ಮನುಷ್ಯನ ಬದುಕಿನಲ್ಲಿ ಹಣದ ಪಾತ್ರ ಬಹುಮುಖ್ಯ. ನಮಗೆ ಬಹಳ ಸಂಬಂಧಿಕರಿದ್ದಾರೆ, ನಮಗೆ ಬಹಳಷ್ಟು ಸ್ನೇಹಿತರಿದ್ದಾರೆ, ನಮಗೆ ಬಹಳಷ್ಟು ಹಿತೈಷಿಗಳಿದ್ದಾರೆ ಎಂದು ನಾವು ಅಂದುಕೊಳ್ಳುತ್ತೇವೆ. ಯಾವಾಗ ನಾವು ತೊಂದರೆಗೆ ಸಿಲುಕುತ್ತೇವೆಯೋ ಆಗ ಈ ಇದ್ದಾರೆ ಎನ್ನುವವರು ಮಾಯವಾಗುತ್ತಾರೆ. ಆದರೆ ನಮ್ಮ ಗೆಲುವಿಗೆ, ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಗೊಳಿಸಲು ಸಾಧ್ಯವಿರುವುದು ಹಣಕ್ಕೆ ಮಾತ್ರ. ಇಂತಹ ಹಣವನ್ನು ದುಡಿಯುವುದು ಮುಖ್ಯವಲ್ಲ, ಅದನ್ನು ವ್ಯವಸ್ಥಿತವಾಗಿ ಇಡುವುದು ಮುಖ್ಯ.
ಕೆಲವರು ಹಣವನ್ನು ಎಲ್ಲೆಂದರಲ್ಲಿ ಇಟ್ಟಿರುತ್ತಾರೆ. ಹಾಗಂತ ಅವರು ಬಹಳ ದೊಡ್ಡ ಶ್ತೀಮಂತರಲ್ಲ, ಯಶಸ್ವಿ ಉದ್ಯಮಿಗಳು ಆಗಿರುವುದಿಲ್ಲ. ಆದರೆ ಹಣದ ಬಗ್ಗೆ ದಿವ್ಯ ನಿರ್ಲಕ್ಷ. ಇದು ಅವರ ಆರ್ಥಿಕ ಪರಿಸ್ಥಿತಿ ಹದಗೆಡಲು ಬಹುಮುಖ್ಯ ಕಾರಣವಾಗಿರುತ್ತದೆ. ಹಣವನ್ನು ಯಾರಾದರೂ ಎಗರಿಸಬಹುದು, ಕಸದ ಜೊತೆ ಹೋಗಬಹುದು, ನೆನಪಿರಲಿ 99 ರೂಪಾಯಿಗೆ ಒಂದು ರೂಪಾಯಿ ಸೇರಿದರೆ ಮಾತ್ರ ನೂರು ರೂಪಾಯಿ ಆಗಲು ಸಾಧ್ಯ. ಇದು ನಮಗೆ ತಿಳಿದರೆ ನಾವು ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಸಾಧ್ಯ.
(ಮುಂದುವರಿಯುವುದು)
***** ***** **** **** ***** ***** ******
*** *** *** *** *** *** *** *** ***
ವಾರ ಭವಿಷ್ಯ : 01-03-2020 ರಿಂದ 07-03-2020 ರವರೆಗೆ
ಮೇಷ: ಹಣಕಾಸು ವ್ಯವಹಾರ ಸುಲಭವಾಗಿ ನಡೆಯಲಿದೆ. ಹೊಸ ವ್ಯವಹಾರವನ್ನು ಪ್ರಾರಂಬಿಸಲಿದ್ದಿರಿ. ಬಂಧು ಮಿತ್ರರ ಭೇಟಿಯಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಪುಣ್ಯ ಕ್ಷೇತ್ರಗಳ ದರ್ಶನದ ಜೊತೆಗೆ ಗುರು-ಹಿರಿಯರ ಆಶೀರ್ವಾದ ದೊರಕಲಿದೆ.
