ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು,ರವಿವಾರ
ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಪುಣ್ಯಸ್ಮರಣೆ ಪ್ರಯುಕ್ತ
ವಿಧಾಸೌಧದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಿದರು.
*****
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಶನಿವಾರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಮುಖಂಡರು,ಕಾರ್ಯಕರ್ತರು ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾದರು
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಅನಂತಕುಮಾರ ಹೆಗಡೆ ಮಾತನಾಡಿ,
ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತ ಬೆಳೆಯುತ್ತಿದ್ದು ದೇಶದಲ್ಲಾಗುವ ಬದಲಾವಣೆಯನ್ನು ಈಡೀ ಜಗತ್ತು ನಮ್ಮ ಕಡೆ ತಿರುಗಿ ನೋಡುವಂತೆ ಮಾಡುತ್ತಿದ್ದು ಆದರೆ ಜಿಡಿಪಿ ಎಂದರೆ ಏನು ಎಂದು ತಿಳಿಯದ ರಾಹುಲ ಗಾಂಧಿ ಹಾಗೂ ಕಾಂಗ್ರೆಸ್‍ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಢೋಂಗಿ ಜತ್ಯಾತೀತತೆಯನ್ನು ಹೇಳಿಕೊಳ್ಳುತ್ತ,ಭಾಷಣಕ್ಕೆ ಸೀಮಿತವಾಗಿರುವ ಕಾಂಗ್ರೆಸ್‍ಗೆ ಹೈದರಾಬಾದ್ ಚುನಾವಣೆ ಅದರ ಸೀಮಿತತೆಯನ್ನು ತಿಳಿಸಿದೆ ರಾಷ್ಟ್ರೀಯತೆ,ನಮ್ಮ ಸಂಸ್ಕೃತಿಯ ಉಳಿವೆಗೆ ಬಿಜೆಪಿ ಆಡಳಿತಕ್ಕೆ ಬರಬೇಕು ಎನ್ನುವುದನ್ನು ದೇಶದ ಜನರಿಗೆ ತಿಳಿಯುತ್ತಿದೆ.ದೇಶದ್ರೋಹಿ ದುರ್ಗಂಧದಿಂದ ಮುಕ್ತರಾಗಲು ಹೈದರಾಬಾದ್‍ನ ಜನರು ಬಿಜೆಪಿಗೆ ಮತಹಾಕಿದ್ದಾರೆ. ಮುಂಬರುವ ಪಶ್ಚಿಮಬಂಗಾಳದ ಚುನಾವಣೆಯಲ್ಲೂ ಬಿಜೆಪಿ ಗೆಲವು ಸಾಧಿಸುವುದಲ್ಲದೆ ಹೊಸಶಕೆಯನ್ನು ಬರೆಯಲಿದೆ. ರಸ್ತೆ ಮಾಡಿಸುವುದು,ಬಾವಿ ತೋಡಿಸುವುದು ಅಭಿವೃದ್ಧಿ ಮಾಡಿದಂತಲ್ಲ ಇವೆಲ್ಲ ಸರಕಾರದ ಕೆಲಸ ರಾಷ್ಟ್ರವನ್ನು ಕಟ್ಟುವುದು ರಾಷ್ಟ್ರೀಯತೆಯನ್ನು ಬಿತ್ತುವುದು ಇವು ನಿಜವಾದ ಅಭಿವೃದ್ಧಿ ಮಾಡಿದಂತೆ ರಾಷ್ಟ್ರೀಯವಿಚಾರಧಾರೆ ಇಟ್ಟುಕೊಂಡಿರುವ ಬಿಜೆಪಿ ಇದನ್ನು ಮಾಡುತ್ತಿದ್ದು ಜನರಿಗೆ ಇದರ ಅರಿವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಚೀವ ಶಿವರಾಮ ಹೆಬ್ಬಾರ್ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಪರ ಆಡಳಿತ ನೀಡುತ್ತಿದ್ದು ಇದರಿಂದ ಗ್ರಾಪಂ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ. ಪಕ್ಷದ ಮೂಲಬೇರು ಗಟ್ಟಿಗೊಳಿಸಲು ಗ್ರಾಪಂ ಗೆಲ್ಲವುದು ಅವಶ್ಯಕ ಈಗಾಗಲೇ ರಾಜ್ಯಾದ್ಯಂತ ನಮ್ಮ ಪಕ್ಷದ ಸಚೀವರು ಮುಖಂಡರು ಗ್ರಾಪಂ ಚುನಾವಣೆಯ ತಯಾರಿಗಾಗಿ ಓಡಾಡಿದ್ದಾರೆ. ಇಂದು ಪಕ್ಷಕ್ಕೆ ಸೇರ್ಪಡೆಯಾಗುವವರು ಯಾವುದೇ ಶಂಕೆ ಪಡುವ ಅವಶ್ಯಕತೆಯಿಲ್ಲ ಪಕ್ಷದ ಕಾರ್ಯಕರ್ತರಾಗಿ ಅವರನ್ನು ನೋಡಿಕೊಳ್ಳಲಾಗುವುದು ಯಾವುದೇ ಸಂಘರ್ಷ ಅಪನಂಬಿಕೆ ಇಲ್ಲದೆ ಗ್ರಾಪಂ ಚುನಾವಣೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಬಿಜೆಪಿ ಕಾರ್ಯಾಕಾರಣಿ ಸದಸ್ಯ ಕೆ.ಜಿ.ನಾಯ್ಕ, ನಮ್ಮ ಪಕ್ಷದ ಸಿದ್ದಾಂತ,ತತ್ವ ಒಪ್ಪಿಕೊಂಡು ಬಂದಿರುವ ಎಲ್ಲರಿಗೂ ಪಕ್ಷದಲ್ಲಿ ಸಮಾನ ಅವಕಾಶ ನೀಡಲಾಗುವುದು ಕಳೆದ ಬಾರಿ ತಾಲುಕಿನ 23 ಗ್ರಾಪಂನಲ್ಲಿ 12 ಗ್ರಾಪಮನಲ್ಲಿ ನಾವು ಸ್ಪಷ್ಟಬಹುಮತ ಪಡೆದಿದ್ದೆವು 2ರಲ್ಲಿ ತಾಂತ್ರಿಕವಾಗಿ ಅಧಿಕಾರ ಪಡೆದಿದ್ದವು ಆದರೆ ಈಗ ನಮ್ಮ ಪಕ್ಷಕ್ಕೆ ಆಗಮಿಸಿರುವ ಮುಖಂಡರ ಬಲದಿಂದ ಈ ಬಾರಿ 23 ಗ್ರಾಪಂನಲ್ಲೂ ಅಧಿಕಾರ ಪಡೆಯಲಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ,ಪ್ರದಾನ ಕಾರ್ಯದರ್ಶಿಚಂದ್ರ ಎಸಳೆ,ಎನ್.ಎಸ್.ಹೆಗಡೆ,ಪ್ರಭಾರೆ ಎಂ.ಜಿ.ಭಟ್ಟ,ಕೆಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಮೋಹನದಾಸ ನಾಯಕ ಉಪಸ್ಥಿತರಿದ್ದರು.
ಮಂಡಳ ಬಿಜೆಪಿ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಸ್ವಾಗತಿಸಿದರು.ಎಸ್.ಕೆ.ಮೇಸ್ತ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಈಶ್ವರ ನಾಯ್ಕ ಮನಮನೆ,ನಿಕಟ ಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಐ.ನಾಯ್ಕ ಕೆಳಗಿನಸಸಿ,ಟಿ.ಎಂ.ಎಸ್ ನಿರ್ದೇಶಕ ಎಂ.ಎನ್.ಹೆಗಡೆ ತಲೇಕೆರೆಪ್ಯಾಡಿ ಸೊಸೈಟಿ ಅಧ್ಯಕ್ಷ ರಮಾನಂದ ಹೆಗಡೆ,ಜೆಡಿಎಸ್ ಹಿಂದುಳಿದವರ್ಗಗಳ ಉಪಾಧ್ಯಕ್ಷ ತಿಮ್ಮಪ್ಪ ಎಂ.ಕೆ. ಸೇರಿದಂತೆ ಸುಮಾರು 168 ಜನ ವಿವಿಧ ಪಕ್ಷಕ್ಕೆ ಸೇರಿದ ಮುಖಂಡರು,ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.
*****