ವಾರದ ಭವಿಷ್ಯ 26–1–2020ರಿಂದ 1–2–2020ರವರೆಗೆ

“ಓಂ ನಮ:ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೆ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋನಮಃ”

ಇಂದು ನಾವು ಧಾವಂತದ ಯುಗದಲ್ಲಿದ್ದೇವೆ. ಎಲ್ಲವೂ ತುರ್ತಾಗಿ ನಮಗೆ ಬೇಕು. ಬೆಳಿಗ್ಗೆ ಎದ್ದಾಗಿನಿಂದ ಸಂಜೆಯವರೆಗೆ ನಾವು ಗಡಿಬಿಡಿಯಲ್ಲೆ ಇರುತ್ತೇವೆ. ನಮಗೆ  ಉಣ್ಣಲು, ಮಲಗಲು ಸಮಯ ನಿಗದಿ ಪಡಿಸಿಕೊಳ್ಳುತ್ತಿಲ್ಲ. ಇದರಿಂದ ಬಿ.ಪಿ, ಶುಗರ್, ಕೊಲೆಸ್ಟ್ರಾಲ್ ನಂತಹ ಶ್ರೀಮಂತರಿಗೆ ಬರುವ ಖಾಯಿಲೆ ಜನಸಾಮಾನ್ಯರಿಗೂ ಬರಲು ಪ್ರಾರಂಭಿಸಿದೆ. ಇಂತಹ ಒತ್ತಡವನ್ನು ನಿವಾರಿಸಿಕೊಳ್ಳಲು ಖಾಯಿಲೆಯಿಂದ ದೂರವಿರಲು ನಮ್ಮ ದಿನನಿತ್ಯದ ಜೀವನ ಶೈಲಿಗೆ ಒಂದು ಶಿಸ್ತನ್ನು ಅಳವಡಿಸಿಕೊಳ್ಳಬೇಕು.

ಅಯ್ಯೋ ಬಿಡಿ ಸಾರ್ ಇವೆಲ್ಲ ಆಗುವ, ಹೋಗುವ ಕೆಲಸವಲ್ಲ ಎಂದು ಮೂಗು ಮುರಿಯುಂತಿಲ್ಲ. ನಮ್ಮ ಊಟ, ತಿಂಡಿ, ಮಲಗುವುದು ಇವೆಲ್ಲವೂ ನಿಗದಿತ ಸಮಯದಲ್ಲಿ ನಡೆಯಬೇಕು. ಹೀಗೆ ಮಾಡುವುದರಿಂದ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ, ಸಂತೃಪ್ತ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಒಂದು ಗುರಿ ಇರುತ್ತದೆ. ಮಗ/ಮಗಳನ್ನು ಓದಿಸಬೇಕು, ಸುಂದರ ಮನೆ ಕಟ್ಟಬೇಕು, ಆಸ್ತಿ ಖರೀದಿಸಬೇಕು, ಹೀಗೆ ಜನಸಾಮಾನ್ಯರ ಸಣ್ಣ ಗುರಿಯ ಜೊತೆಗೆ ಇನ್ನೂ ಕೆಲವರು ಐಎಎಸ್ ಮಾಡಬೇಕು, ಡಾಕ್ಟರೇಟ್ ಪಡೆಯಬೇಕು, ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು, ರಾಜಕೀಯದಲ್ಲಿ ಬೆಳೆಯುಬೇಕು, ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕು. ಹೀಗೆ ಸಣ್ಣ-ದೊಡ್ಡ ಗುರಿಗಳು ಇರುತ್ತವೆ. ಇಂತಹ ಗುರಿಗಳನ್ನು ಈಡೇರಿಸಿಕೊಳ್ಳಲು ಒಂದು ಶಿಸ್ತು ಬೇಕು.

ಹಾಗಾದರೆ ಯಾವ ರೀತಿಯ ಶಿಸ್ತನ್ನು ನಾವು ರೂಢಿಸಿಕೊಳ್ಳಬೇಕು? ಅನ್ನೋದನ್ನ ಮುಂದಿನ ರವಿವಾರ ನೋಡೋಣ.

