ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ—ಬಸವರಾಜ ಗುರಿಕಾರ

ಆದ್ಯೋತ್ ಸುದ್ದಿನಿಧಿ:
ನೌಕರರ, ಶಿಕ್ಷಕರ ಅಭುದ್ಯಯಕ್ಕಾಗಿ ಸಂಘಟನೆ ರಚಿಸಿಕೊಂಡು ಈ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸಿದ ಅನುಭವ ತಮಗಿದ್ದು ಇದೇ ಮಾದರಿಯಲ್ಲಿ ಪದವೀಧರರ ಸಮಸ್ಯೆಗಳಿಗೂ ದ್ವನಿಯಾಗುತ್ತೇನೆಂದು ಪಶ್ಚಿಮ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ ಗುರಿಕಾರ ಭರವಸೆ ನೀಡಿದರು.

ಅವರು ಬುಧವಾರ ಕ್ಷೇತ್ರದ ವಿವಿಧೆಡೆ ಪ್ರಚಾರ್ಯ ಕಾರ್ಯದಲ್ಲಿ
ತಮ್ಮನ್ನು ಭೇಟಿಯಾದ ಪದವೀಧರರು ತಮ್ಮ ಸಮಸ್ಯೆಗಳನ್ನು ತಿಳಿಸಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಗುರಿಕಾರ, ಶಿಕ್ಷಕರ ಸಂಘಟನೆಯಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಸಂಘಟನೆ, ಹೋರಾಟ ಮೂಲಕವೇ ಶಿಕ್ಷಕರ ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಪದವೀಧರರ ತೊಂದರೆಗಳಿಗೂ ಸ್ಪಂದನೆ ಮಾಡುವ ಬದ್ಧತೆ ತಮ್ಮಲ್ಲಿದೆ ಎಂದರು.

ಸರ್ಕಾರ ನೇಮಿಸಿಕೊಳ್ಳುವ ಎಲ್ಲ ತಾತ್ಕಾಲಿಕ ನೇಮಕಾತಿಯಲ್ಲಿ ನಿವೃತ್ತರೇ ಇದ್ದಾರೆ. ಈ ಸ್ಥಳಗಳಲ್ಲಿ ನಿರುದ್ಯೋಗಿ ಪದವೀಧರರನ್ನು ನೇಮಿಸುವುದು, ನಿರುದ್ಯೋಗಿ ಪದವೀಧರರಿಗೆ ಸುಸ್ಥಿರ ಕೃಷಿಗೆ ತೊಡಗಿಕೊಳ್ಳಲು ಸುಸ್ಥಿರ ನೆರವು ಯೋಜನೆ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕುವುದು, ಪದವೀಧರ ಸಹಕಾರಿ ಸಂಘಗಳ ಸ್ಥಾಪನೆ,ಸ್ತ್ರೀ ಶಕ್ತಿ
ಸಂಘಗಳ ಮಾದರಿಯಲ್ಲಿ ಪದವೀಧರ ಸ್ವಸಹಾಯ, ಸ್ವಉದ್ಯೋಗ ಸಂಘಗಳ ಸ್ಥಾಪನೆ ಹೀಗೆ ಅನೇಕ ಯೋಜನೆಗಳನ್ನು ಇಟ್ಟುಕೊಂಡಿರುವುದು ಹೇಳಿದರು.

ಬುಧವಾರ ಹುಬ್ಬಳ್ಳಿಯ ನೆಹರು ಕಾಲೇಜು, ಕುಂದಗೋಳ ಪ್ರಥಮ ದರ್ಜೆ ಕಾಲೇಜು, ಹರ್ಬಟ್ ಕಾಲೇಜಿನಲ್ಲಿ ಗುರಿಕಾರ ಪ್ರಚಾರ ನಡೆಸಿದರು. ಸಂಶಿಯಲ್ಲಿ ಪದವೀಧರರಿಂದ ಅಹವಾಲು ಸ್ವೀಕರಿಸಿದರು. ಶಿಗ್ಗಾವಿಯ ಎಪಿಎಂಸಿ ಬಳಿ ಸಹ ಪದವೀಧರರ ಸಮಸ್ಯೆಗಳ ಪಟ್ಟಿ ನೀಡಿದರು. ಈ ಸಂದರ್ಭದಲ್ಲಿ ಎನ್.ಎ-. ನದಾ-, ಶಂಕರ ಸಾವೂರ, ರಾಘು ನರಗುಂದ, ನಾಗರಾಜ ಉಣಕಲ್ ಮತ್ತಿತರರು ಇದ್ದರು. ಅಲ್ಲದೇ, ಗುರಿಕಾರ ಅವರ ಪರವಾಗಿ ಧಾರವಾಡ, ಹಾವೇರಿ, ಶಿರಸಿ, ಕಾರವಾರ ಮತ್ತಿತರ ಕಡೆಗಳಲ್ಲಿ ವಿವಿಧ ತಂಡಗಳು ಪ್ರಚಾರ ಮಾಡಿದವು.

——
ಕೊರೋನಾ ಸಂದರ್ಭದಲ್ಲಿ ಬಹುತೇಕ ಪದವೀಧರರು ನೌಕರಿ ಕಳೆದುಕೊಂಡಿದ್ದು ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚಾಗಿದೆ. ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ನೇಮಕಾತಿ ಮೂಲಕ ಪರಿಸ್ಥಿತಿಯನ್ನು ಸರಿದೂಗಿಸಬೇಕಿದೆ. ತಾವು ಆಯ್ಕೆಯಾದರೆ ಪದವೀಧರರ ನೇಮಕಾತಿ ಬಗ್ಗೆಯೇ ಹೆಚ್ಚಿನ ಒತ್ತು ನೀಡುತ್ತೇನೆ.
ಬಸವರಾಜ ಗುರಿಕಾರ,
ಪಶ್ಚಿಮಪದವೀಧರ ಕ್ಷೇತ್ರದ ಅಭ್ಯರ್ಥಿ

About the author

Adyot

Leave a Comment