ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಸುದ್ದಿಗೋಷ್ಠಿ ನಡೆಸಿದರು.
ಕೊವಿಡ್ ಕುರಿತು ಜನರು ಅನಗತ್ಯ ಭಯ ಹಾಗೂ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ತಮ್ಮ ಆರೋಗ್ಯದಲ್ಲಿನ ಏರುಪೇರುಗಳನ್ನು ತಿಳಿದುಕೊಳ್ಳುವ ಸಾಮಾನ್ಯ ಜ್ಞಾನ ಎಲ್ಲರಿಗೂ ಇದೆ ಜ್ವರ,ನೆಗಡಿ,ಕೆಮ್ಮು,ತಲೆನೋವುಗಳಂತಹದ್ದು ಕಂಡು ಬಂದರೆ ಪ್ರಾರಂಭಿಕ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ ಜನರು ತಾವೇ ಸ್ವಯಂ ತಮ್ಮ ಆರೋಗ್ಯದ ಅಧ್ಯಯನ ಮಾಡಿಕೊಂಡು ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಂಡು ಆಡಳಿತಕ್ಕೆ ಸಹಕರಿಸಬೇಕು ಎಂದು ಡಾ.ಹರೀಶಕುಮಾರ ಹೇಳಿದರು
ಕಾರಣ ಸದ್ಯ ಭಟ್ಕಳದಲ್ಲಿ ಬೇರೆ ಕಾರಣಕ್ಕೆ ಮೃತಪಟ್ಟು ಅವರಲ್ಲಿ ಕೋವಿಡ್ ದೃಡಪಟ್ಟಿರುವುದಿದ್ದು ಇದು ಕೊನೆಯ ಹಂತದಲ್ಲಿ ಪತ್ತೆಯಾದಲ್ಲಿ ಅವರಿಗೆ ಅವರ ಕುಟುಂಬದವರಿಗೆ ಸಮಸ್ಯೆಯಾಗುವದರೊಂದಿಗೆ ಸಮುದಾಯ ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ತಾಲೂಕಾಢಳಿತದ ಅಥವಾ ವೈದ್ಯರ ಸಂಪರ್ಕವನ್ನು ಶೀಘ್ರದಲ್ಲಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಗಮನಕ್ಕೆ ಬಾರದೇ ಇರುವುದು ಮುಂದೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಲಿದೆ
ಸಾಮಾನ್ಯವಾಗಿ ಕೋವಿಡ್ ಸೋಂಕಿತರಲ್ಲಿ ರೋಗ. ಲಕ್ಷಣಗಳಿಲ್ಲದಿದ್ದಲ್ಲಿ 7 ದಿನದಲ್ಲಿ ಗುಣಮುಖರಾಗುತ್ತಾರೆ. ಒಂದು ವೇಳೆ ರೋಗ ಲಕ್ಷಣ ಇದ್ದಲ್ಲಿ 10 ದಿನದಲ್ಲಿ ಗುಣಮುಖರಾಗುತ್ತಾರೆ.ಇನ್ನು ಮುಂದೆ ಸೋಂಕಿತರಲ್ಲಿ ಕೆಲವೊಂದು ವಿಂಗಡನೆ ಮಾಡಲಿದ್ದು ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು ಕೋವಿಡ ದೃಢಪಟ್ಟಿದ್ದಲ್ಲಿ ಅಂತಹವರಿಗೆ ಕೋವಿಡ್ ಕೇರ್ ಕೇಂದ್ರದಲ್ಲಿ ಇರಿಸಲಾಗುವುದು. ಆರೋಗ್ಯ ಸ್ಥಿತಿ ಏರುಪೇರು ಇದ್ದವರನ್ನು ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ರೋಗ ಲಕ್ಷಣ ಉಲ್ಬಣಗೊಂಡವರಿಗೆ ಮಾತ್ರ ಕಾರವಾರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಿದ್ದೇವೆ. ಒಂದು ವೇಳೆ ಸೋಂಕಿತರಲ್ಲಿ ಪ್ರತ್ಯೇಕವಾಗಿ ಮನೆಯಲ್ಲಿಯೇ ಐಸೋಲೇಶನ ಇರಲು ಎಲ್ಲಾ ಅನೂಕೂಲಗಳಿದ್ದಲ್ಲಿ, ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಬೇಕಿದ್ದರು ಸಹ ವ್ಯವಸ್ಥೆ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಇನ್ನು ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಯ ಸರ್ವೇ ಆರಂಭವಾಗಲಿದೆ. ಗರ್ಭಿಣಿಯರು, ಮಕ್ಕಳು, ವೃದ್ದರು ಅವರ ಆರೋಗ್ಯದ ಬಗ್ಗೆ ಗಮನ ನಡೆಸಲಿದ್ದೇವೆ.ಇದೆಲ್ಲದಕ್ಕು ಪ್ರತಿ ಮನೆಯವರು ಸಹಕರಿಸಿ ಸರಿಯಾದ ಮಾಹಿತಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮುಖ್ಯವಾಗಿ ಜನರು ತಮ್ಮಲ್ಲಿಯ ತಪ್ಪು ಕಲ್ಪನೆಯನ್ನು ದೂರವಿಡಬೇಕು. ಸಮಾಜದ ಒಳ್ಳೆಯದಕ್ಕೆ ಉಪಯೋಗವಾಗಬೇಕಾದ ಸಾಮಾಜಿಕ ಜಾಲತಾಣವು ಸದ್ಯ ಜನರ ಮನಸ್ಸು ಹಾಳು ಮಾಡುವದರೊಂದಿಗೆ ಭಯ ಹುಟ್ಟಿಸುತ್ತಿದೆ. ಇದು ಮಾಧ್ಯಮಗಳಿಂದ ಸರಿಯಾಗಬೇಕು. ಸುಳ್ಳು ಸುದ್ದಿ ಬೇಗ ಹರಡುತ್ತದೆ ಆದರೆ ಅದಕ್ಕೆ ನಾವು ನೀಡಿದ ಸ್ಪಷ್ಟನೆ ನಿಧಾನಕ್ಕೆ ಜನರಿಗೆ ತಲುಪಲಿದೆ.ಅಗತ್ಯ ತುರ್ತು ಸಂದರ್ಭದಲ್ಲಿ ಕಾರವಾರದ ಜಿಲ್ಲಾ ಕೇಂದ್ರದಲ್ಲಿ 10-14 ವೆಂಟಿಲೇಟರ್ ವ್ಯವಸ್ಥೆ ಇದೆ. ಪ್ರತಿ ಗ್ರಾಮ ಗ್ರಾಮದಲ್ಲಿ ವೆಂಟಿಲೇಟರ ಇಡಲು ಅಸಾಧ್ಯವಾಗಿದ್ದು ಕೋವಿಡ್ ರೋಗ ಲಕ್ಷಣ ಒಂದೇ ಸಮನೆ ಉಲ್ಬಣಗೊಂಡಿದ್ದಲ್ಲಿ ತುರ್ತು ವೆಂಟಿಲೇಟರ್ ವ್ಯವಸ್ಥೆಯನ್ನು ತಾಲೂಕು ಗ್ರಾಮ ಮಟ್ಟದಲ್ಲಿ ಮಾಡಲು ತಯಾರಿದ್ದೇವೆ ಜನರು ಕೋವಿಡ್ ಹೊರತು ಪಡಿಸಿ ಉಳಿದಂತೆ ಸಾಮಾನ್ಯ ಜ್ವರ ಸೇರಿದಂತೆ ಎಲ್ಲಾ ಅನಾರೋಗ್ಯದ ಬಗ್ಗೆ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಿದ್ದಲ್ಲಿ ಗಂಟಲ ದ್ರವ ನೀಡಬೇಕೋ ಅಥವಾ ಚಿಕಿತ್ಸೆ ಅಥವಾ ಔಷಧಿ ನೀಡಬೇಕೆಂಬುದು ಸೂಚಿಸಲಿದ್ದಾರೆ ಜನರಲ್ಲಿ ಪಾಸಿಟಿವ್ ವರದಿಯಿಂದ ಕಂಗಾಲಾಗುತ್ತಿದ್ದು ಮುಂದಿನ ದಿನದಲ್ಲಿ ವಿಶೇಷವಾಗಿ ಒಂದು ದಿನದಲ್ಲಿ ಪರೀಕ್ಷೆಗೊಳಗಾದ ಗಂಟಲ ದ್ರವ ಸ್ಯಾಂಪಲ್ ಮಾಹಿತಿ, ಪಾಸಿಟಿವ್ ಬಂದ ಮಾಹಿತಿ ನೆಗೆಟಿವ್ ಬಂದ ಮಾಹಿತಿ ಎಲ್ಲವನ್ನು ಆಯಾ ತಾಲೂಕಾ ಕೇಂದ್ರಕ್ಕೆ ತಕ್ಷಣಕ್ಕೆ ಮಾಹಿತಿ ಕಳುಹಿಸುವ ಕಾರ್ಯ ಮಾಡಲಿದ್ದು ಇದರಿಂದ ಜನರಿಗು ಅನೂಕೂಲವಾಗಲಿದೆ. ಇನ್ನು ಮುಂದೆ ನೆಗೆಟಿವ್ ವರದಿಯ ಮಾಹಿತಿಯನ್ನೂ ತಿಳಿಸಲಿದ್ದೇವೆ ಎಂದು ಡಾಹರೀಶಕುಮಾರ ಹೇಳಿದರು.