***************************************

ಈ ವಾರ ನಮ್ಮ ಗ್ರಹಗತಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಮುಖ್ಯವಾಗಿ ಶನಿಗ್ರಹದ ಚಲನೆಯಾಗಿದೆ. ಕಳೆದ ಏಳೂವರೆ ವರ್ಷದಿಂದ ಸಾಕಷ್ಟು ಸೋಲುಗಳನ್ನು ಕಂಡಿದ್ದ ವೃಶ್ಚಿಕ ರಾಶಿಯವರು ಸಾಡೇಸಾತ್ ಶನಿಯಿಂದ ಬಿಡುಗಡೆಗೊಂಡಿದ್ದಾರೆ. ಇದೇ ಸಮಯದಲ್ಲಿ ವೃಷಭ ರಾಶಿಯವರು ಅಷ್ಟಮ ಶನಿಯಿಂದಲೂ, ಸಿಂಹ ರಾಶಿಯವರು ಪಂಚಮ ಶನಿಯಿಂದಲೂ ಬಿಡುಗಡೆಗೊಂಡಿದ್ದಾರೆ. ಆದರೆ ಕುಂಭ ರಾಶಿಯವರಿಗೆ ಸಾಡೇಸಾತ್ ಶನಿ, ಮಿಥುನ ರಾಶಿಯವರಿಗೆ ಅಷ್ಟಮ ಶನಿ, ಕನ್ಯಾ ರಾಶಿಯವರಿಗೆ ಪಂಚಮ ಶನಿ ಪ್ರಾರಂಭವಾಗಿದೆ.

ಮೇಷ: ಧನಲಾಭದ ಜೊತೆಗೆ ಸುಖ ಸಂತೋಷಗಳು ಸಿಗುವ ವಾರವಾಗಿದೆ. ಮುಟ್ಟಿದ್ದೆಲ್ಲ ಚಿನ್ನವಾಗುವ ವಾರವಾಗಿದ್ದರೂ ವಾರಾಂತ್ಯದಲ್ಲಿ ಒಂದಿಷ್ಟು ಹಿನ್ನಡೆಯಾಗುವ ಸಾಧ್ಯತೆ ಇದೆ. ಮಂಗಳವಾರ ಗಣಪತಿ ಆರಾಧನೆ ಮಾಡಿದರೆ ಒಳ್ಳೆಯದು.

ವೃಷಭ: ಈ ವಾರ ಹೆಚ್ಚು ಮಾತನಾಡದಿರುವುದು ಒಳ್ಳೆಯದು, ಮಾತಿನಿಂದಾಗಿ ಸ್ನೇಹಿತರಲ್ಲಿ ಕುಟುಂಬದಲ್ಲಿ ಕಲಹಗಳು ಆಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಅಂತಹ ಸಮಸ್ಯೆ ಇಲ್ಲ. ವಾರಾಂತ್ಯದಲ್ಲಿ ಕೆಲವು ಬೆಳವಣಿಗೆಗಳು ನಿಮ್ಮ ಔನ್ನತ್ಯಕ್ಕೆ ಕಾರಣವಾಗುತ್ತದೆ.

ಮಿಥುನ: ಅಷ್ಟಮ ಶನಿಯ ಪ್ರವೇಶದಿಂದ ಉದ್ವಿಗ್ನತೆ ಕಾಡಲಿದೆ. ವಾಹನ, ಬೆಂಕಿ, ನೀರಿನಿಂದ ಅಪಾಯವಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಇರುವುದಿಲ್ಲ. ಶನಿವಾರ ಕಪ್ಪು ಎಳ್ಳನ್ನು ಶನಿದೇವರಿಗೆ ಸಮರ್ಪಿಸುವುದು.

ಕರ್ಕಾಟಕ: ದಂಪತಿಗಳ ನಡುವೆ ಪ್ರೇಮಿಗಳ ನಡುವೆ ಕಲಹವಾಗುತ್ತದೆ. ದೂರ ಪ್ರಯಾಣದ ಅವಕಾಶ ಬಂದರೆ ನಿರಾಕರಿಸಿದರೆ ಒಳ್ಳೆಯದು. ಮಾನಸಿಕ ದುಗುಡಗಳ ಕಾರಣ ಸ್ತ್ರೀ ಸುಖ, ಧನ ಸುಖವಿದ್ದರೂ ಅನುಭವಿಸಲಾರಿರಿ.

ಸಿಂಹ: ಸಾಮಾಜಿಕವಾಗಿ ಸ್ಥಾನ, ಮಾನಗಳಿಸುವುದರ ಜೊತೆಗೆ ಬಹಳ ಕಾಲದಿಂದ ಇತ್ಯರ್ಥವಾಗದ ಸಮಸ್ಯೆ ಬಗೆಹರಿಯಲಿದೆ. ನ್ಯಾಯಾಲಯದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ವಕೀಲರಿಗೆ ಒತ್ತಡ ಹೇರುವುದು ಓಳ್ಳೆಯದು. ಮಂಗಳವಾರ ದುರ್ಗಾದೇವಿಗೆ ತುಪ್ಪದ ದೀಪ ಹಚ್ಚುವುದು ಒಳ್ಳೆಯದು.

