30-10-2022 ರಿಂದ 5-11-2022
########################################
ಮೇಷ
ಶತ್ರುಗಳ ಕಾಟದಿಂದ ಕೆಲಸದಲ್ಲಿ ವಿಳಂಬ.ಹಣಕಾಸಿನ ಮುಗ್ಗಟ್ಟು ಕುಟುಂಬದಲ್ಲಿ ಅಶಾಂತಿ ತರಲಿದೆ.ಸುಖಭೋಜನ ದೊರೆಯಲಿದೆ.ಆರೋಗ್ಯದಲ್ಲಿ ತೊಂದರೆ ಇಲ್ಲ. ಗುರುವಾರದ ನಂತರ ನಿರೀಕ್ಷಿಸಿದ ಕೆಲಸ ಕೈಗೂಡಲಿದೆ.ವ್ಯಾಪರಸ್ಥರಿಗೆ ಉತ್ತಮವಾಗಿದೆ ದ್ರವ ಪದಾರ್ಥ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲ.ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ.
#####
ವೃಷಭ
ಹಿಡಿದ ಕೆಲಸದಲ್ಲಿ ಜಯ ದೊರಕಲಿದೆ.ಹೊಸವಸ್ತುಗಳ ಖರೀದಿಯಾಗಲಿದೆ.ವಾಹನಗಳ ಖರೀದಿಯೂ ಆಗಲಿದೆ.ಆರೋಗ್ಯದಲ್ಲಿ ತೊಂದರೆಯಾಗಲಿದೆ.ಹೊಟ್ಟೆಗೆ ಸಂಭಂಧಿಸಿದಂತೆ ತೊಂದರೆಯಾಗಲಿದೆ.ದುಃಖದ ಸುದ್ದಿಯೊಂದು ಮನಸ್ಸಿಗೆ ಅಶಾಂತಯನ್ನುಂಟು ಮಾಡಲಿದೆ. ಧಾನ್ಯ ಹಾಗೂ ಬಟ್ಟೆ ವ್ಯಾಪರಸ್ಥರಿಗೆ ಉತ್ತಮ ಲಾಭವಾಗಲಿದೆ.ವಿದ್ಯಾರ್ಥಿಗಳಿಗೆ ಪ್ರಯತ್ನದಲ್ಲಿ ಯಶಸ್ಸಿದೆ.
ಸುಬ್ರಹ್ಮಣ್ಯ ಪ್ರಾರ್ಥನೆ ಉತ್ತಮ
#####
ಮಿಥುನ
ಆರೋಗ್ಯದಲ್ಲಿ ಎಚ್ಚರ ಅವಶ್ಯಕ ನೀರು,ವಾಹನದಿಂದ ಅಪಾಯವಾಗುವ ಸಾಧ್ಯತೆ ಎಚ್ಚರಿಕೆ ಅವಶ್ಯಕ.ಹಣಕಾಸಿನ ವ್ಯವಹಾರದಲ್ಲಿ ತೊಂದರೆಯಾಗಲಿದೆ.ಆತ್ಮೀಯರೆನಿಸಿಕೊಂಡವರು ಮೋಸ ಮಾಡಲಿದ್ದಾರೆ.ವ್ಯಾಪಾರಸ್ಥರಿಗೆ ನಷ್ಟದ ವಾರ.ವಿದ್ಯಾರ್ಥಿಗಳಿಗೆ ಉತ್ತಮ ವಾರ
ಮೃತ್ಯುಂಜಯನ ಆರಾಧನೆ ಉತ್ತಮ
#####
ಕರ್ಕಾಟಕ
ನಿಮ್ಮ ಅತಿಯಾದ ಸಿಟ್ಟಿನಿಂದ ಸ್ನೇಹಿತರನ್ನು ಕಳೆದುಕೊಳ್ಳಲಿದ್ದಿರಿ.
ಇದರಿಂದ ವ್ಯವಹಾರದಲ್ಲಿ ತೊಂದರೆಯಾಗಲಿದೆ.ಭೂ ವ್ಯವಹಾರದಲ್ಲಿ ಜಯ ದೊರಕಲಿದೆ. ಹೊಸ ವಸ್ತುಗಳ ಖರೀದಿ ಮಾಡಲಿದ್ದಿರಿ.ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಉತ್ತಮವಾಗಿದೆ.ಶುಕ್ರವಾರ ಶುಭ ಸುದ್ದಿ ದೊರಕಲಿದೆ.ಇದು ಬದುಕಿನಲ್ಲಿ ತಿರುವು ಪಡೆಯಲಿದೆ ವಿದ್ಯಾರ್ಥಿಗಳಿಗೆ ಅಪಯಶಸ್ಸು ಆಗಲಿದೆ.
ಮಹಾಗಣಪತಿಯ ಆರಾಧನೆ ವಿದ್ಯಾರ್ಥಿಗಳಿಗೆ ಅನುಕೂಲವಿದೆ.
