ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪತ್ತೆ

ಆದ್ಯೋತ್ ನ್ಯೂಸ್ ಡೆಸ್ಕ್ : ದೇಶದಲ್ಲಿ ಕೊರೊನಾ ದಿನಕಳೆದಂತೆ ತನ್ನ ಅಟ್ಟಹಾಸವನ್ನ ಮೆರೆಯುತ್ತಿದೆ. ದಿನ ಕಳೆಯುತ್ತಿದ್ದಂತೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5000 ದ ಗಡಿ ದಾಟಿದ್ದರೆ, ರಾಜ್ಯದಲ್ಲಿ 200 ರ ಗಡಿಯ ಹತ್ತಿರ ಬಂದು ನಿಂತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8 ಇದ್ದು, ನಿನ್ನೆ 2 ಜನ ಸಂಪೂರ್ಣ ಗುಣಮುಖರಾಗಿದ್ದರು. ಆದರೆ ಇಂದು ಜಿಲ್ಲೆಯಲ್ಲಿ ಇನ್ನೊಂದು ಕೊರೊನಾ ಪ್ರಕರಣದಿಂದ ಕೊರೊನಾ ಸಂಖ್ಯೆ 9ಕ್ಕೇರಿದ್ದು ಮತ್ತೆ ಜಿಲ್ಲೆಯ ಜನರನ್ನ ಚಿಂತೆಗೀಡುಮಾಡಿದೆ.

ಈ ಸಾರಿ ಕೂಡ ಭಟ್ಕಳದಲ್ಲೇ ಗರ್ಭಿಣಿ ಮಹಿಳೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಭಟ್ಕಳದ 26 ವರ್ಷದ ಮಹಿಳೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಮಹಿಳೆಯ ಪತಿ ದುಬೈನಿಂದ ಮಾರ್ಚ್ 17 ರಂದು ವಾಪಾಸ್ ಆಗಿದ್ದರು. ಆದರೆ ಪತಿಯಲ್ಲಿ ಕಾಣಿಸಿಕೊಳ್ಳದ ಕೊರೋನಾ, ಅವರ ಐದು ತಿಂಗಳ ಗರ್ಭಿಣಿ ಪತ್ನಿಯಲ್ಲಿ ಕಾಣಿಸಿಕೊಂಡಿದೆ. ಪತ್ನಿಯ ಆರೋಗ್ಯ ಹದಗೆಟ್ಟಿದ್ದರಿಂದ ಪತಿ ಅವರನ್ನ ಕರೆದುಕೊಂಡು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಅವರ ಕೈಮೇಲೆ ಸೀಲ್ ಇದ್ದರಿಂದ ಇಬ್ಬರನ್ನೂ ಕೂಡ ಆಸ್ಪತ್ರೆಗೆ ದಾಖಲು ಮಾಡಿ ಇಬ್ಬರ ಸ್ವಾಬ್ ಕೂಡ ಪರೀಕ್ಷೆಗೆ ಕಳಿಸಿಕೊಡಲಾಗಿತ್ತು. ಅದರಲ್ಲಿ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ. ಪತಿಯ ಸ್ವಾಬ್ 2 ನೇ ಬಾರಿ ಮರುಪರೀಕ್ಷೆಗೆ ಕಳಿಸಿಕೊಡಲಾಗಿದ್ದು, ವರದಿ ಬರುವುದು ಬಾಕಿಯಿದೆ. ಮಹಿಳೆಗೆ ಕೊರೋನಾ ಹೇಗೆ ಬಂದಿದೆ ಎನ್ನುವ ಬಗ್ಗೆ ಪರಿಶೀಲನೆ ಕೂಡ ನಡೆಯುತ್ತಿದ್ದು, ಮಹಿಳೆಯನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ಚಿಂತನೆ ನಡೆದಿದೆ.

About the author

Adyot

Leave a Comment