಹಾಸ್ಯ, ವಿರೋಧ ಲೆಕ್ಕಿಸದೇ. ಸಂಘ ಮುನ್ನೆಡೆದಿದೆ. ಇದರಿಂದ ಸಂಘ ಹೆಮ್ಮರವಾಗಿ ಬೆಳೆದು ನಿಂತಿದೆ. ಸಂಘ ನಮ್ಮನ್ನು ಸ್ವೀಕಾರ ಮಾಡುತ್ತಿದೆ. ಕೇವಲ ಸಂಘಟನೆಯ ಒಂದೇ ಒಂದು ಸೂಚನೆಯಿಂದ ದೇಶದಾದ್ಯಂತ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮಗಳ ನಡೆಯುತ್ತಿವೆ. ಇಲ್ಲಿಯವರೆಗೆ ೧ ಲಕ್ಷಕ್ಕೂ ಹೆಚ್ಚು ಸ್ಥಾನದಲ್ಲಿ ಕಾರ್ಯಕ್ರಮ ನಡೆದಿರಬಹುದು ಎಂದು ಹೇಳಿದರು.

ಎಲ್ಲೊ ಭೂಕಂಪ ನಡೆದರೆ ಸ್ವಯಂ ಸೇವಕರು ಸೇವೆಗಾಗಿ ಧಾವಿಸುತ್ತಾರೆ. ಭಾರತ ತನ್ನ ತಾಯಿ ಎಂದು ತಿಳಿದು ಹೋಗುತ್ತಾರೆ. ಈ ಭೂಮಿ ಅತ್ಯಂತ ಪವಿತ್ರವಾದಂತದು. ಇಲ್ಲಿ ಹುಟ್ಟುವ ಹೆಣ್ಣುಮಗಳು ದೇವಿಯ ಅವತಾರ ಪ್ರತಿಯೊಬ್ಬ ಗಂಡು ಮಗು ರಾಮನ ಅವತಾರ. ನಾವು ಯಾರನ್ನು ವಿರೋಧ ಮಾಡುವುದಿಲ್ಲ ಯಾರ ಮೇಲೂ ಅಕ್ರಮಣ ಮಾಡುವುದಿಲ್ಲ ಆದರೆ ನಮ್ಮ ಮೇಲೆ ಆಕ್ರಮಣ ನಡೆದರೆ ಬಿಡುವುದಿಲ್ಲ. ಜಾತಿ ಭೇದ,ಭಾವ ಬಿಟ್ಟು ನಾವು ಹಿಂದೂಗಳು ಎನ್ನುವ ಭಾವನೆ ಬೆಳೆಯಬೇಕು. ಹಿಂದೂಗಳಲ್ಲಿ ಭೇದಭಾವ ಮಾಡಬಾರದು ಎನ್ನುವ ಭಾವನೆ ಬೆಳೆಸಲು ಯಶಸ್ವಿಯಾಗಿದ್ದೆವೆ.ಅಯೋದ್ಯೆ ರಾಮ ಮಂದಿರವನ್ನು ನಿರ್ಮಾಣ ಮಾಡಲು ಯಶಸ್ವಿಯಾಗಿದ್ದೆವೆ. ಕಾಶ್ಮೀರದ ೩೭೦ ವಿಧಿ ಹೋಗುವ ಬಗ್ಗೆ ಯಾರು ಕಲ್ಪನೆ ಮಾಡಿರಲಿಲ್ಲ. ದೇಶದ ಜನರಿಗೆ ಕಾಶ್ಮೀರ ನಮ್ಮದು ಎಂದು ಅನಿಸಿತ್ತು ಹೋಗಲು ಆಗುತ್ತಿರಲಿಲ್ಲ. ಇಂದು ಭೂಮಿ ಖರೀದಿ ಮಾಡುತ್ತಿದ್ದಾರೆ. ಇದೆಲ್ಲವೂ ಸಾಧ್ಯವಾಗಿದೆ.


ಸಂಘಟಿತ ಹಿಂದು ಶಕ್ತಿಶಾಲಿ ಭಾರತ್. ೧೯೪೭ ರಲ್ಲಿ ನಮಗೆ ಬಂದಿದ್ದು ಸ್ವಾತಂತ್ರ್ಯ ಅಲ್ಲ ಸ್ವರಾಜ್ಯ. ನಮ್ಮ ಹಿಂದೂ ಸಂಸ್ಕಾರ ನಮ್ಮ ಮುಂದಿನ ಪೀಳಿಗೆಗೆ ಪಾಲಕರಾದ ನಾವು ಕಲಿಸಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಕರ್ತವ್ಯ ತಿಳಿದುಕೊಂಡು ಕೆಲಸ ಮಾಡಿದರೆ ದೇಶ ಸಹಜವಾಗಿ ಮುಂದೆ ಬರುತ್ತದೆ. ಹಿಂದೂ ಉಳಿಯಬೇಕು ಹಿಂದೂ ಬೆಳೆಯಬೇಕು. ಭಾರತದ ವೈಭವ ವಿಶ್ವದಾದ್ಯಂತ ಹರಡಬೇಕು ಎಂದರು
ನಿವೃತ್ತ ಯೋಧ ಧನಂಜಯ ಹೆಗಡೆ ಅತಿಥಿಯಾಗಿ ಭಾಗವಹಿಸಿದ್ದರು.