ವೃಷಭ: ವ್ಯವಹಾರಗಳಲ್ಲಿ ಹಿನ್ನಡೆಯಾಗಲಿದ್ದು ಮಿತ್ರರಿಂದ, ಹಿತೈಷಿಗಳಿಂದ ಮೋಸ ಹೋಗುವ ಸಾಧ್ಯತೆ ಇದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ವಾಹನದಿಂದ ಅಪಾಯವಾಗಲಿದೆ. ವಾರದ ಕೊನೆಯಲ್ಲಿ ಬಂಧುಗಳ ಆಗಮನದಿಂದ ಸಂತೋಷದ ವಾತಾವರಣವಿದ್ದರೂ ಖರ್ಚು ಹೆಚ್ಚಾಗಲಿದೆ. ಗುರುವಾರ ಗುರು ದರ್ಶನ ಮಾಡುವುದು ಉತ್ತಮ.
ಮಿಥುನ: ಅಷ್ಟಮ ಶನಿಯಿಂದಾಗಿ ಅಪಘಾತಗಳು ಸಂಭವಿಸಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮಾವಾಗಿದ್ದರೂ ವಿಪರೀತ ಖರ್ಚಿನಿಂದಾಗಿ ವಾರದ ಅಂತ್ಯದಲ್ಲಿ ಕೈ ಖಾಲಿಯಾಗಲಿದೆ. ಬುಧವಾರ ಅನಿರೀಕ್ಷಿತ ಘಟನೆಯೊಂದು ಜರುಗಲಿದ್ದು ಜೀವನದಲ್ಲಿ ಭಾರಿ ತಿರುವು ದೊರೆಯಲಿದೆ. ಕಪ್ಪು ಎಳ್ಳು, ಕಪ್ಪು ಬಟ್ಟೆಯನ್ನು ದಾನ ಮಾಡುವುದು ಒಳ್ಳೆಯದು.
ಕರ್ಕಾಟಕ: ಹೊಸ ವ್ಯವಹಾರ ಮಾಡಲು ಸಕಾಲ. ಉತ್ತಮ ಹಣಕಾಸು ವಹಿವಾಟಿನಿಂದಾಗಿ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಲಿದೆ. ಮಾನಸಿಕ ಕ್ಲೇಶಗಳು ಕಾಣಿಸಿಕೊಂಡರೂ ಅದರಿಂದ ವ್ಯವಹಾರಗಳಿಗೆ ಅಡ್ಡಿಯಾಗುವುದಿಲ್ಲ. ಶಿವಪಂಚಾಕ್ಷರಿ ಮಂತ್ರ ಪಠಿಸುವುದರಿಂದ ಮಾನಸಿಕ ದೃಢತೆ ಸಿಗಲಿದೆ.
ಸಿಂಹ: ಈ ವಾರ ನೀವು ಪ್ರಾರಂಭಿಸಲಿರುವ ವ್ಯವಹಾರ ಮುಂದಿನ ನಿಮ್ಮ ಭವಿಷ್ಯವನ್ನು ಭದ್ರಪಡಿಸಲಿದೆ. ಉತ್ತಮ ಗೆಳೆಯರು ದೊರಕಲಿದ್ದು ಪಾಲುದಾರಿಕೆ ವ್ಯವಹಾರ ಬೇಡ. ವಸ್ತ್ರಾಭರಣ ಖರೀದಿ ಮಾಡಲಿದ್ದೀರಿ. ಜಮೀನು ವ್ಯವಹಾರದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ವ್ಯಾಜ್ಯದಲ್ಲಿ ಜಯ ದೊರಕಲಿದೆ.
