ಆದ್ಯೋತ್ ಸುದ್ದಿನಿಧಿ
ಕಳೆದ ಎರಡು ಸಂಚಿಕೆಗಳಿಂದ ನಮ್ಮ ಆಪ್ತರಿಗಾಗಿ ಯಾವುದೇ ರೀತಿಯ ಸಮಾಲೋಚನೆಯ ಕುರಿತು ಲೇಖನವನ್ನು ಪ್ರಕಟಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಸಮಾಲೋಚನೆಯು ನಿರಂತರವಾಗಿರುತ್ತದೆ.

ಮನೋಭಾವ ಅಸ್ವಸ್ಥತೆಗಳು (Mood Disorders
ಮನೋಭಾವ ಅಸ್ವಸ್ಥತೆಗಳು ಎಂದರೆ ವ್ಯಕ್ತಿಯ ಭಾವನಾತ್ಮಕತೆಯ ಸ್ಥಿತಿಯು ದೀರ್ಘಕಾಲದವರೆಗೆ ಅಸ್ತವ್ಯಸ್ತವಾಗಿರುವ ಮಾನಸಿಕ ಅಸ್ವಸ್ಥತೆಗಳಾಗಿರುತ್ತವೆ. ಸಾಮಾನ್ಯವಾಗಿ ಎಲ್ಲರಲ್ಲೂ ಸಂತೋಷ–ದುಃಖದ ಮನೋಭಾವ ಬದಲಾವಣೆಗಳಾಗುತ್ತಿರುತ್ತದೆ., ಆದರೆ ಈ ಅಸ್ವಸ್ಥತೆಯಲ್ಲಿ ಮನೋಭಾವದ ಬದಲಾವಣೆಗಳು ಆಳವಾದ, ದೀರ್ಘಕಾಲೀನ ಮತ್ತು ನಿಯಂತ್ರಣಕ್ಕೆ ಬಾರದಂತಾಗುತ್ತವೆ. ಹಾಗು ಮಾನಸಿಕ ಒತ್ತಡವನ್ನು ಮಾನಸಿಕ ಸ್ಥಿತಿಯನ್ನು ನಾಶ ಮಾಡುತ್ತದೆ. ಇದು ವ್ಯಕ್ತಿಯ ಆಲೋಚನೆ ,ಚಿಂತನೆ, ನಡೆ–ನುಡಿ, ಹಾಗೂ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಮನೋಭಾವ ಅಸ್ವಸ್ಥತೆಯಿಂದ ಬಳಲುವ ವ್ಯಕ್ತಿಯು ದಿನನಿತ್ಯದ ಕೇಲಸವನ್ನು ನಡೆಸಲು ಕಷ್ಟಪಡಬಹುದು ಮತ್ತು ಸಾಮಾಜಿಕ ಸಂಪರ್ಕಗಳಿಂದ ದೂರ ಉಳಿದುಕೊಳ್ಳಬಹುದು
ಮನೋಭಾವ ಅಸ್ವಸ್ಥತೆಗಳಲ್ಲಿ ಪ್ರಮುಖ ಎರಡು ಪ್ರಕಾರಗಳು
1. ನಿರಾಸೆ (Depressive Disorders) – ದೀರ್ಘಕಾಲದ ದುಃಖ ಅಥವಾ ಆಸಕ್ತಿಯ ಕೊರತೆಯಾಗುತ್ತಾ ಹೋಗುತ್ತದೆ
2. ದ್ವಿಪ್ರಕೃತಿ ಅಸ್ವಸ್ಥತೆ (Bipolar Disorders) – ಸಂತೋಷ ಮತ್ತು ನಿರಾಸೆಯ ನಡುವಿನ ತೀವ್ರ ಮನೋಭಾವಗಳು ಬದಲಾವಣೆಗಳಾಗುತ್ತದೆ.
