ಹಿಂದುಳಿದವರ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು–ಶ್ರೀ ಸರಸ್ವತಿ ಬ್ರಹ್ಮಾನಂದ ಸ್ವಾಮೀಜಿ

ಆದ್ಯೋತ್ ಸುದ್ದಿನಿಧಿ;
ಉತ್ತರಕನ್ನಡಜಿಲ್ಲೆಯ ಭಟ್ಕಳದಲ್ಲಿ ಸೋಮವಾರ ಹಿಂದುಳಿದವರ್ಗಗಳ ಹಿತರಕ್ಷಣಾ ವೇದಿಕೆಯಿಂದ“ಮೀಸಲು ಯಥಾಸ್ಥಿತಿ ಮುಂದುವರಿಸಲಿ” ಎಂದು ಆಗ್ರಹಿಸಿ ಬೃಹತ ಮೆರವಣಿಗೆ ಹಾಗೂ ಸಮಾವೇಶ ನಡೆಯಿತು.

ಮೆರವಣಿಗೆ ಹಾಗೂ ಸಮಾವೇಶದಲ್ಲಿ ಭಾಗವಹಿಸಿದ್ದ ಉಜಿರೆ ಶ್ರೀರಾಮಕ್ಷೇತ್ರದ ಶ್ರೀಸರಸ್ವತಿ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ,ಸಂವಿಧಾನ ಎಂಬುದು ಭಗವಂತ ಇದ್ದಹಾಗೆ ಸೃಷ್ಟಿ,ಸ್ಥಿತಿ,ಲಯವನ್ನು ಕಾಯ್ದುಕೊಳ್ಳುತ್ತದೆ ಸಂವಿಧಾನದ ಕಲಂ 14,15,16 ಇದೇಆಶಯವನ್ನು ಹೊಂದಿದೆ. ಬಡವರ,ಹಿಂದುಳಿದವರ್ಗದವರ ಹಕ್ಕನ್ನು ಕಾಯ್ದು ಇರಿಸಿದೆ ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರಗಳು,ನಾಯಕರು,ಸ್ವಾಮೀಜಿಗಳು ಅವರವರ ಜನರನ್ನು ಓಲೈಸಲು,ಸಂವಿಧಾನದ ಆಶಯವನ್ನು ಮೀರುತ್ತಿದ್ದಾರೆ ಹಿಂದುಳಿದವರ್ಗದವರಿಗೆ ಅನ್ಯಾಯ ಮಾಡಲು ಹೊರಟರೆ ಸುಪ್ರಿಂಕೋರ್ಟಗೆ ಹೋಗಲೂ ಸಿದ್ದ ಎಂದು ಹೇಳಿದರು.

ಹಿಂದುಳಿದವರ ಹಕ್ಕನ್ನು ಯಾವುದೇ ರೀತಿಯಲ್ಲಿ ಯಾರೂ ಕಸಿದುಕೊಳ್ಳಬಾರದು. ನಮ್ಮ ಅನ್ನದ ಬಟ್ಟಲನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಬಾರದು
ಈ ಸಮಾವೇಶದ ಮೂಲಕ ಸರ್ಕಾರಕ್ಕೊಂದು ಸಂದೇಶ ನೀಡಲಿದ್ದೇವೆ‌. ಈಗ ಶಾಂತರೀತಿಯ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದಕ್ಕೆ ಪ್ರತಿಫಲ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರತರ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀಗಳು ಎಚ್ಚರಿಸಿದರು.
ಅವರವರ ಜಾತಿ, ಜನಾಂಗಗಳನ್ನು ಹೊಗಳಿಕೊಳ್ಳುವುದು ಆಯಾ ಸ್ವಾಮೀಜಿಗಳ, ನಾಯಕರಿಗೆ ಬಿಟ್ಟ ವಿಚಾರ. ನಾವು ಯಾವುದೇ ಹೊಸ ವಸ್ತುವನ್ನು ಕೇಳುತ್ತಿಲ್ಲ. ಬದಲಿಗೆ ಯಥಾಸ್ಥಿತಿಯನ್ನು ಸಂವಿಧಾನಬದ್ಧವಾಗಿ ಕಾಯ್ದುಕೊಳ್ಳಲು ಒತ್ತಾಯಿಸುತ್ತಿದ್ದೇವೆ.ಮೀಸಲಾತಿ ನೀಡುವಿಕೆ ಅಷ್ಟೊಂದು ಸಣ್ಣ ವಿಚಾರವಲ್ಲ. ಅಧ್ಯಯನ ಮಾಡಬೇಕು, ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಬೇಕು.ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒಂದುವೇಳೆ ಪಂಚಮಸಾಲಿಗಳನ್ನು 2ಎಗೆ ಸೇರಿಸಲು ಪ್ರಸ್ತಾವ ಸಲ್ಲಿಸಿದರೆ ಮುಂದೆ ತೀವ್ರತರ ಹೋರಾಟ ನಡೆಸಲಾಗುವುದು ಎಂದು ಶ್ರೀ ಸರಸ್ವತಿ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.

ಭಟ್ಕಳದ ಪುರವರ್ಗದಿಂದ ಪ್ರಾರಂಭವಾದ ಮೆರವಣಿಗೆ ಪೊಲೀಸ್ ಗ್ರೌಂಡನಲ್ಲಿ ಬೃಹತ್ ಸಮಾವೇಶ ನಡೆಯಿತು.ಸುಮಾರು ಹತ್ತುಸಾವಿರ ಜನರು ಸೇರಿದ್ದ ಸಮಾವೇಶದಲ್ಲಿ ಶಾಸಕ ಸುನಿಲ್ ನಾಯ್ಕ,ಮಾಜಿ ಶಾಸಕ ಜೆ.ಡಿ.ನಾಯ್ಕ,ಭೀಮಣ್ಣ ನಾಯ್ಕ ಶಿರಸಿ,ಕೆ.ಜಿ.ನಾಯ್ಕ ಸಿದ್ದಾಪುರ,ಸತ್ಯಜಿತ್ ಸುರತ್ಕಲ್,ಸೂರಜ್ ನಾಯ್ಕ,ಸಂತೋಷ ನಾಯ್ಕ ಮುಂತಾದವರು ಭಾಗವಹಿಸಿದ್ದರು.

ನಂತರ ಭಟ್ಕಳ ಉಪವಿಭಾಗಾಧಿಕಾರಿಯ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

About the author

Adyot

Leave a Comment