ಆದ್ಯೋತ್ ಸುದ್ದಿನಿಧಿ
ಅರಣ್ಯ ಇಲಾಖೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ
ಅರಣ್ಯ ಪ್ರದೇಶದ ಶಾಸಕರುಗಳ ಸಭೆಯನ್ನು ವಿಧಾನಸೌಧದಲ್ಲಿ ಕರೆಯಲಾಗಿತ್ತು.
ಸಭೆಯಲ್ಲಿ ಭಾಗವಹಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಉತ್ತರ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಭಾಗಗಳಲ್ಲಿನ ಅರಣ್ಯ ಸಮಸ್ಯೆಗಳು ಮತ್ತು ಕಾಡುಪ್ರಾಣಿಗಳಿಂದ ರೈತರು-ಜನರು ಅನುಭವಿಸುತ್ತಿರುವ ತೊಂದರೆಗಳು, ಅಭಿವೃದ್ಧಿ ವಿಷಯಗಳಲ್ಲಿ ಇಲಾಖೆಯ ಅಧಿಕಾರಿಗಳಿಂದ ಆಗುವ ಕಿರುಕುಳ, ಅತಿಕ್ರಮಣದಾರರಿಗೆ ಅಧಿಕಾರಿಗಳಿಂದ ಆಗುವ ತೊಂದರೆಗಳ ಕುರಿತು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರ ಗಮನಕ್ಕೆ ತಂದು ಸಮಸ್ಯೆಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಿ ರೈತರಿಗೆ-ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಕೋರಿದರು.
* ಕಾಗೇರಿಯವರು ಪ್ರಸ್ತಾಪಿಸಿದ ವಿಷಯಗಳು-
ಜಿಪಿಎಸ್ ಆದ ಸ್ಥಳದಲ್ಲಿ ಅತಿಕ್ರಮಣದಾರರು ಮನೆ,ಶೌಚಾಲಯ,ಕೊಟ್ಟಿಗೆ ಕಟ್ಟಿಕೊಳ್ಳಬಹುದು,ಕೃಷಿ ಮಾಡಬಹುದು.
* ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯಾಗದಂತೆ ಸಹಕರಿಸಬೇಕು
* ಸರಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಸ್ಥಳವನ್ನು ತಕ್ಷಣ ಬಿಡುಗಡೆಗೊಳಿಸಲು ಕೇಂದ್ರ ಸರಕಾರದ ಜೊತೆಗೆ ವ್ಯವಹರಿಸಬೇಕು.
* ಗ್ರಾಮ ಅರಣ್ಯ ಸಮಿತಿಗಳಿಗೆ ಡೀಡ್ ಮತ್ತು ಫಾಲನ್ ಕ್ಷೇತ್ರಗಳಿಂದ ಕಾಮಗಾರಿ ಮಾಡಿದ ಮತ್ತಿ,ಹೊನ್ನೆ,ಸಾಗವಾನಿ,ಕಿಂದಳ,ಬೀಟೆ,ನಂದಿ,ಮುಂತಾದ ಮರಮಟ್ಟುಗಳಲ್ಲೂ ಆದಾಯದಲ್ಲಿ ಲಾಭಾಂಶ ನೀಡಲು ಸರಕಾರದ ಮಟ್ಟದಲ್ಲಿ ನಿರ್ಧಾರವಾಗಿದ್ದು ಇದಕ್ಕೆ ಪೂರಕ ಆದೇಶ ನೀಡಬೇಕು.
* ಅರಣ್ಯ ಹಕ್ಕು ಕಾಯ್ದೆ ಯಲ್ಲಿ ಪರಿಗಣಿಸಬೇಕಾದ ಪುರಾವೆಗಳಲ್ಲಿ ಸರಳತೆ,ಸ್ಪಷ್ಟತೆ,ನಿರ್ಧಿಷ್ಟತೆ ಬೇಕು
*ಆನೆ ಹಾವಳಿ,ಕಾಡುಕೋಣ ಹಾವಳಿ ತಡೆಯಲು ಕಂದಕ ನಿರ್ಮಿಸಿ ರೈತರ ಬೆಳೆ ಹಾಗೂ ಜೀವ ಉಳಿಸಬೇಕು.
* ರೈತರಿಗೆ ನೀಡಲಾಗುತ್ತಿರುವ ಸೋಲಾರ್- ಪವರ್ ಗೆ ನೀಡಲಾಗುತ್ತಿರುವ ಶೇ50-50 ಅನುದಾನವನ್ನು ಶೇ.100ಕ್ಕೆ ಏರಿಸಬೇಕು.
* ಬೆಳೆ ಹಾನಿ ಪರಿಹಾರವನ್ನು ಸೂಕ್ತವಾಗಿ ಮತ್ತು ಶೀಘ್ರವಾಗಿ ನೀಡಬೇಕು.