ಮನೋಭಾವ ಅಸ್ವಸ್ಥತೆಗಳಲ್ಲಿ ಅತ್ಯಂತ ಸಾಮಾನ್ಯ ಮತ್ತು ಗಂಭೀರವಾದದ್ದು ಮೆಜರ್ ಡಿಪ್ರೆಸಿವ್ ಡಿಸಾರ್ಡರ್ (Major Depressive Disorder – MDD) ಆಗಿದೆ
ಮೆಜರ್ ಡಿಪ್ರೆಸಿವ್ ಡಿಸಾರ್ಡರ್ (Major Depressive Disorder – MDD)
ಮೆಜರ್ ಡಿಪ್ರೆಸಿವ್ ಡಿಸಾರ್ಡರ್ ಅಂದರೆ ವ್ಯಕ್ತಿ ದೀರ್ಘಕಾಲದವರೆಗೆ ಆಳವಾದ ದುಃಖ, ನಿರಾಶೆ, ಖಿನ್ನತೆ ಹಾಗೂ ಆಸಕ್ತಿಯ ನಷ್ಟ ಅನುಭವಿಸುವ ಸ್ಥಿತಿ ಉಂಟಾಗಿವುದಲ್ಲದೆ ಇದು ಕೇವಲ ತಾತ್ಕಾಲಿಕ ದುಃಖವಲ್ಲದೆ ನಿತ್ಯ ಜೀವನದ ಎಲ್ಲ ಕಾಯ೯ ಕ್ಷೇತ್ರಗಳನ್ನೂ ಪ್ರಭಾವಿಸುವ ಗಂಭೀರ ಮಾನಸಿಕ ಅಸ್ವಸ್ಥತೆಯಾಗಿದೆ.
ಮೆಜರ್ ಡಿಪ್ರೆಸಿವ್ ಡಿಸಾರ್ಡರ್ (Major Depressive Disorder – MDD) ಲಕ್ಷಣಗಳು;-
* ದಿನದ ಬಹು ಸಮಯ ದುಃಖ ಅಥವಾ ಖಿನ್ನತೆ
* ತಮ್ಮ ಮೆಚ್ಚಿನ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
* ದೈಹಿಕ ಅಥವಾ ಮಾನಸಿಕ ಶ್ರಮ
* ನಿದ್ರೆ ಅಥವಾ ಆಹಾರದಲ್ಲಿ ಬದಲಾವಣೆ (ಅತಿಯಾದ ನಿದ್ರೆ ಅಥವಾ ನಿದ್ರಾಹೀನತೆ)
* ಏಕಾಗ್ರತೆಯ ಕೊರತೆ ಅಥವಾ ತೀರ್ಮಾನಕ್ಕೆ ಬಾರದಿರುವುದು
* ಅಲ್ಪತೆ ಭಾವ, ಅಪರಾಧ ಭಾವನೆ ,ಕೀಳರಿಮೆ
* ಮರಣ ಅಥವಾ ಆತ್ಮಹತ್ಯೆ ಬಗ್ಗೆ ಆಲೋಚನೆಗಳು
ಈ ಲಕ್ಷಣಗಳು ಕನಿಷ್ಠ ಎರಡು ವಾರಗಳ ಕಾಲ (14 ದಿನಕ್ಕೂ ಮೆಲ್ಪಟ್ಟು) ಮುಂದುವರಿದರೆ ಮತ್ತು ವ್ಯಕ್ತಿಯ ದಿನನಿತ್ಯ ಜೀವನಕ್ಕೆ ತೊಂದರೆಯಾಗುತ್ತಿದ್ದರೆ ಅದನ್ನು ಮೆಜರ್ ಡಿಪ್ರೆಸಿವ್ ಡಿಸಾರ್ಡರ್ ಎಂದು ಪರಿಗಣಿಸಲಾಗುತ್ತದೆ.
ಮೆಜರ್ ಡಿಪ್ರೆಸಿವ್ ಡಿಸಾರ್ಡರ್ (Major Depressive Disorder – MDD) ಕಾರಣಗಳು;-
ಮೆಜರ್ ಡಿಪ್ರೆಸಿವ್ ಡಿಸಾರ್ಡರ್‌ಗೆ ಹಲವಾರು ಕಾರಣಗಳು ಇರಬಹುದು: ಅದರಲ್ಲಿ ಪ್ರಮುಖವಾದದ್ದು
* ಜೈವಿಕ (Biological) ಕಾರಣಗಳು: ಮೆದುಳಿನ ರಾಸಾಯನಿಕ ಅಸಮತೋಲನ — ವಿಶೇಷವಾಗಿ ಸೆರೋಟೊನಿನ್, ಡೊಪಮಿನ್, ಹಾಗೂ ನೊರೆಪಿನೆಫ್ರಿನ್ ಅಂಶಗಳ ಬದಲಾವಣೆ.
