“ಜಗತ್ಕಲ್ಯಾಣ ಕಾರ್ಯಾಯ ನರರೂಪ ಧರಾಯಚ ಯೋಗಿರಾಜಾಯ ವಂದ್ಯಾಯ ಶ್ರೀಧರಾಯನಮೋನಮ:”
**** **** **** **** **** ****
ನಮ್ಮ ಜೀವನವು ಶಾಶ್ವತವಲ್ಲ. ಹಾಗಂತ ಹುಟ್ಟಿದವರು ಹೇಗೂ ಸಾಯುತ್ತಾರೆ ಎಂದು ಸುಮ್ಮನಿರಲು ಸಾಧ್ಯವಿಲ್ಲ,
ಇಂದು ಜೀವನ ಸುಲಭವಲ್ಲ. ಇಂದು ನಾವು ಸೇವಿಸುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಕಲುಷಿತವಾಗುತ್ತಿವೆ. ನಮ್ಮ ಆಹಾರ ಕ್ರಮದಲ್ಲಿ ದಿನನಿತ್ಯದ ಕೆಲಸಗಳಲ್ಲಿ, ನಾವು ಮಲಗುವುದರಲ್ಲಿ ಹೀಗೆ ನಮ್ಮ ದೈನಂದಿನ ಕೆಲಸಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಮಾಡಬೇಕು. ನಾವು ರಾತ್ರಿ ಎಷ್ಟೋ ಹೊತ್ತಿಗೆ ಮಲಗುತ್ತೇವೆ, ಎಷ್ಟೋ ಹೊತ್ತಿಗೆ ಏಳುತ್ತೇವೆ ಆಹಾರ ತೆಗೆದುಕೊಳ್ಳುವದರಲ್ಲಿ
ಕ್ರಮವಿಲ್ಲ, ನಮ್ಮ ದಿನನಿತ್ಯದ ಕೆಲಸ-ಕಾರ್ಯಗಳಿಗೆ ನಿಗದಿತ ಸಮಯವಿಲ್ಲ. ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರಾಗುವುದರ ಜೊತೆಗೆ ನಮ್ಮ ಆಯುಷ್ಯ ಕ್ಷೀಣಿಸುತ್ತದೆ.
ಹಾಗಾದರೆ ನಾವು ಏನು ಮಾಡಬೇಕು?
ನಮ್ಮ ದೈನಂದಿನ ಚಟುವಟಿಕೆಗೆ ಸಮಯ ನಿಗದಿ ಪಡಿಸಿಕೊಳ್ಳಬೇಕು. ನಾವು ಬೆಳಿಗ್ಗೆ ಏಳುವುದರಿಂದ ಹಿಡಿದು ಮಲಗುವವರೆಗಿನ ಚಟುವಟಿಕೆಗಳಿಗೆ ಸಮಯ ನಿಗದಿ ಪಡಿಸಿಕೊಳ್ಳಬೇಕು. ಬೆಳಗಿನ ಶೌಚ ಕರ್ಮಕ್ಕೆ ಇಷ್ಷು ಸಮಯ, ಧ್ಯಾನ-ಯೋಗಕ್ಕೆ ಇಷ್ಟು ಸಮಯ, ಸ್ನಾನ-ತಿಂಡಿಗೆ ಇಷ್ಟು ಸಮಯ ಹೀಗೆ ಪ್ರತಿಯೊಂದಕ್ಕೂ ಸಮಯ ನಿಗದಿ ಪಡಿಸಿಕೊಂಡರೆ ಒಂದು ಸರಳ, ನೆಮ್ಮದಿಯ ಬದುಕನ್ನು ನಾವು ಪಡೆಯಬಹುದು.
ಉದಾಹರಣೆಗೆ ಬೆಳಿಗ್ಗೆ 6ಗಂಟೆಗೆ ಏಳುವುದು, 15 ನಿಮಿಷ ಶೌಚ, 20ನಿಮಿಷ ಧ್ಯಾನ-ಯೋಗ, 15 ನಿಮಿಷ ಸ್ನಾನ ಹೀಗೆ ಪ್ರತಿಯೊಂದು ಕೆಲಸಕ್ಕೂ ಒಂದು ಸಮಯವನ್ನು ನಿಗದಿ ಪಡಿಸಿಕೊಂಡರೆ ನಮ್ಮ ಗುರಿ ತಲುಪಲು ಸಮಯ ಉಳಿಸಿಕೊಳ್ಳಬಹುದು.