ಕನ್ಯಾ: ವಾರದ ಪ್ರಾರಂಭದಿಂದಲೂ ಮಾನಸಿಕ ಕಿರಿಕಿರಿ ಇರುತ್ತದೆ. ಏಕಾಗ್ರತೆಯ ಕೊರತೆಯಿಂದ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಹಣಕಾಸಿನ ಶಿಸ್ತು ರೂಢಿಸಿಕೊಳ್ಳದಿದ್ದರೆ ಮುಂದೆ ಕಷ್ಟಕ್ಕೆ ಒಳಗಾಗುವಿರಿ. ಗುರುವಾರ ಗುರುದರ್ಶನ ಮಾಡುವುದು ಒಳ್ಳೆಯದು.

ತುಲಾ: ದುಷ್ಟರ ಸ್ನೇಹದಿಂದ ಅಪಾಯವಾಗುವ ಸಾಧ್ಯತೆ ಇದೆ. ಹಣಕಾಸು ಹರಿದು ಬಂದರೂ ಮಾನ ಹೋಗಲಿದೆ. ಮನೆಯಲ್ಲಿ ಅಶಾಂತಿ ಮೂಡಿ ಗಂಡ-ಹೆಂಡಿರ ಜಗಳ ಹೆಚ್ಚಾಗಲಿದೆ. ದುರ್ಗಾದೇವಿ ಆರಾಧನೆ ಮಾಡುವುದು ಒಳ್ಳೆಯದು.

ವೃಶ್ಚಿಕ: ಕೆಲಸಗಳೆಲ್ಲವೂ ಸುಲಭವಾಗಿ ನಡೆಯುವ ವಾರವಾಗಿದ್ದು ಅನಿರೀಕ್ಷಿತವಾಗಿ ಹಣ ಬರಲಿದೆ. ನ್ಯಾಯಾಲಯದ ಮೊಕದ್ದಮೆಗಳಲ್ಲಿ ನಿಮಗೆ ಜಯವಾಗಲಿದೆ.

ಧನಸ್ಸು: ಮಾನಸಿಕವಾಗಿ ಗಟ್ಟಿಯಾಗುತ್ತಿದ್ದರೂ ಗೊಂದಲ ಮುಂದುವರಿಯಲಿದೆ. ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣವಿದ್ದು ಹೊಟ್ಟೆಯ ನೋವು ಬಾಧಿಸಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗಲಿದ್ದು ಬರಬೇಕಾದ ಬಾಕಿ ಹಣಬರಲಿದೆ.

ಮಕರ: ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಯುವುದು ಉತ್ತಮ. ಹಣಕಾಸಿನ ಪರಿಸ್ಥಿತಿ ಕಳವಳಕಾರಿಯಾಗಿರುತ್ತದೆ. ಮಾಡಿದ ಕೆಲಸಗಳು ವ್ಯರ್ಥವಾಗುವುದರ ಜೊತೆಗೆ ವೃಥಾರೋಪಗಳು ಬರಲಿವೆ. ದಶರಥ ಕೃತ ಶನಿಸ್ತೋತ್ರ ಪಠಿಸುವುದು ಒಳ್ಳೆಯದು.

ಕುಂಭ: ಕೆಲಸದಲ್ಲಿ ಯಶಸ್ವಿಯಾಗುವುದಾದರೂ ಮಾನಸಿಕ ಖಿನ್ನತೆ ಕಾಡಲಿದೆ. ಹೊಟ್ಟೆಗೆ ಸಂಭಂಧಿಸಿದ ಕಾಯಿಲೆಯಿಂದ ಬಳಲಿದ್ದಿರಿ. ವಸ್ತುಗಳ ಖರೀದಿ ಮಾಡಲಿದ್ದು ಮೋಸ ಹೋಗುವ ಸಾಧ್ಯತೆ ಇದೆ. ಶನಿದೇವಾಲಯದಲ್ಲಿ ಪ್ರದಕ್ಷಿಣೆ ನಮಸ್ಕಾರ ಮಾಡುವುದು ಒಳ್ಳೆಯದು.

ಮೀನ: ಪರೋಪಕಾರದಿಂದ ಸಾಮಾಜಿಕ ಸ್ಥಾನ-ಮಾನ ಗಳಿಸುವಿರಿ. ಹೊಸ ವ್ಯವಹಾರ ಮಾಡಲು ಆಸ್ತಿ ಖರೀದಿಸಲು ಪ್ತಶಸ್ತ ಕಾಲ. ಶುಕ್ರವಾರ ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡುವುದು ಒಳ್ಳೆಯದು

**************ಶುಭಂ****************
ಸಂಪರ್ಕಿಸಿ : 9449454044

About the author

Adyot

Leave a Comment