ಕನ್ಯಾ: ಮಾನಸಿಕ ಕ್ಲೇಶ ನಿಮ್ಮ ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ. ಅನವಶ್ಯಕ ಮಾನಹಾನಿಯಾಗುವ ಸಂಭವವಿದೆ. ಮಾತನಾಡುವಾಗ ಎಚ್ಚರವಿರಲಿ. ಅವಶ್ಯಕ ವಸ್ತುಗಳ ಖರೀದಿಯಿಂದ ಧನ ನಷ್ಟವಾಗಲಿದೆ. ಶನೇಶ್ಚರ ಮೂಲ ಮಂತ್ರ ಪಠನೆಯ ಜೊತೆಗೆ ಮಹಾಲಕ್ಷ್ಮಿ ಪೂಜೆ ಮಾಡುವುದು ಉತ್ತಮ.
ತುಲಾ: ಹೊಟ್ಟೆ ನೋವಿನಿಂದ ಬಳಲುವಿರಲ್ಲದೆ ಶತ್ರುಬಾಧೆಗೆ ಒಳಗಾಗುವಿರಿ. ಹಣಕಾಸು ವ್ಯವಹಾರ ವಾರದ ಆರಂಭದಲ್ಲಿ ಉತ್ತಮವಾಗಿದ್ದರೂ ಗುರುವಾರದ ನಂತರ ಕೈಕೊಡಲಿದೆ. ನೀವು ನಿರೀಕ್ಷಿಸಿದ ರೀತಿಯಲ್ಲಿ ಹಣಕಾಸು ನೆರವು ದೊರೆಯದೆ ಮಾನಸಿಕ ಕ್ಷೋಭೆಯಿಂದ ಬಳಲಲಿದ್ದೀರಿ. ಆಂಜನೇಯ ಸ್ತ್ರೋತ್ರ ಪಠನೆ ಉತ್ತಮ
ವೃಶ್ಚಿಕ: ಉದ್ಯೋಗದಲ್ಲಿ ಉತ್ತಮ ಪ್ರಗತಿಯಾಗಲಿದೆ. ಕೋರ್ಟ ವ್ಯವಹಾರದಲ್ಲಿ ಜಯ ದೊರಕಲಿದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಮಿತ್ರರಿಂದ ಮೋಸ ಹೋಗುವಿರಲ್ಲದೆ ಮಾನಹಾನಿಗೂ ಒಳಗಾಗಲಿರುವಿರಿ. ಎಚ್ಚರಿಕೆಯಿಂದ ವ್ಯವಹರಿಸಿದರೆ ಉತ್ತಮ ವಾರ. ಹೊಸ ವಸ್ತುಗಳ ಖರೀದಿ, ಚಿನ್ನಾಭರಣಗಳ ಖರೀದಿ ಮಾಡಲಿದ್ದೀರಿ.
ಧನಸ್ಸು: ನಿಮ್ಮ ಮಾನಹಾನಿ ಮಾಡಲು ಕಾಯುತ್ತಿರುವ ಜನರಿದ್ದಾರೆ ಎಚ್ಚರಿಕೆಯಿಂದ ವ್ಯವಹರಿಸಿ. ಹಣಕಾಸು ಮುಗ್ಗಟ್ಟಿನಿಂದ, ನಿರೀಕ್ಷಿಸಿದ ಪ್ರಮಾಣದಲ್ಲಿ ಕೆಲಸವಾಗದ ಕಾರಣ ಮಾನಸಿಕವಾಗಿ ಕುಗ್ಗುವಿರಿ.
ಆರೋಗ್ಯ ಸಮಸ್ಯೆಯೂ ಉಲ್ಭಣಿಸಲಿದೆ. ವಾಹನ ಓಡಾಟದಲ್ಲಿ ಎಚ್ಚರಿಕೆ ಅಗತ್ಯ. ಗುರು ಪೂಜೆ ಮಾಡುವುದು, ಕಪ್ಪು ವಸ್ತ್ತದಲ್ಲಿ ತೆಂಗಿನಕಾಯಿಯನ್ನು ಇಟ್ಟು ಮೂರು ದಿನ ಪೂಜೆ ಮಾಡಿ ದೇವಾಲಯಕ್ಕೆ ನೀಡುವುದು ಒಳ್ಳೆಯದು.