#####
ಸಿಂಹ
ಹಣ ನಷ್ಟವಾಗುವ ಸಂಭವವಿದೆ.ಇದರಿಂದ ಮನೋವ್ಯಥೆ ಕಾಡಲಿದೆ.ಹಿರಿಯರ ಮಾರ್ಗದರ್ಶನದೊಂದಿಗೆ ಹೊಸ ವ್ಯವಹಾರ ಕೈಗೊಳ್ಳಲು ಸಕಾಲವಾಗಿದೆ.ಬಟ್ಟೆ ವ್ಯಾಪಾರಿಗಳಿಗೆ ಅನಕೂಲವಿದೆ
ಹಾಲು,ಹೈನು ವ್ಯಾಪಾರಿಗಳಿಗೂ ಉತ್ತಮ ಅವಕಾಶ.ಬಂಗಾರ ವ್ಯಾಪಾರಿಗಳಿಗೆ ನಷ್ಟವಾಗಲಿದೆ ಎಚ್ಚರ ಅವಶ್ಯಕತೆ ಇದೆ.
ವಿದ್ಯಾರ್ಥಿಗಳಿಗೆ ಉತ್ತಮ ವಾರ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗಲಿದೆ.
ಲಕ್ಷ್ಮೀನಾರಾಯಣ ಪೂಜೆಯಿಂದ ಅನುಕೂಲ
#####
ಕನ್ಯಾ
ಮಕ್ಕಳಿಂದಾಗಿ ಮನೆಯಲ್ಲಿ ಅಶಾಂತಿ ಉಂಟಾಗಲಿದೆ.ಬಹಳ ವರ್ಷದಿಂದ ನೆನಗುದಿ ಬಿದ್ದಿದ್ದ ವ್ಯವಹಾರ ಬಗೆಹರಿಯಲಿದೆ ಇದರಿಂದ ಆರ್ಥಿಕ ಪರಿಸ್ಥಿತಿಸುಧಾರಣೆಯಾಗಲಿದೆ.ವ್ಯಾಪಾರಗಳಿಗೆ
ಉತ್ತಮವಾರವಾಗಲಿದೆ.ಬರಬೇಕಾದ ಬಾಕಿ ಹಣ ವಸೂಲಾಗಲಿದೆ.ಬಂಗಾರ ಖರೀದಿ ಮಾಡಲಿದ್ದಿರಿ.
ವಿದ್ಯಾರ್ಥಿಗಳಿಗೆ ಯಶಸ್ವಿಯಾದವಾರ ಉನ್ನತ ಶಿಕ್ಷಣಕ್ಕೆ ಅವಕಾಶ ದೊರೆಯಲಿದೆ.
#####
#####
ತುಲಾ
ಹಣಕಾಸಿನ ವ್ಯವಹಾರದಲ್ಲಿ ಘರ್ಷಣೆಯಾಗಲಿದೆ. ಪೊಲೀಸ್ ಠಾಣೆ ಹತ್ತಬೇಕಾದೀತು.ಮಾನಹಾನಿಯಾಗುವ ಸಂಭವವಿದೆ.
ವಾರದ ಮಧ್ಯದಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣ ನಿಮ್ಮಂತೆ ಆಗಲಿದೆ ಮನೆಗೆ ಸಂಬಂಧಿಕರ ಆಗಮನದಿಂದ ಸಂತೋಷ ತುಂಬಲಿದೆ.ಖರ್ಚು ಹೆಚ್ಚಾಗಲಿದೆ.
ವ್ಯಾಪಾರಿಗಳಿಗೆ ಸಾಧಾರಣ ವಾರ ಕಾಳು-ಬೇಳೆ ವ್ಯಾಪಾರಿಗಳಿಗೆ ಉತ್ತಮವಾರ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಗಲಿದೆ.
ವರಾಹಮೂರ್ತಿ ಪೂಜೆ ಮಾಡುವುದು ಉತ್ತಮ
#####
ವೃಶ್ಚಿಕ
ಹಣಕಾಸಿನ ವ್ಯವಹಾರದಲ್ಲಿ ಉತ್ತಮವಾಗಲಿದೆ.ಉದ್ಯೋಗದಲ್ಲಿದ್ದ ಬಹಳ ದಿನದ ಸಮಸ್ಯೆ ಬಗೆಹರಿಯಲಿದೆ ಮೇಲಾಧಿಕಾರಿಗಳ ಮೆಚ್ಚುಗೆಯಿಂದ ಉದ್ಯೋಗದಲ್ಲಿ ಬಡ್ತಿ ದೊರಕಲಿದೆ.ಆರೋಗ್ಯದಲ್ಲಿ ಏರುಪೇರಾಗಲಿದ್ದು ಹೃದಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ಅಗತ್ಯ.
ವ್ಯಾಪಾರಿಗಳಿಗೆ ಉತ್ತಮವಾರ ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗಲಿದೆ.
