ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಉತ್ಸವಕ್ಕೆ ಭರ್ಜರಿ ತಯಾರು ನಡೆಯುತ್ತಿದ್ದು ಸಂವಹನಕ್ಕೆ ಅನುಕೂಲವಾಗಲು ಕಚೇರಿಯನ್ನು ಪ್ರಾರಂಭಿಸಲಾಯಿತು.

ಕಚೇರಿ ಉದ್ಘಾಟಿಸಿದ ಡಾ.ಶ್ರೀಧರ ವೈದ್ಯ ಮಾತನಾಡಿ,
ನಾಡಿನ ಹಲವು ಪ್ರದೇಶಗಳಲ್ಲಿ ವಿವಿಧ ಹೆಸರಿನಲ್ಲಿ ಉತ್ಸವಗಳು ಜರಗುತ್ತಿವೆ.ಈ ಹಿಂದೆಯು ಕೂಡ ರಾಜ ಮಹಾರಾಜರ ಕಾಲದಲ್ಲಿಯೂ ಕಲೆಗಳಿಗೆ ಮಾನ್ಯತೆಯನ್ನು ನೀಡಲಾಗುತ್ತಿತ್ತು. ರಾಜ್ಯ ಅಥವಾ ಆಡಳಿತ ಸುಭಿಕ್ಷೆಯಿಂದ ಇದೆ ಎಂದರೆ ಕಲಾವಿದರಿಗೆ, ಕಲೆಗಳಿಗೆ ನಟರಿಗೆ ಕವಿಗಳಿಗೆ ಗೌರವನೀಡುವಂತಾಗಬೇಕು. ಈ ಕಾರಣದಿಂದ ಸ್ಥಳೀಯ ಪ್ರತಿಭೆಯನ್ನು ಗುರುತಿಸಲು ಇಂತಹ ಉತ್ಸವ ಪ್ರಮುಖವಾದದ್ದು, ಸಿದ್ದಾಪುರ ಉತ್ಸವ ಆಚರಣೆ ತೀರಾ ಅಗತ್ಯ ಎಂದು ಹೇಳೀದರು.

ಈ ಉತ್ಸವದಿಂದ ಸ್ಥಳೀಯ ಪ್ರತಿಭೆಯನ್ನು ಗುರುತಿಸಿ ಹೆಚ್ಚಿನ ಅವಕಾಶವನ್ನು ಕಲ್ಪಿಸುವುದಕ್ಕೆ ಸಾಧ್ಯವಾಗುತ್ತಿದೆ. ಇದು ತಾಲೂಕಿನ ಜನತೆಯ ಬಹು ನಿರೀಕ್ಷೆಯ ಕಾರ್ಯಕ್ರಮವಾಗಿದೆ. ಇಂತಹ ಉತ್ಸವ ಉತ್ತಮವಾಗಿ ನಡೆಯುವುದಕ್ಕೆ ತಾಲೂಕಿನ ಜನತೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡಬೇಕು ಎಂದರು.
ಸಿದ್ದಾಪುರ ಉತ್ಸವ ಸಮಿತಿಯ ಅಧ್ಯಕ್ಷರಾದ ಕೆ.ಜಿ.ನಾಯ್ಕ ಹಣಜೀಬೈಲ್ ಅಧ್ಯಕ್ಷತೆಯ ವಹಿಸಿ ಮಾತನಾಡಿ ಮೂರು ದಿನಗಳ ಕಾಲ ನಡೆಯುವ ಸಿದ್ದಾಪುರ ಉತ್ಸವದಲ್ಲಿ ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ಉತ್ಸವ ನಡೆಯಲಿದೆ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಲಿದೆ. ಹೋಮ್ ಮೇಡ್ ಉತ್ಪಾದಕರಿಗೆ ತಾವು ತಯಾರಿಸುವ ಉತ್ಪನ್ನಗಳನ್ನು ಪರಿಚಯಿಸಲು ಸದಾವಕಾಶ ದೊರೆಯಲಿದೆ ಎಂದರು.