ಮಕರ: ನಿಮ್ಮಲ್ಲಿರುವ ಕ್ರೋಧ ಹಿನ್ನಡೆಗೆ ತರಲಿದೆ. ಮಾನಹಾನಿಯಾಗುವ ಸಾಧ್ಯತೆ ಇರುವುದರಿಂದ ಬಂಧುಗಳಲ್ಲಿ, ಸ್ನೇಹಿತರಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ವಾಹನದಿಂದ ಅಪಾಯವಾಗುವ ಸಾದ್ಯತೆ ಇದೆ. ವಾಹನ ಚಲಾವಣೆ ನಿಲ್ಲಿಸುವುದು ಉತ್ತಮ. ವಾರಾಂತ್ಯದಲ್ಲಿ ಬಂಗಾರ ಖರೀದಿಸಲಿದ್ದೀರಿ. ನವಧಾನ್ಯವನ್ನು ಕಪ್ಪು ಆಕಳಿಗೆ ತಿನ್ನಿಸುವುದು ಉತ್ತಮ.
ಕುಂಭ: ವಿಪರೀತ ಖರ್ಚಿನಿಂದಾಗಿ ಆರ್ಥಿಕ ಮುಗ್ಗಟ್ಟು ಉಂಟಾಗಲಿದೆ. ಆರೋಗ್ಯದ ಸಮಸ್ಯೆ ಉಲ್ಭಣಿಸಿ ಖರ್ಚಿಗೆ ದಾರಿಯಾಗಲಿದೆ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ದೊರಕಿದರೂ ಸಹದ್ಯೋಗಿಗಳ ಅಸಹಕಾರದಿಂದ ಅಪವಾದಕ್ಕೆ ಗುರಿಯಾಗುವಿರಿ. ಹೊಸ ವಸ್ತ್ರ ಖರೀದಿಯಾಗಲಿದೆ ವಾರಾಂತ್ಯದಲ್ಲಿ ಬಂಧು ಮಿತ್ರರ ಸಮಾಗಮದಿಂದ ಮಾನಸಿಕ ದೃಢತೆ ಪಡೆಯಲಿದ್ದೀರಿ.
ಮೀನ: ಮಾನಸಿಕ ಕ್ಷೋಭೆಯಿಂದ ಆರೋಗ್ಯ ಪರಿಸ್ಥಿತಿ ಹದಗೆಡಲಿದೆ. ಹಣಕಾಸು ಪರಿಸ್ಥಿತಿ ಉತ್ತಮವಾಗಿರುವುದಲ್ಲದೆ ಹೊಸ ವಸ್ತುಗಳನ್ನು ಖರೀದಿಸಲಿದ್ದೀರಿ. ಉತ್ತಮ ಸಂಬಂಧದಿಂದ ಹೊಸ ಯೋಜನೆಗೆ ಚಾಲನೆ ದೊರಕಲಿದೆ.
***** ***** *** ಶುಭಂ *** ***** *****
ಮಾರ್ಚ 2020 ರಲ್ಲಿ ಬರುವ ಪ್ರಮುಖ ದಿನಗಳು :
ಮಾರ್ಚ್ 09 ಸೋಮವಾರ – ಹೋಳಿಹುಣ್ಣಿಮೆ
ಮಾರ್ಚ್ 12 ಗುರುವಾರ – ಸಂಕಷ್ಠಿ(ಚಂದ್ರೋದಯ-10.04 ರಾತ್ರೆ)
ಮಾರ್ಚ್ 25 ಬುಧವಾರ – ಯುಗಾದಿ ಹಬ್ಬ ಹೊಸ ಸಂವತ್ಸರದ ಪ್ರಾರಂಭ.
,👌👌👍👍