ಮಳಗಿಯಲ್ಲಿ ಟ್ರ್ಯಾಕ್ಟರ್ ಪಲ್ಟಿ ವಿದ್ಯಾರ್ಥಿನಿ ಸಾವು:ಬೆಟ್ಕುಳಿಯಲ್ಲಿ ಅಂಬ್ಯುಲೆನ್ ಪಲ್ಟಿ ರೋಗಿ ಸಾವು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆ ಮುಂಡಗೋಡು ಮಳಗಿಯಲ್ಲಿ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದು,31 ವಿದ್ಯಾರ್ಥಿನಿಯರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌
ಮುಂಡಗೋಡು ತಾಲೂಕಿನ ಮಳಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿವರ್ಗದವರು ಗೊಟಗೋಡಿಕೊಪ್ಪ ತೋಟಕ್ಕೆ ಪ್ರವಾಸಕ್ಕೆ ತೆರಳಿದ್ದರು.
ತೋಟದಲ್ಲಿ ಊಟ ಮುಗಿಸಿ ಮಧ್ಯಾಹ್ನ ಮಳಗಿ ಕಾಲೇಜಿಗೆ ಹಿಂದಿರುಗುವಾಗ 35 ಜನ ವಿದ್ಯಾರ್ಥಿನಿಯರು ಬರುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿದೆ.

31 ವಿದ್ಯಾರ್ಥಿನಿಯರು ಗಾಯಗೊಂಡಿದ್ದು,ತಲೆಗೆ,ಮುಖಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ವಿದ್ಯಾರ್ಥಿನಿಯರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುಮಾರು 16 ವಿದ್ಯಾರ್ಥಿನಿಯರನ್ನು ಶಿರಸಿ ಆಸ್ಪತ್ರೆಗೆ ಸೇರಿಸಲಾಗಿತ್ತು ಅದರಲ್ಲಿ ಕಲಕೊಪ್ಪ ಗ್ರಾಮದ 19 ವರ್ಷದ
ಕಾವ್ಯ ಬರಮಪ್ಪ ಬ್ಯಾಡಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

#########
ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಖಾಸಗಿ ಆಂಬ್ಯುಲೆನ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಓರ್ವ ಸಾವನ್ನಪ್ಪಿದ್ದು ನಾಲ್ವರು ತೀವ್ರಗಾಯಗೊಂಡಿದ್ದಾರೆ‌.
ಕಾರವಾರ ಕಿನ್ನರದ ಮನೋಜ ದತ್ತಾತ್ರೇಯ ಗುರವ ಮೃತ ವ್ಯಕ್ತಿಯಾಗಿದ್ದಾನೆ. ಖಾಯಿಲೆಯಿಂದ ಬಳಲುತ್ತಿದ್ದ ಈತನನ್ನು ಚಿಕಿತ್ಸೆಗೆಂದು ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಈ ಘಟನೆ ನಡೆದಿದೆ.

About the author

Adyot

Leave a Comment