* ವಂಶಾನುಗತ (Genetic) ಕಾರಣಗಳು: ಕುಟುಂಬದಲ್ಲಿ ನಿರಾಸೆ ಅಥವಾ ಖಿನ್ನತೆ ಇರುವುದು ಅಪಾಯವನ್ನು ಹೆಚ್ಚಿಸುತ್ತದೆ.
* ಮಾನಸಿಕ (Psychological) ಕಾರಣಗಳು: ಆತ್ಮವಿಶ್ವಾಸದ ಕೊರತೆ, ನಕಾರಾತ್ಮಕ ಚಿಂತನೆ, ದೀರ್ಘಕಾಲದ ಒತ್ತಡ ಇತ್ಯಾದಿ.
* ಸಾಮಾಜಿಕ ಅಥವಾ ಪರಿಸರ (Environmental) ಕಾರಣಗಳು: ಆಪ್ತರ ನಷ್ಟ, ಉದ್ಯೋಗ ಕಳೆದುಕೊಳ್ಳುವುದು, ಏಕಾಂತತೆ ಅಥವಾ ದೌರ್ಜನ್ಯ ಅನುಭವ ಇತ್ಯಾದಿ.
ಮೆಜರ್ ಡಿಪ್ರೆಸಿವ್ ಡಿಸಾರ್ಡರ್ ಚಿಕಿತ್ಸೆ (Treatment);- (ಸರಿಯಾದ ಚಿಕಿತ್ಸೆಯಿಂದ ನಿಯಂತ್ರಿಸಬಹುದು.)
* ಮನಶ್ಶಾಸ್ತ್ರ ಚಿಕಿತ್ಸಾ ವಿಧಾನಗಳು (Psychotherapy): ವಿಶೇಷವಾಗಿ ಕಾಗ್ನಿಟಿವ್ ಬಿಹೇವಿಯರ್ ಥೆರಪಿ (CBT) — ನಕಾರಾತ್ಮಕ ಚಿಂತನೆಗಳನ್ನು ಬದಲಿಸುವಲ್ಲಿ ಸಹಾಯಕ.
* ಔಷಧೋಪಚಾರ (Medication):ಆಂಟಿ–ಡಿಪ್ರೆಸಂಟ್ , ಔಷಧಿಗಳು ಮೆದುಳಿನ ರಾಸಾಯನಿಕ ಸಮತೋಲನವನ್ನು ಸುಧಾರಿಸುತ್ತವೆ.
* ಜೀವನಶೈಲಿ ಬದಲಾವಣೆ (Lifestyle changes): ವ್ಯಾಯಾಮ, ಯೋಗ, ಧ್ಯಾನ, ಮತ್ತು ಉತ್ತಮ ನಿದ್ರೆ ಚಟುವಟಿಕೆಗಳು ಸಹಕಾರಿ.
* ತೀವ್ರ ಪ್ರಕರಣಗಳಲ್ಲಿ ಇಲೆಕ್ಟ್ರೋ ಕನ್‌ವಲ್ಸಿವ್ ಥೆರಪಿ (ECT) ಅಥವಾ ಟ್ರಾನ್ಸ್‌ಕ್ರಾನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಶನ್ (TMS) ಬಳಕೆ ಮಾಡಲಾಗುತ್ತದೆ.

ಮೆಜರ್ ಡಿಪ್ರೆಸಿವ್ ಡಿಸಾರ್ಡರ್ ಒಂದು ಚಿಕಿತ್ಸೆಗೊಳ್ಳಬಹುದಾದ ಮಾನಸಿಕ ಅಸ್ವಸ್ಥತೆ. ಇದನ್ನು ದೌರ್ಬಲ್ಯ ಅಥವಾ ನಂಬಿಕೆ ಕೊರತೆ ಎಂದು ಪರಿಗಣಿಸಬಾರದು. ಸಮಯಕ್ಕೆ ಸರಿಯಾದ ಚಿಕಿತ್ಸೆ, ಮನೋಬಲ, ಕುಟುಂಬದ ಬೆಂಬಲ ಹಾಗೂ ಸಾಮಾಜಿಕ ಅರಿವುಗಳಿಂದ ವ್ಯಕ್ತಿ ಮತ್ತೆ ಆರೋಗ್ಯಕರ ಮತ್ತು ಸಂತೃಪ್ತ ಜೀವನ ನಡೆಸಬಹುದು.
ಧನುಷ್ ಭಟ್
9945266006