***** ***** ***** ***** ***** ***** ****
ಹಾಗಾದರೆ ಈ ವಾರದ ರಾಶಿ ಭವಿಷ್ಯ ಏನಿದೆ ನೋಡೋಣ.
ಮೇಷ: ಯಾವುದೇ ವ್ಯಾಪಾರ ವ್ಯವಹಾರ ಮಾಡಿದರೂ ಕೈ ಹಿಡಿಯುವ ವಾರ. ಧೈರ್ಯದಿಂದ ಮುನ್ನಡೆದರೆ ಜಯ ದೊರಕುವುದು, ಎಷ್ಟು ಶ್ರಮ ಹಾಕುವಿರೋ ಅಷ್ಟು ಒಳ್ಳೆಯದು.
ವೃಷಭ: ಸಾಲ ಮಾಡುವುದು ಬೇಡ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಶತ್ರು ಬಾಧೆ ಹೆಚ್ಚಾಗುವ ಸಾಧ್ಯತೆ. ದಾಯಾದಿ ಕಲಹ ಹೆಚ್ಚುತ್ತದೆ, ಕೋರ್ಟು ತೀರ್ಮಾನಗಳಿದ್ದಲ್ಲಿ ಮುಂದೂಡುವುದು ಒಳ್ಳೆಯದು.
ಮಿಥುನ: ವಾಹನ ಓಡಾಟದಲ್ಲಿ ಎಚ್ಚರಿಕೆ ಅಗತ್ಯ. ಅಪಘಾತಗಳು ಹೇಗೆ ಸಂಭವಿಸುತ್ತದೆ ಹೇಳಲು ಬರುವುದಿಲ್ಲ. ಗುರುವಾರ ಹಣಕಾಸಿನ ವ್ಯವಹಾರ ಮಾಡಿದರೆ ಒಳ್ಳೆಯದು. ಸೋಮವಾರ ಈಶ್ವರ ದೇವಾಲಯಕ್ಕೆ ಭೇಟಿ ನೀಡಿ 9 ಪ್ರದಕ್ಷಿಣೆ ಹಾಕಿದರೆ ಒಳ್ಳೆಯದು.
ಕರ್ಕಾಟಕ: ವಾರದ ಆರಂಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಲಿದೆ. ಉದ್ವಿಗ್ನತೆಯಿಂದ ಮಿತ್ರರ ನಿಷ್ಠುರತೆ ಕಟ್ಟಿಕೊಳ್ಳುವಿರಿ. ಮಾತಿನಲ್ಲಿ ಹಿಡಿತವಿರಲಿ. ಉದ್ಯೋಗದಲ್ಲಿ ಸಮಸ್ಯೆ ಇಲ್ಲ. ವಾರಾಂತ್ಯದಲ್ಲಿ ಆರೋಗ್ಯದಲ್ಲಿ ಸುಧಾರಣೆಯಾಗುವುದರ ಜೊತೆಗೆ ಕಾರ್ಯಸಾಧನೆಯಾಗಲಿದೆ.
ಸಿಂಹ: ಪ್ರೇಮದಲ್ಲಿ ಯಶಸ್ಸು ಸಿಗುವುದು .ಕೆಲಸ ಕಾರ್ಯಗಳು ನಿರ್ವಿಘ್ನತೆಯಿಂದ ನೆರವೇರುವವು. ಹೊಸ ಹೂಡಿಕೆಗೆ ಸಕಾಲ,
ಇಷ್ಟಪಟ್ಟ ವಸ್ತು ಸಿಗುವುದರ ಜೊತೆಗೆ ನಷ್ಟ ಹೊಂದಿದ್ದ ವಸ್ತು ಪುನ: ಸಿಗಲಿದೆ.
ಕನ್ಯಾ: ವ್ಯರ್ಥ ತಿರುಗಾಟ ಬೇಡ, ಕೈಗೆಟುಕದ ವಸ್ತುವಿಗೆ ಆಸೆ ಪಡುವುದು ಬೇಡ. ನಿಮ್ಮ ಇಷ್ಟದ ಪ್ರಕಾರ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ವಾರಾಂತ್ಯದಲ್ಲಿ ಒಂದಿಷ್ಟು ಹಣಕಾಸು ದೊರೆತರೂ ಅದು ಆರೋಗ್ಯದ ಸಮಸ್ಯೆಗೆ ಖರ್ಚಾಗಲಿದೆ. ವಿಷ್ಣು ಸಹಸ್ರನಾಮ ಪಠಣೆಯಿಂದ ಒಂದಿಷ್ಟು ಒಳಿತಾಗಲಿದೆ.