#####
ಧನಸ್ಸು
ಹಲವು ಸಮಸ್ಯೆಗಳಿಂದ ಹೊರಬರಲಿದ್ದು ಆರ್ಥಿಕ ಅನಕೂಲವಾಗಲಿದೆ ಹೊಟ್ಟೆ ನೋವು ಬಾಧಿಸಲಿದ್ದು ಆಹಾರ ಸೇವನೆಯಲ್ಲಿ ಎಚ್ಚರ ಅಗತ್ಯ.ಜಮೀನು ಖರೀದಿಯ ಪ್ರಸ್ತಾಪ ಬರಲಿದ್ದು ಎಚ್ಚರಿಕೆ ಅಗತ್ಯ.ಆತ್ಮೀಯರು ಎನಿಸಿಕೊಂಡವರಿಂದ ಮೋಸ ಹೋಗುವ ಸಾಧ್ಯತೆಇದೆ. ವ್ಯಾಪಾರಿಗಳಿಗೆ ಉತ್ತಮವಾರ ಎಣ್ಣೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ.
ವಿದ್ಯಾರ್ಥಿಗಳಿಗೆ ಉತ್ತಮವಾರವಾಗಿದೆ.
ರುದ್ರಪಾರಾಯಣ ಮಾಡಿಸುವುದು ಉತ್ತಮ.
#####
ಮಕರ
ಮಾನಸಿಕ ಕಿರಿಕಿರಿಯಿಂದ ಜೀವನದಲ್ಲಿ ಬೇಸರ ಮೂಡಲಿದೆ.ಹಣಕಾಸಿನ ವ್ಯವಹಾರ ಉತ್ತಮವಾಗಿದೆ.ಆರೋಗ್ಯದಲ್ಲಿ ಏರುಪೇರಾಗಲಿದ್ದು ಶ್ವಾಸಕೋಶದ ಸಮಸ್ಯೆಯಿಂದ ಬಳಲಲಿದ್ದಿರಿ.ಜಮೀನಿಗೆ ಸಂಬಂಧಿಸಿದಂತೆ ಸಮಸ್ಯೆಯೊಂದು ಬಗೆಹರಿಯಲಿದೆ.
ವ್ಯಾಪಾರಿಗಳಿಗೆ ಉತ್ತಮವಾರವಾಗಲಿದ್ದು ಹೂವು,ಹಣ್ಣು,ತರಕಾರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ.ವಿದ್ಯಾರ್ಥಿಗಳಿಗೆ ಉತ್ತಮವಾರವಾಗಲಿದೆ ಉನ್ನತ ಶಿಕ್ಷಣದ ಅವಕಾಶವಿದೆ.
#####
ಕುಂಭ
ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಶುಭ ಸುದ್ದಿಯಿಂದ ಮನಸ್ಸು ಉಲ್ಲಾಸವಾಗಿರುತ್ತದೆ ಆರೋಗ್ಯದಲ್ಲಿ ಸಮಸ್ಯೆ ಇದ್ದು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹೊಸ ವ್ಯವಹಾರ ಮಾಡಲಿದ್ದು ಜಯಸಾಧಿಸಲಿದ್ದಿರಿ ವಾಹನ ಓಡಾಟದಲ್ಲಿ ಎಚ್ಚರಿಕೆ ಅಗತ್ಯ.ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರಕಲಿದ್ದು ಭತ್ತ,ತೆಂಗಿನಕಾಯಿ,ಅಡಿಕೆ ವ್ಯಾಪಾರಿಗಳಿಗೆ ಅನಕೂಲವಾಗಲಿದೆ.
ವಿದ್ಯಾರ್ಥಿಗಳಿಗೆ ಸಾಧಾರಣ ಫಲ ದೊರಕಲಿದ್ದು ನಿರೀಕ್ಷಿತ ಫಲ ದೊರಕುವುದಿಲ್ಲ.
ಮಹಾಗಣಪತಿ ಆರಾಧನೆ ಉತ್ತಮ
#####
ಮೀನ
ದೂರದ ಊರಿಗೆ ಪ್ರಯಾಣ ಮಾಡಲಿದ್ದಿರಿ ವಾಹನದಲ್ಲಿ ಎಚ್ಚರ ಅವಶ್ಯಕ ಆಹಾರ ಸೇವನೆಯಲ್ಲಿಯೂ ಎಚ್ಚರವಹಿಸಬೇಕು. ನ್ಯಾಯಾಲಯದಿಂದ ಶುಭ ಸುದ್ದಿ ದೊರಕಲಿದೆ.ಬಂಧುಗಳ ಸಹಕಾರದಿಂದ ಜಮೀನು ಖರೀದಿ ಮಾಡಲಿದ್ದಿರಿ ಹೊಸಬಟ್ಟೆಯು ಬರಲಿದೆ.ವಾರದ ಅಂತ್ಯದಲ್ಲಿ ಹೊಟ್ಟೆ ನೋವು ಬಾಧಿಸಲಿದೆ
ವ್ಯಾಪಾರಿಗಳಿಗೆ ಉತ್ತಮವಾರ ಹತ್ತಿ,ತರಕಾರಿ,ಬೆಣ್ಣೆ ವ್ಯಾಪಾರಿಗಳಿಗೆ ಹೆಚ್ಚು ಲಾಭ ದೊರಕಲಿದೆ.ವಿದ್ಯಾರ್ಥಿಗಳಿಗೆ ಉತ್ತಮವಾರ
ನವಗ್ರಹ ಪೂಜೆ ಮಾಡುವುದು ಉತ್ತಮ
#####
#####