ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಳೆದ ಎರಡು ದಿನಗಳ ಹಿಂದೆ ಅಪ್ಪಳಿಸಿದ ತೌಕ್ತೆ ಚಂಡಮಾರುತದಿಂದ ಆಗಿರುವ ಹಾನಿಯ ವೀಕ್ಷಣೆಗೆ ಕಂದಾಯ ಸಚೀವ ಆರ್.ಅಶೋಕ ಮಂಗಳವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ,
ಸದ್ಯದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಮುಂದುವರಿಸುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯವಾಗಿದ್ದು ನಮ್ಮ ನೆರೆಯ ರಾಜ್ಯಗಳಲ್ಲೂ ಲಾಕ್ ಡೌನ್ ಮುಂದುವರಿಸಿದ್ದಾರೆ.
ಕೊವಿಡ್ ಎರಡನೇ ಅಲೆಯ ಲಾಕ್ ಡೌನ್ ಪ್ಯಾಕೇಜ್ ಘೋಷಣೆ ಮಾಡುವುದು,ಲಾಕ್ ಡೌನ್ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳದ್ದೆ ಅಂತಿಮ ನಿರ್ಧಾರ ಎಂದು ಹೇಳಿದರು.
ತೌಕ್ತೆ ಚಂಡಮಾರುತದಿಂದ ಕರ್ನಾಟಕದ ಕರಾವಳಿ ಭಾಗಕ್ಕೆ ಆಗಿರುವ ತೊಂದರೆಗಳನ್ನು ಸಮೀಕ್ಷೆ ಮಾಡುವ ಸಲುವಾಗಿ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸುವ ಸಲುವಾಗಿ ನಾನು ಈ ಸ್ಥಳಗಳಿಗೆ ಭೇಟಿ ಕೊಟ್ಟಿದ್ದು ಕಡಲ್ ಕೊರತೆದಿಂದ ಹಾನಿಗೊಂಡಿರುವ ಮನೆಗಳು ಮತ್ತು ಬೆಳೆಗಳ ಬಗ್ಗೆ ಕೂಡ ಸಮೀಕ್ಷೆ ಮಾಡುವಂತೆ ನಿಯಮಗಳ ಪ್ರಕಾರ ತೊಂದರೆಗೊಳಗಾದ ಜನರಿಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಚಂಡಮಾರುತದ ಪ್ರಭಾವದಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ ಕುಮಟಾ ಹೊನ್ನಾವರ ಭಟ್ಕಳ ತಾಲೂಕಿನಲ್ಲಿ 48 ಗ್ರಾಮ ಬಾಧಿತವಾಗಿದೆ. ಒಟ್ಟು ಎಂಟು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. 107 ಜನ ಗಂಜಿ ಕೇಂದ್ರದಲ್ಲಿ ಇದ್ದು ಭಟ್ಕಳ ತಾಲೂಕಿನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುತ್ತಾನೆ. ಆ ವ್ಯಕ್ತಿಯ ಕುಟುಂಬಕ್ಕೆ 500000/- ರೂ.ಪರಿಹಾರವನ್ನು ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು 176 ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 86 ಮೀನುಗಾರಿಕೆಯ ಬೋಟುಗಳಿಗೆ, 45 ಮೀನುಗಾರಿಕಾ ಬಲೆಗಳಿಗೆ ಹಾನಿಯಾಗಿದೆ. ಕೊಟ್ಟು 3.57 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಹೇಳಿದರು.530 ವಿದ್ಯುತ್ ಕಂಬಗಳು 130 ಟ್ರಾನ್ಸ್ಫಾರ್ಮರ್ ಗಳು ಹಾನಿಯಾಗಿದೆ ಮನೆಯಲ್ಲಿ ನೀರು ನುಗ್ಗಿದ ಜನರಿಗೆ ಎರಡು ದಿನಗಳೊಳಗಾಗಿ ಹತ್ತು ಸಾವಿರ ರೂಪಾಯಿಗಳ ಪರಿಹಾರವನ್ನು
ಭಾಗಶ: ಬಿದ್ದಿರುವ ಮನೆಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಪೂರ್ತಿ ಮನೆ ಬಿದ್ದವರಿಗೆ ಐದು ಲಕ್ಷ ರೂಪಾಯಿಗಳ ಪರಿಹಾರ ಸ್ಥಳ ಪರಿಶೀಲನೆಯ ನಂತರ ಅಧಿಕಾರಿಗಳಿಗೆ ಪರಿಹಾರಕ್ಕೆ ಸಲ್ಲಿಸಲು ಸೂಚಿಸಿದ್ದೇನೆ.ಕಡಲ್ಕೊರೆತದಿಂದ ಹಾನಿ ಉಂಟಾಗಿರುವ ರಸ್ತೆಗಳನ್ನು ಮತ್ತು ಕಡಲ ಕೊರೆತ ತಡೆಯಲು ಹಾಕಿರುವ ಕಲ್ಲುಗಳನ್ನು ಮತ್ತು ತಡೆಗೋಡೆಗಳನ್ನು ಸರಿಪಡಿಸಲಾಗುತ್ತದೆ ಎಂದು ಆರ್ ಅಶೋಕ ಹೇಳಿದರು.