ತುಲಾ: ಖರ್ಚಿನಲ್ಲಿ ಮಿತಿ ಇರಲಿ. ಗಂಡ-ಹೆಂಡಿರ ನಡುವೆ ಜಗಳವಾಗಲಿದೆ. ವಿಕೋಪಕ್ಕೆ ಹೋಗದಂತೆ ತಡೆಯಿರಿ. ಹಣಕಾಸಿನ ವ್ಯವಹಾರ ಹಳಿತಪ್ಪಲಿದೆ. ಪ್ರತಿ ಹೆಜ್ಜೆಗೂ ಎಚ್ಚರಿಕೆ ಅಗತ್ಯ. ಪ್ರೇಮಿಗಳಿಗೆ ಕಿರಿ ಕಿರಿಯ ವಾರ.
ವೃಶ್ಚಿಕ: ಸಾಹಸ ಪೂರ್ಣ ಕೆಲಸಕ್ಕೆ ಕೈ ಹಾಕಲು ಇದು ಸಕಾಲ. ಮಂಗಳವಾರ ಬರಲಿರುವ ಶುಭ ಸುದ್ದಿಯೊಂದು ನಿಮ್ಮ ಬದುಕನ್ನು ಬದಲಾಯಿಸಲಿದೆ. ಸತಿ-ಪತಿಯರಲ್ಲಿ ಅನ್ಯೋನ್ಯತೆ ಕಂಡುಬರುವುದು. ಪ್ರೇಮ ವ್ಯವಹಾರದಲ್ಲಿ ಜಯ ಸಿಗಲಿದೆ.
ಧನಸ್ಸು: ಆರ್ಥಿಕ ಶಿಸ್ತು ಬಹು ಮುಖ್ಯವಾಗಿದೆ. ಇಲ್ಲವಾದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ಮನಸ್ಸು ಚಂಚಲಗೊಳ್ಳುವ ಹಲವು ಘಟನೆಗಳು ಜರುಗಲಿವೆ. ಮನಸ್ಸು ದೃಢವಾಗಿರಲಿ.
ಮೃತ್ಯುಂಜಯ ರುದ್ರಪಾರಾಯಣ ಮಾಡುವುದು ಒಳಿತು.
ಮಕರ: ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದರೂ ಸಂಕಷ್ಟಗಳು ತಪ್ಪುವುದಿಲ್ಲ. ಹಣ ಕೈ ಸೇರುತ್ತಿದ್ದರೂ ಸಮಸ್ಯೆ ತಪ್ಪುತ್ತಿಲ್ಲ ಮನಸ್ಸಿನ ಏಕಾಗ್ರತೆ ಕುಂಠಿತಗೊಳ್ಳುತ್ತದೆ. ಜಲಕಂಟಕ ಇರುವುದರಿಂದ ನೀರಿಗೆ ಇಳಿಯುವುದು ಬೇಡ. ದಶರಥ ಕೃತ ಶನೇಶ್ಚರ ಮಂತ್ರವನ್ನು ಪಠಿಸಿ.
ಕುಂಭ: ನೆರೆ-ಹೊರೆಯವರಲ್ಲಿ ಜಗಳವಾಗುವ ಸಾಧ್ಯತೆ ಇರುವುದರಿಂದ ಮಾತಿನಲ್ಲಿ ಹಿಡಿತವಿರಲಿ. ಹಣಕಾಸು ಪರಿಸ್ಥಿತಿ ಉತ್ತಮವಾಗಿದ್ದರೂ ವಿಪರೀತ ಖರ್ಚು ಬರಲಿದೆ. ಪ್ರವಾಸ ಸಾಧ್ಯತೆ ಇದ್ದರೂ ವಾಹನದಲ್ಲಿ ಎಚ್ಚರಿಕೆ ಅಗತ್ಯ. ಶನೇಶ್ಚರ ಮೂಲ ಮಂತ್ರ ಪಠಣೆ ಒಳ್ಳೆಯದು.
ಮೀನ: ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ಜನಮನ್ನಣೆ ದೊರೆಯಲಿದೆ, ಹಣದ ವ್ಯವಹಾರದಿಂದ ಲಾಭ ಬರಲಿದೆ. ಚಿನ್ನ ಖರೀದಿಯ ಜೊತೆಗೆ ಹೊಸ ಪ್ರೇಮ ವ್ಯವಹಾರ ನಡೆಯಲಿದೆ
****************ಶುಭಂ****************** ಸಂಪರ್ಕಿಸಿ: 9449454044
Good massage.
Good massage