ವೇದಿಕೆಯಲ್ಲಿ ಸಿದ್ದಾಪುರ ಉತ್ಸವ ಸಮಿತಿ ಉಪಾಧ್ಯಕ್ಷರಾದ ನಾಗರಾಜ ಆರ್.ನಾಯ್ಕ್ ಬೇಡ್ಕಣಿ, ಸತೀಶ ಎಸ್. ಹೆಗಡೆ ಬೈಲಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಆಕಾಶ ಎಸ್. ಕೊಂಡ್ಲಿ, ಹರೀಶ ಎಸ್. ಗೌಡರ್ ಹರಳಿಕೊಪ್ಪ, ವಿನಾಯಕ ಎಮ್. ನಾಯ್ಕ ಕೊಂಡ್ಲಿ, ಎಚ್. ಕೆ. ಶಿವಾನಂದ ಕಾನಗೋಡ,ಕೋಶಾಧ್ಯಕ್ಷರಾದ ವಿನಯ ಎಸ್. ಹೊನ್ನೆಗುಂಡಿ , ಸ್ವಾಗತ ಸಮಿತಿ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ರಾಘವೇಂದ್ರ ರಾಯ್ಕರ್ ಹಾಳದಕಟ್ಟಾ, ಲಕ್ಷ್ಮೀಶ ಜಿ. ನಾಯ್ಕ ಕಾನಳ್ಳಿ, ಪ್ರವೀಣ ಎನ್. ನಾಯ್ಕ ವಾಟಗಾರ.ಸ್ವಾಗತ ಸಮಿತಿ ಉಪಾಧ್ಯಕ್ಷ ಶೀರಿಷ ಎಂ. ಬೆಟಗೇರಿ,ಕಾರ್ಯದರ್ಶಿ ಸುರೇಶ ಕೃಷ್ಣ ಮೇಸ್ತ ಕನಕದಾಸಗಲ್ಲಿ,ವೇದಿಕೆ ಸಮಿತಿ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಾವಂಚೂರು,ಪ್ರಚಾರ ಸಮಿತಿಯ ಉಪಾಧ್ಯಕ್ಷ ಶ್ರವಣಕುಮಾರ ಹೊಸೂರು,ಸಾಮಾಜಿಕ ಜಾಲತಾಣ ಸಮಿತಿ ಅಧ್ಯಕ್ಷ ಶಿವಕುಮಾರ ನಾಯ್ಕ ಕೊಂಡ್ಲಿ,ಕಾರ್ಯದರ್ಶಿ ಎಲ್.ಜಿ. ನಾಯ್ಕ ಎ.ಪಿ.ಎಂ.ಸಿ.ನಾಗಭೂಷಣ ಕೊಂಡ್ಲಿ ಮೊದಲಾದವರು ಉಪಸ್ಥಿತರಿದ್ದರು.
ಸಿದ್ದಾಪುರ ಉತ್ಸವದಲ್ಲಿ ಪ್ರದರ್ಶನ ನೀಡಲು ಅವಕಾಶ
ಇದೇ ಪ್ರಥಮ ಬಾರಿಗೆ ಪಟ್ಟಣದ ನೆಹರು ಮೈದಾನದಲ್ಲಿ ಮೂರು ದಿನಗಳ ಕಾಲ ಸಿದ್ದಾಪುರ ಉತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಗುತ್ತಿದೆ. ಸ್ಥಳೀಯ ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಮೂರು ದಿವಸ ಸ್ಥಳೀಯ ಅಯ್ದ ಕಲಾವಿದರಿಗೆ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಆಯ್ದ ಕೆಲವು ಹೊರಗಿನ ಕಲಾವಿದರಿಗೂ ಅವಕಾಶ ನೀಡಲಾಗುವುದು.
ಕಲಾ ಉತ್ಸವದಲ್ಲಿ ಪ್ರದರ್ಶನ ನೀಡಲು ಇಚ್ಚಿಸುವ ತಾಲ್ಲೂಕಿನ ಹಾಗೂ ಹೊರಗಿನ ಕಲಾವಿದರು ಉತ್ಸವದಲ್ಲಿ ಭಾಗವಹಿಸಿ ಬಹುದು ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಾದ ಎಸ್ ಎಮ್ ನಾಯ್ಕ, ಉಪಾಧ್ಯಕ್ಷ ರಾದ ನಾಸಿರ್ ಖಾನ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಭಾಗವಹಿಸಲಿಚ್ಚಿಸುವವರು ಕಾರ್ಯದರ್ಶಿ ಸುರೇಶ ಕಡಕೇರಿ (೯೯೪೫೭೭೪೫೪೮) ರವರನ್ನು ಸಂಪರ್ಕಿಸಬಹುದಾಗಿದೆ.