ಕೊವಿಡ್ ಕುರಿತು ಇನ್ನಷ್ಟು ಮಾಹಿತಿ ಹಂಚಿಕೊಂಡ ಸಚೀವರು,
ಮೊಬೈಲ್ ವ್ಯಾನ್ ಗಳ ಮೂಲಕ ವೈದ್ಯಾಧಿಕಾರಿಗಳನ್ನು ಹಳ್ಳಿಗಳಿಗೆ ಕಳಿಸಿ ಅಲ್ಲಿಯ ಜನರನ್ನು ಪರೀಕ್ಷಿಸುವ ಯೋಜನೆ ಮಾಡಲಿದ್ದೆವೆ.ಮೂರನೆಯ ಅಲೆಯ ಕುರಿತು ಈಗಲೇ ತಯಾರಿ ಮಾಡುತ್ತಿದ್ದು ಮಕ್ಕಳ ವೈದ್ಯರು ಗುರುತಿಸುವುದು ಮತ್ತು ಮಕ್ಕಳ ಆಸ್ಪತ್ರೆಗಳನ್ನು ಮತ್ತು ವೈದ್ಯಕೀಯ ಉಪಕರಣಗಳನ್ನು ಔಷಧಗಳನ್ನು ಹೆಚ್ಚಿಸುವಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ ಸಚೀವರು ಟೆಸ್ಟಿಂಗ್ ಕಡಿಮೆ ಮಾಡಿಸಿ ಸರ್ಕಾರ ಕೋರೊನಾ ಕಡಿಮೆಯಾಗುತ್ತಿದೆ ಎಂದು ಪ್ರತಿಪಕ್ಷದವರು ಹೇಳುತ್ತಿದ್ದಾರೆ. ಇದರಲ್ಲಿ ಹುರುಳಿಲ್ಲ ಹಿಂದಿನ ಸಲ ಟೆಸ್ಟಿಂಗ್ ಅನ್ನು ಜನ ಸೇರುವ ಕಡೆಯಲ್ಲ ಮಾಡುತ್ತಿದ್ದೆವು ಆದರೆ ಈಗ ಹೆಚ್ಚಿನ ಜನರು ಸೇರುತ್ತಿಲ್ಲ. ಆ ಕಾರಣದಿಂದ ಆಸ್ಪತ್ರೆಗೆ ಬಂದ ಎಲ್ಲ ಜನರಿಗೆ ಕೊವಿಡ್ ಟೆಸ್ಟ್ ಮಾಡುತ್ತಿದ್ದೇವೆ ಕಾಂಗ್ರೆಸ್ ಪಕ್ಷ 100 ಕೋಟಿ ಕೊವಿಡ್ ಲಸಿಕೆಗೆ ಕೊಡುವುದಾಗಿ ಹೇಳುತ್ತಿದೆ ಅದು ಶಾಸಕರ ಫಂಡ್ ಹಣ ಅದು ಶಾಸಕರ ವಿವೇಚನೆಗೆ ಬಿಟ್ಟ ವಿಷಯವಾಗಿದ್ದರೂ ಕಾಂಗ್ರೆಸ್ ಪಕ್ಷ ಪ್ರಚಾರದ ಆಸೆಗೆ ಹೇಳಿಕೆ ನೀಡುತ್ತಿದೆ.ಕರ್ನಾಟಕ ಸರ್ಕಾರ ತನಗೆ ದೊರೆಯುತ್ತಿರುವ ಸಂಪನ್ಮೂಲಗಳನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿಕೊಂಡು ಕೊರೊನಾ ರೋಗದಿಂದ ಕರ್ನಾಟಕವನ್ನು ಹೊರ ತರಲು ಪ್ರಯತ್ನಿಸುತ್ತಿದೆ ಎಲ್ಲ ರಾಜ್ಯಗಳಲ್ಲೂ ಕೂಡ ಲಾಕ್ಡೌನ್ ನಿಂದ ಕರೋನಾ ಹತೋಟಿಗೆ ಬರುತ್ತಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕೂಡ ಕಡಿಮೆಯಾಗಬಹುದು ಎಂದು ಅಶೋಕ ಹೇಳಿದರು.